ಮೂರು ಕುಲ ಮನ್ನೂರು ಸಾವಿರ ಬಳಗ

Author : ಕೆ. ತಿಮ್ಮಯ್ಯ

Pages 165

₹ 190.00




Year of Publication: 2021
Published by: ಯದುನಂದನ ಪ್ರಕಾಶನ

Synopsys

ಕೆ.ತಿಮ್ಮಯ್ಯ ಅವರ ಈ ಕೃತಿಗೆ ಕಾಡುಗೊಲ್ಲ 'ಮೂರು ಕುಲ ಮುನ್ನೂರು ಸಾವಿರ ಬಳಗ' ಎಂದು ಶೀರ್ಷಿಕೆ ನೀಡಲಾಗಿದೆ. ಕಾರಣವೆಂದರೆ ಇಲ್ಲಿ ಕಾಡುಗೊಲ್ಲ ಸಮುದಾಯದ ಮೂರುಕುಲ, ಮುನ್ನೂರು ಸಾವಿರ ಬಳಗ, ಮೂರುಕಟೆಮನೆ ಇವುಗಳಿಗೆ ಒಳಪಟ್ಟ ಕುಲ, ಬೆಡಗುಗಳ ಬಗೆ ಅತ್ಯಂತ ವಿಸ್ತಾರವಾದ ಅಧ್ಯಯನ ನಡೆಸಲಾಗಿದೆ. ಒಂದೊಂದು ಕುಲ ಹಾಗೂ ಅದು ಒಳಗೊಂಡ ಬೆಡಗು ಉಪಬೆಡಗುಗಳು ಹಾಗೂ ಬೆಡಗುಗಳು ಉಂಟಾದ ಬಗೆ ಒಂದೊಂದು ಕುಲ-ಬೆಡಗುಗಳ ನಡುವಿನ ನೆಂಟತನ. ಅಣ್ಣಮ್ಮತನ, ಹೊಕ್ಕುಬಳಕೆ ಮುಂತಾದುವನ್ನು ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ.

About the Author

ಕೆ. ತಿಮ್ಮಯ್ಯ

ಕೆ. ತಿಮ್ಮಯ್ಯ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಚಿಕ್ಕಬಾಣಗೆರೆಯ ಮೇಗಳಹಟ್ಟಿಯವರು . ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಕನ್ನಡ ಎಂ.ಎ ಪದವಿಯನ್ನು ಪಡೆದ ಅವರು SET ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು.ನಂತರ ‘ಶಿರಾ ತಾಲ್ಲೂಕಿನ ಗ್ರಾಮದೇವತೆಗಳು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ 2004 ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ವೃತ್ತಿ ಬದುಕಿನ ಜೊತೆಗೆ ಪ್ರವೃತ್ತಿಯಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ ಇವರು ಇದುವರೆಗೆ ಇಪ್ಪತೈದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಹಲವಾರು ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ವಿಚಾರ ಸಂಕಿರಣ, ಕಾರ್ಯಗಾರಗಳಲ್ಲಿ ಸಂಶೋಧನಾ ಪತ್ರಿಕೆಗಳನ್ನು ಮಂಡಿಸಿದ್ದಾರೆ. ಅಧ್ಯಕ್ಷತೆ ...

READ MORE

Related Books