ಮುಸಾಫಿರ್

Author : ಸತೀಶ್ ಚಪ್ಪರಿಕೆ

Pages 240

₹ 180.00




Year of Publication: 2016
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11
Phone: 22443996

Synopsys

ಲೇಖಕರು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳ ಸಂಗ್ರಹ ’ಮುಸಾಫಿರ್. ತಮ್ಮನ್ನು ತಾವು ಮುಸಾಫಿರ್(ಅಲೆಮಾರಿ) ಎಂದು ಕರೆದುಕೊಳ್ಳುವ ಲೇಖಕ ಸತೀಶ್ ಚಪ್ಪರಿಕೆ ಅವರು ತಮ್ಮ ಅಲೆಮಾರಿತನದಲ್ಲಿ ಕಂಡ ಸಾಮಾನ್ಯರ ಅಸಮಾನ್ಯ ಬದುಕನ್ನು ಅಷ್ಟೇ ಕೌತುಕ ಹುಟ್ಟುವ ಹಾಗೆ ದಾಖಲಿಸಿದ್ದಾರೆ. ಅಲೆಮಾರಿಗೆ ಸದಾ ಹೊಸದನ್ನ ಕಾಣುವ ಹಂಬಲ, ಮಗುವಿನ ಮುಗ್ಧತೆ, ವಿಜ್ಞಾನಿಯೊಬ್ಬನ ಕುತೂಹಲ, ಬೆರಗುಗಣ್ಣುಗಳಿಂದ ಸಮಾಜವನ್ನ ಕಾಣಬಲ್ಲ ವಿಶೇಷ ಮನಸ್ಥಿತಿ ಇರುತ್ತದೆ, ಸಾಮಾನ್ಯರಿಗೆ ಸಾಮಾನ್ಯವೇ ಎನಿಸುವ ಎಷ್ಟೋ ವಿಚಾರಗಳು ಅಲೆಮಾರಿಯೊಬ್ಬನಿಗೆ ಅಸಮಾನ್ಯವಾಗಿ ಕಾಣುವ ಸಾಧ್ಯತೆಗಳಿರುತ್ತವೆ. ಇಂತಹುದೇ ಅಲೆಮಾರಿತನದಲ್ಲಿ ಲೇಖಕ ತಾನು ಕಂಡ ಅದ್ಭುತಗಳನ್ನ ಇಲ್ಲಿನ ಬರಹಗಳಲ್ಲಿ ನೋಡಬಹುದು. 

ಪ್ರತೀ ಅಂಕಣವೂ ಓದುಗರ ಆಂತರ್ಯವನ್ನು ಕಲಕುವ ಜೊತೆಗೆ ಲೇಖಕನ ಒಳಗೂ ವಿಶೇಷ ಅನುಭೂತಿಯೊಂದನ್ನ ಉಳಿಸುತ್ತ ಹೋಗಿವೆ.  26 ಮಹನೀಯರ ಅಸಮಾನ್ಯ ಕಥೆಗಳನ್ನು ಅಂಕಣಕ್ಕಾಗಿ ಬರೆಯುವ ಲೇಖಕ ಸತೀಶ್ ಚಪ್ಪರಿಕೆಗೆ ಓದುಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. 

“ಕಲ್ಲುಕುಟಿಗರ ಸೀತು: “ಕಳೀನಬಾಗಿಲಿನ ಯಕ್ಷಗನ್ನಡಿ”, ಬನಾರಸ್ ನಲ್ಲೊಬ್ಬ ಬೆಂಗಳೂರಿನ ‘ಭಗವಾನ್’, ಹಿಮಾಲಯದ ಮಡಿಲಲ್ಲಿ ಸಂತನಾದ ಮೈಕ್ರೋಸಾಫ್ಟಿಗ, ಸೇರಿದಂತೆ ಹಲವು ಲೇಖನಗಳು ಗಮನಸೆಳೆಯುತ್ತವೆ. ಇನ್ನೂ ಗೋಧಾವರಿ ಡಾಂಗೆ ಕುರಿತು ಬದುಕು-ಬರಕ್ಕೆ ಸಡ್ಡು ಹೊಡೆದ ಮರಾಠವಾಡದ ಮಹಾಮಾತೆ ಮತ್ತು ಬೆಜವಾಡ ವಿಲ್ಸನ್ ಕುರಿತಾದ ಕರ್ಮಯೋಗಿಗಳ ಪಾಲಿನ ಜೀವದಾತ ಎಂಬ ಬರಹಗಳು ಜನಮನ ಗೆದ್ದಿದ್ದಿವಲ್ಲದೆ, ಈ ಲೇಖನಗಳಿಂದಾಗಿ ಹಲವು ಮಹನೀಯರಿಗೆ ಪ್ರಶಸ್ತಿ ಪುರಷ್ಕಾರಗಳು ಲಭಿಸಿರುವುದು ವಿಶೇಷ.

About the Author

ಸತೀಶ್ ಚಪ್ಪರಿಕೆ

ಪತ್ರಕರ್ತ, ಲೇಖಕ, ಕಾದಂಬರಿಕಾರ ಸತೀಶ್ ಚಪ್ಪರಿಕೆ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಚಪ್ಪರಿಕೆಯವರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಅವರು, ತಂದೆಯ ಹೋಟೆಲ್ ಉದ್ಯಮದಿಂದ ಬೆಂಗಳೂರಿಗೆ ಬಂದು ನೆಲಸಿದರು. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ‘ಬ್ರಿಟಿಷ್  ಶಿವ್ನಿಂಗ್ ಸ್ಕಾಲರ್‌ಷಿಪ್’ ಪಡೆದ ಏಕೈಕ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ  ಸತೀಶ್ ಲಂಡನ್‌ನ ವೆಸ್ಟ್ ಮಿನಿಸ್ಟರ್  ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಉನ್ನತ ವ್ಯಾಸಂಗ ಮಾಡಿದ್ದಾರೆ. ಸಸ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೇವಲ ಬರವಣಿಗೆಯ ಶಕ್ತಿಯಿಂದಲೇ ‘ಪ್ರಜಾವಾಣಿ’ ದಿನಪತ್ರಿಕೆ ಸೇರಿ, ಅಲ್ಲಿ ಪತ್ರಕರ್ತ ಜೀವನ ಆರಂಭಿಸಿದ ಅವರು ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ಸೇವೆ ...

READ MORE

Related Books