ಮ್ಯಾಸನಾಯಕರ ಬುಡಕಟ್ಟಿನ ಆಚರಣೆಗಳು

Author : ನಾಗೇಶ ಎಂ.

Pages 148

₹ 150.00
Year of Publication: 2020
Published by: ತಾರ ಪ್ರಿಂಟ್ಸ್
Address: ರಾಮಾಂಜು ರೋಡ್, ಮೈಸೂರು.

Synopsys

ಮ್ಯಾಸನಾಯಕ ಬುಡಕಟ್ಟಿನ ಆಚರಣೆಗಳು- ಡಾ. ನಾಗೇಶ ಎಂ. ಅವರ ಕೃತಿ. ವಿಷಯವನ್ನು ಎರಡು ಪ್ರಮುಖ ವಿಭಾಗಗಳಾಗಿ  ಅಂದರೆ ಜೀವನಾವರ್ತಕ ಆಚರಣೆಗಳು ಹಾಗೂ ವಿಶೇಷ ಹಬ್ಬಾಚರಣೆಗಳು ಎಂದು ವರ್ಗೀಕರಿಸಲಾಗಿದೆ. ಜೀವನಾರ್ತಕ ಆಚರಣೆಗಳಲ್ಲಿ ಹುಟ್ಟಿನಿಂದ ಸಾವಿನವರೆಗಿನ ವಿವಿಧ ಹಂತಗಳಲ್ಲಿ ನಡೆಸುವ ಆಚರಣೆಗಳ ಬಗೆಗೆ ತಿಳಿಸುವ ಮೂಲಕ ಆ ಸಮುದಾಯದ ಆಚರಣೆಗಳಲ್ಲಿನ ಪಾರಂಪರಿಕ ಜ್ಞಾನಪದ್ಧತಿಗಳ ಬಗ್ಗೆ ವಿಶ್ಲೇಷಣಾತ್ಮಕವಾಗಿ ವಿವರಿಸಲಾಗಿದೆ. ಲಿಂಗ ತಾರತಮ್ಯವಿಲ್ಲದ ಬುಡಕಟ್ಟಿನ ಸಾಮಾಜಿಕ ವ್ಯವಸ್ಥೆ, ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆ ಆಚರಣೆ, ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಬಗೆ, ಬುಡಕಟ್ಟು ರಕ್ತಸಂಬಂಧಕ್ಕೆ ಸಂಬಂಧಿಸಿದಂತೆ ಸೋದರ ಅತ್ತೆ ಹಾಗೂ ಸೋದರ ಮಾವಂದಿರ ಪಾತ್ರ ಆಚರಣೆಗಳ ಸಂದರ್ಭದಲ್ಲಿ ಪಾರಂಪರಿಕ ಆಹಾರ ಪದ್ಧತಿ ಹಾಗೂ ವೈದ್ಯಪದ್ಧತಿಗಳ ಬಗೆಗೆ ತಿಳಿಸಲಾಗಿದೆ.  ಸಾವಿನ ಸಂದರ್ಭದ ಆಚರಣೆಗಳು ಇಂದಿಗೂ ಪ್ರಾಚೀನ ಮಾನವರ ಶವಸಂಸ್ಕಾರ ಕ್ರಮವನ್ನೇ ಸೂಚಿಸುವಂತಿದೆ. ಜೀವನಾವರ್ತಕ ಆಚರಣೆಗಳಲ್ಲಿ ಮ್ಯಾಸಬೇಡ ಬುಡಕಟ್ಟಿನ ಪಶುಪಾಲಕ ಕಿಲಾರಿಗಳ ಭಾಗವಹಿಸುವಿಕೆ ಅತ್ಯಂತ ಮಹತ್ವದ್ದಾಗಿ ಕಂಡುಬರುತ್ತದೆ.

About the Author

ನಾಗೇಶ ಎಂ.
(18 July 1985)

ಲೇಖಕ ಡಾ. ನಾಗೇಶ ಎಂ ಅವರು ಬಳ್ಳಾರಿ ಜಿಲ್ಲೆಯ ಕೋಡ್ಲಿಗಿ ತಾಲೂಕಿನ ಲೋಕಿಕೆರೆ ಗ್ರಾಮದವರು. ಸ್ವ ಗ್ರಾಮದಲ್ಲಿ  ಪ್ರೌಢಶಾಲೆ ಶಿಕ್ಷಣ ಹಾಗೂ ಪಿಯುಸಿ, ಪದವಿಯನ್ನು ಖಾನ ಹೊಸಹಳ್ಳಿಯಲ್ಲಿ , ಹಾಗೂ ಕೂಡ್ಲಿಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಹಂಪಿಯ ಕನ್ನಡ ವಿ.ವಿ.ಯಲ್ಲಿ 'ಹಕ್ಕಿ-ಪಿಕ್ಕಿ ಸಮುದಾಯದ ಸಾಮಾಜಿಕ ಬದಲಾವಣೆ' ಎಂಬ ವಿಷಯವಾಗಿ ಎಂ.ಫಿಲ್ ಹಾಗೂ 'ಕಂಪಳದೇವರ ಹಟ್ಟಿಯ ಜ್ಞಾನ ಪರಂಪರೆ' ವಿಷಯವಾಗಿ ಪಿಎಚ್ ಡಿ ಪಡೆದರು.  'ಮ್ಯಾಸನಾಯಕ ಬುಡಕಟ್ಟಿನ ಅಚರಣೆಗಳು' ಇವರ ಮೊದಲ ಕೃತಿ. ಆನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ  ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ. ...

READ MORE

Related Books