ಮ್ಯಾಸ ಮಂಡಲ

Author : ಮೀರಾಸಾಬಿಹಳ್ಳಿ ಶಿವಣ್ಣ

Pages 152

₹ 80.00




Year of Publication: 2009
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಮ್ಯಾಸ ಬ್ಯಾಡ ಎಂಬ ಬುಡಕಟ್ಟು ಸಮುದಾಯದ ಸಂಪೂರ್ಣ ಒಳನೋಟವನ್ನು ಈ ಕೃತಿಯೂ ಕಟ್ಟಿಕೊಡುತ್ತದೆ. ವ್ಯಾಪಕ ಕ್ಷೇತ್ರ ಕಾರ್ಯಗಳ ಅಧ್ಯಯನದಿಂದ ಈ ಕೃತಿ ಸಾಧ್ಯವಾಗಿವೆ. ಜಾನಪದ ಮತ್ತು ಬುಡಕಟ್ಟು ಸಂಸ್ಕೃತಿ ಚಿಂತಕರಾದ “ಡಾ. ಮೀರಾಸಾಬಿಹಳ್ಳಿ ಶಿವಣ್ಣ”ನವರ ಬರಹದಲ್ಲಿರುವ ಜೀವಂತಿಕೆ ಮತ್ತು ಸೂಕ್ಷ್ಮ ವಿಮರ್ಶನ ದೃಷ್ಟಿಗಳು ಓದುಗರಿಗೆ ಹೊಸತರವನ್ನು ಪರಿಚಯಿಸುತ್ತದೆ. ಈ ಬರಹಗಳ ಕಟ್ಟು ನಮ್ಮ ನೆಲದ ಕನ್ನೆಭಾಗವನ್ನೂ, ಅದರ ಒಡಲಿನ ತಾಪವನ್ನೂ ವಿವರಿಸುತ್ತದೆ.

ಮ್ಯಾಸಮಂಡಲ- ಮೀರಾಸಾಬಿಹಳ್ಳಿ ಶಿವಣ್ಣ ಅವರು ರಚಿಸಿದ ಸಮುದಾಯ ಆಧಾರಿತ ವಿಮರ್ಶೆಗಳ ಸಂಕಲನ. ನಿಗದಿತ ಭೌಗೋಳಿಕ ವ್ಯಾಪ್ತಿಯೊಳಗೆ ಬದುಕುತ್ತಿರುವ ಕಾಡುಗೊಲ್ಲರು. ಕುಂಚಿಟಗರನ್ನು ಕುರಿತು ಒಂದೆರಡು ಲೇಖನಗಳಲ್ಲದೆ, ಈ ನೆಲದ ಸಾಂಸ್ಕೃತಿಕ ಮಹತ್ವವನ್ನು ಸಾರುವ ಕಲಾವಿದರು ಹಾಗೂ ಜನಪದ ಕಾವ್ಯ ಪ್ರಕಾರಗಳನ್ನು ಕುರಿತು ತಾತ್ವಿಕವಾಗಿ ಚಿಂತಿಸುವ ಲೇಖನಗಳು ಒಳಗೊಂಡಿವೆ.

ನಾಯಕ ಜನಾಂಗ-ಒಂದು ನೋಟ, ಮೊಳಕಾಲ್ಮೂರು ತಾಲ್ಲೂಕಿನ ಜಾನಪದ ನೆಲೆಗಳು, ಪಶುಪಾಲಕ ಮ್ಯಾಸ ಬೇಡರು, ನಾಯಕನ ಹಟ್ಟಿ ಪಾಳೆಗಾರರ ವಂಶಾವಳಿ-ಒಂದು ಪರಿಶೀಲನೆ, ನಾಯಕನ ಹಟ್ಟಿ ಪಾಳೆಯಗಾರನ ಕಾಲದ ನ್ಯಾಯಾಡಳಿತ, ಜಾನಪದ ನೆಲೆಯಲ್ಲಿ ಹಟ್ಟಿ ಜಾತ್ರೆ, ಜನಪದ ಸಾಹಿತ್ಯದಲ್ಲಿ ‘ಮದಕರಿ’ಪಾಳೆಗರರು, ಪಾಳೇಗಾರ ವೇಷ, ಚಿತ್ರದುರ್ಗ ಜಿಲ್ಲೆಯ ಜನಪದ ವೀರರು, ಚಳ್ಳಕೆರೆ ತಾಲ್ಲೂಕಿನ ಸಾಂಸ್ಕೃತಿಕ ಮಹತ್ವದ ತಾಣಗಳು, ಒಂದು ರೋಚಕ ಜನಪದ ಸಂಪ್ರದಾಯ-ಕಳಶ ಕೀಳೋದು, ತರಿಮರ, ಕುರುಬ ಮೂಲದ ಕುಂಚಿಟಿಗರ ಸಾಂಸ್ಕೃತಿಕ ವೀರ, ಚೌಡಿಕೆರಾಣಿ ಉಚ್ಚಂಗಮ್ಮ,ಕತೆಗಳ ಕಣಜ-ಈರಬಡಪ್ಪ, ಗಡಿನಾಡಿನ ಜನಪದ ಕಾವ್ಯ ಪ್ರಕಾರಗಳು, ಬುದಕಟ್ಟು ಅಭಿವೃದ್ಧಿ-ಒಂದು ಚಿಂತನೆ ವಿಷಯಗಳ ಕುರಿತು ಮಾಹಿತಿ ಒಳಗೊಂಡಿದೆ.

About the Author

ಮೀರಾಸಾಬಿಹಳ್ಳಿ ಶಿವಣ್ಣ

ಚಿತ್ರದುರ್ಗ ಜಿಲ್ಲೆಯ ಆಂಧ್ರಗಡಿಯಂಚಿನ ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿಯವರಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣ (1952) ಜಾನಪದ ವಿದ್ವಾಂಸರು. ಮೀರಾಸಾಬಿಯಳ್ಳಿಯ ಪಟೇಲರಾದ ಪಟೇಲ್ ಬೊಮ್ಮೇಗೌಡ  ಅವರ ತಂದೆ. ಕರಿಯಮ್ಮ ತಾಯಿ. ಕೃಷಿಕ ಕುಟುಂಬದಲ್ಲಿ ಜನಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಬಿ.ಎ. (ಆನರ್) (1972). ಎಂ.ಎ. (1974) ಪದವಿ ಪಡೆದವರು. ಮೈಸೂರು ವಿಶ್ವವಿದ್ಯಾನಿಲಯದಿಂದ “ಕಾಡುಗೊಲ್ಲರ ಇಬ್ಬರು ಸಾಂಸ್ಕತಿಕ ವೀರರು (ಎತ್ತಪ್ಪ-ಮುಂಜಪ)- ಒಂದು ಅಧ್ಯಯನಕ್ಕಾಗಿ ಪಿಎಚ್.ಡಿ (1996) ಪದವಿ ದೊರೆಯಿತು. ಎರಡು ಬಾರಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ (1984-1987 ಮತ್ತು 1998-2001) ಸೇವೆ ಸಲ್ಲಿಸಿರುವ ಅವರಿಗೆ ಜಾನಪದ ಕ್ಷೇತ್ರಕಾರ್ಯಕ್ಕಾಗಿ ಜಿ.ಶಂ.ಪ ಜಾನಪದ ತಜ್ಞ ಪ್ರಶಸ್ತಿ' (2011) ನೀಡಿ ...

READ MORE

Reviews

ಹೊಸತು -ಜನವರಿ-2005

ಒಂದು ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ತಿಳಿಸುವ ಸಂಶೋಧನ ಲೇಖನಗಳು. ಮೂಲದಲ್ಲಿ ಮ್ಯಾಸಬೇಡರು ಬೇಟೆ ಸಂಸ್ಕೃತಿಯವರಾದರೂ ಅವರ ಆಚರಣೆಗಳು ಮತ್ತು ಜೀವನಕ್ಕೆ ಸಂಬಂಧಿಸಿದ ದಾಖಲೆಗಳು ಕಾಡುಗೊಲ್ಲರ ಸಂಸ್ಕೃತಿಗೆ ತುಂಬ ಹತ್ತಿರವಿದ್ದುವು. ಕ್ಷೇತ್ರ ಕಾರ್ಯಗಳ ಮೂಲಕ ಸಾಕಷ್ಟು ಮಾಹಿತಿಯನ್ನು ಕಲೆಹಾಕಿದ ಲೇಖಕರು ಮ್ಯಾಸಬೇಡರನ್ನು ಪಶುಪಾಲನಾ ವೃತ್ತಿಯಲ್ಲಿ ಪಳಗಿದವರೆಂದು ಗುರುತಿಸಿದ್ದಾರೆ. ಪ್ರಾಚೀನ ಬುಡಕಟ್ಟು ಜನಾಂಗಗಳು ಕ್ರಮೇಣ ವೃತ್ತಿ ಉಪವೃತ್ತಿಗಳೊಂದಿಗೆ ಇತರ ಪಂಗಡಗಳ ಜೊತೆ ಬೆರೆಯುತ್ತಾ ಹೊಸ ಹೊಸ ಸಂಸ್ಕೃತಿಗಳನ್ನು ನಿರ್ಮಾಣ ಮಾಡುತ್ತಾ ಸಾಗುತ್ತವೆ. ಹಾಗೆ ನೋಡಿದರೆ ಬೇಟೆಯೆಂಬುದು ಒಂದು ಮೂಲ ಮಾನವನ ಹೊಟ್ಟೆಪಾಡಿನ ವೃತ್ತಿಯೇ ಆಗಿತ್ತು. ನಮ್ಮ ನೆಲದ ಪದರು ಪದರುಗಳಲ್ಲೂ ಇಳಿದ ಜನಪದೀಯ ಬೇರುಗಳನ್ನು ಪರಿಚಯಿಸುತ್ತಿರುವ ಲೇಖಕರು ಅಭಿನಂದನಾರ್ಹರು.

Related Books