ಮುಖಾಂತರ ಅವಲೋಕನ

Author : ನೀರ್ಕಜೆ ತಿರುಮಲೇಶ್ವರ ಭಟ್ (ಎನ್.ಟಿ.ಭಟ್)

Pages 112

₹ 100.00




Year of Publication: 2018
Published by: ಸಾಹಿತ್ಯ ಸುಗ್ಗಿ
Address: ನಂ-40, 1ನೇ ಮುಖ್ಯರಸ್ತೆ, 2ನೇ ಹಂತ, 3ನೇ ಮಹಡಿ, ನಾಗರಬಾವಿ, ಬೆಂಗಳೂರು-560072

Synopsys

‘ಮುಖಾಂತರ ಅವಲೋಕನ' ನಾ. ಮೊಗಸಾಲೆ ಅವರ ಮುಖಾಂತರ ಕಾದಂಬರಿಯ ಕುರಿತ ವಿಮರ್ಶಾ ಕೃತಿ. ಕಾದಂಬರಿ ಕುರಿತಾಗಿ ಅನುವಾದಕ ಎನ್. ತಿರುಮಲೇಶ್ವರ ಭಟ್ ಅವರು ಈ ವಿಮರ್ಶಾತ್ಮಕ ಕೃತಿ ರಚಿಸಿದ್ದಾರೆ. 'ಮುಖಾಂತರ' ಕಾದಂಬರಿಯನ್ನು ಮೊಗಸಾಲೆಯವರ ಅನುಭವ ಕಥನದ ಇನ್ನೊಂದು ಆಯಾಮವಾಗಿ ಪರಿಗಣಿಸುವ ಡಾ ಎನ್.ಟಿ. ಭಟ್ ರ  ಓದು ಮತ್ತು ಒಳನೋಟಗಳು ಕುತೂಹಲಕರವಾಗಿವೆ. ಹಲವು ನೆಲೆಗಳಿಂದ ಕಾದಂಬರಿಯನ್ನು ವಿಶ್ಲೇಷಿಸುವ ಸಾಂಪ್ರದಾಯಿಕ ಕ್ರಮದಿಂದ ಅದರ ವೈಶಿಷ್ಟಗಳನ್ನು ಹಾಗೂ ವಿನ್ಯಾಸವನ್ನು ಓದುಗರ ಅರಿವಿಗೆ ತಂದುಕೊಡುವಲ್ಲಿ ಸಫಲರಾಗಿದ್ದಾರೆ.

ಕಾದಂಬರಿಯನ್ನು ಹೀಗೆ ಶಿಸ್ತುಬದ್ಧವಾಗಿ ಅನುವಾದಿಸಿ, ಪರಿಶೀಲನೆಗೆ ಒಳಪಡಿಸಿದ್ದು, 'ಮುಖಾಂತರ' ಕಾದಂಬರಿಯನ್ನು ಅಧ್ಯಯನಾಸಕ್ತರು ಮಾತ್ರವಲ್ಲ ಸಾಹಿತ್ಯದ ವಿದ್ಯಾರ್ಥಿಗಳೆಲ್ಲ ಓದಬೇಕಾದ ಕೃತಿ, ಅನುವಾದಕರ ಭಾಷೆಯೂ ಸರಳ ವಾಗಿದೆ. 

About the Author

ನೀರ್ಕಜೆ ತಿರುಮಲೇಶ್ವರ ಭಟ್ (ಎನ್.ಟಿ.ಭಟ್)
(15 November 1939)

ಲೇಖಕ ನೀರ್ಕಜೆ ತಿರುಮಲೇಶ್ವರ ಭಟ್ ಅವರು ಮೂಲತಃ ಬಂಟ್ವಾಳ ತಾಲೂಕಿನ ನೀರ್ಕಜೆಯವರು. ತಂದೆ - ನೀರ್ಕಜೆ ಮಹಾಲಿಂಗ ಭಟ್ಟ, ತಾಯಿ - ದೇವಕಿ ಅಮ್ಮ. ವಿಟ್ಲದ ವಿಠಲ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿ, ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಸೈನ್ಸ್ ಓದಿಕೊಂಡರು, ಅದೇ ಕಾಲೇಜಿನಲ್ಲಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸದಲ್ಲಿ ಬಿ.ಎ ಪದವಿ ಪಡೆದರು. 1959ರಲ್ಲಿ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ, ಜರ್ಮನಿಯ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಗ್ರೋಸೆಸ್ ಶ್ಟ್ರಾಖ್ ಡಿಪ್ಲೋಮಾ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ.ಎಸ್.ಬಿ.ಶೋತ್ರಿ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಎಂ.ಜಿ.ಎಂ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ...

READ MORE

Related Books