ಮುಳ್ಳುಬೇಲಿಯ ಹೂಬಳ್ಳಿ

Author : ಕೆ. ಆರ್. ಉಮಾದೇವಿ ಉರಾಳ

Pages 96

₹ 108.00




Year of Publication: 2022
Published by: ನವಕರ್ನಾಟಕ ಪಬ್ಲಿಕೇಷನ್‌

Synopsys

ಮುಳ್ಳುಬೇಲಿಯ ಹೂಬಳ್ಳಿ ಕೆ.ಆರ್‌ ಉಮಾದೇವಿ ಉರಾಳ ಅವರ ಪ್ರಬಂಧ ಸಂಕಲನವಾಗಿದೆ. ಇಲ್ಲಿನ ಲೇಖನಗಳು ಲಲಿತ ಪ್ರಬಂಧಗಳ ಸ್ವರೂಪದವು. ತಾವು ಬದುಕಿನಲ್ಲಿ ಅನುಭವಿಸಿದ ತಮ್ಮ ಕಾಲದ ಅನೇಕ ಅವಿಸ್ಮರಣೀಯ ಘಟನೆಗಳನ್ನು ಲೇಖಕಿ ಉಮಾದೇವಿ ಇಲ್ಲಿ ಮೆಲುಕು ಹಾಕಿದ್ದು, ಕಳೆದುಕೊಂಡ ಆ ಕಾಲದ ಅನೇಕ ಸಾಮಾಜಿಕ ಮೌಲ್ಯಗಳನ್ನು ನಮಗೂ ನೆನಪು ಮಾಡಿಕೊಟ್ಟಿದ್ದಾರೆ. ಕಾಲ ಕಳೆದಂತೆ ಅಥವಾ ಬದಲಾದಂತೆ ಹಲವು ಸಂಸ್ಕೃತಿಗಳೂ ಬದಲಾಗಿ ಆ ಜಾಗಕ್ಕೆ ಹೊಸದಾಗಿ ಬಂದು ಸೇರುವಂಥವು ಎಷ್ಟೋ ಇವೆ. ನಾವೂ ಆದರೊಂದಿಗೆ ಹೆಜ್ಜೆ ಹಾಕಲೇಬೇಕಾದ ಅನಿವಾರ್ಯತೆ ನಮಗೂ ಇದೆ. ಏನೇ ಆದರೂ ಜೀವಿತದಲ್ಲಿ ನಾವು ಗಳಿಸಿದ್ದನ್ನೂ ಕಳೆದುಕೊಂಡಿದ್ದನ್ನೂ ಲೆಕ್ಕ ಹಾಕುತ್ತ ಇನ್ನಷ್ಟು ಪ್ರಬುದ್ಧರಾಗುತ್ತ ಸಾಗುವ ಜೀವನದ ದಾರಿಯೇ ಒಂದು ಆಹ್ಲಾದಕರ ಅನುಭವವೆಂದು ಲೇಖನಗಳಲ್ಲೆಲ್ಲ ವ್ಯಕ್ತವಾಗಿದೆ.

About the Author

ಕೆ. ಆರ್. ಉಮಾದೇವಿ ಉರಾಳ

ಕೆ. ಆರ್. ಉಮಾದೇವಿ ಉರಾಳ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕಮ್ಮರಡಿಯವರು. ಆಂಗ್ಲಭಾಷಾ ಉಪನ್ಯಾಸಕಿಯಾಗಿ, ಮೂವತ್ತೊಂಬತ್ತು ವರ್ಷಗಳ ಸೇವಾವಧಿಯ ನಂತರ ನಿವೃತ್ತಿ. ಓದುವಿಕೆ, ಬರಹ, ಭಾಷಣ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರಿಯ ಪಾತ್ರ. ರಾಜ್ಯದ ಪ್ರಮುಖ ಪತ್ರಿಕೆಗಳು, ಸಂಚಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. "ಮುಂಬೆಳಕಿನ ಮಿಂಚು", "ಮಕ್ಕಳಿಗಿದು ಕಥಾಸಮಯ" ಪ್ರಕಟಿತ ಕೃತಿಗಳು. ಜಾನಪದ ವಿಶ್ವವಿದ್ಯಾಲಯವು ಪ್ರಕಟಿಸಿರುವ ಕರ್ನಾಟಕ ಗ್ರಾಮ ಚರಿತ್ರೆ ಕೋಶದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ನೂರಾರು ಗ್ರಾಮಗಳಲ್ಲಿ ಕ್ಷೇತ್ರಕಾರ್ಯ: ಅವು ವಿವಿಧ ಸಂಕಲನಗಳಲ್ಲಿ ಸೇರ್ಪಡೆಯಾಗಿವೆ. ಕೆಲವು ...

READ MORE

Related Books