ಹಿರಿಯ ಸಾಹಿತಿ ನಾ. ದಾಮೋದರ ಶೆಟ್ಟಿಯವರ 'ಕರಿಮಾಯಿ ಗುಡ್ಡ' ಕಾದಂಬರಿ ಸಾಂಸಾರಿಕ, ಸಂಶೋಧನಾತ್ಮಕ ಹಾಗೂ ಪತ್ತೇದಾರಿಯ ಗುಣಗಳನ್ನು ಹೊಂದಿದೆ. ಆಧುನಿಕ ಬದುಕಿಗೆ ಸಮೀಪವಾದ ಕಥಾವಸ್ತುವನ್ನೊಳಗೊಂಡಿದ್ದು ರೋಚಕ ತಿರುವುಗಳಿಂದ ಕೂಡಿ, ಕುತೂಹಲ ಕೆರಳಿಸುತ್ತ ಸಾಗುವ ಕಾದಂಬರಿ ಚೇತೋಹಾರಿ ಶೈಲಿಯಿಂದ ಕೂಡಿದೆ. ఇంగ్లిಷ್ ಸಾಹಿತ್ಯದಲ್ಲಿ ಇರಬಹುದಾದ ಇಂಥ ಕಥಾನಕಗಳು ಕನ್ನಡದಲ್ಲಿ ಅಪರೂಪ. ಎಸ್ಟೇಟ್ ಮಧ್ಯದ ಸಿರಿವಂತರ ಬದುಕಿನ ನಿಗೂಢ ಘಟನೆಯೊಂದನ್ನು ನಾದಾ ಅವರು ರೋಚಕವಾಗಿ ಹೆಣೆದಿದ್ದಾರೆ. ಎಸ್ಟೇಟು ಬಂಗಲೆಯಲ್ಲಿ ನಡೆಯುವ ಈ ಕಥೆಯು ಪ್ರೀತಿ, ದ್ವೇಷ, ಅಸೂಯೆ, ವಂಚನೆ ಮುಂತಾದ ಹಲವು ಭಾವಗಳ ಸಮ್ಮಿಲನವಾಗಿದೆ. ವಿನಾಕಾರಣ ಕೊಲೆಯಾಗುವ ಓರ್ವ ಅಮಾಯಕ ಹೆಣ್ಣಿನ ಮನಸ್ಸನ್ನು ಅರ್ಥೈಸಲಾಗದೆ ಆಕೆಯ ಭಾವನೆಗಳ ಮೌಲ್ಯವನ್ನು ತಿಪ್ಪೆಗೆಸೆಯುವ ಕ್ರೌರ್ಯ ತಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ವರ್ತಿಸುವ ಪುರುಷ ಸಮಾಜವನ್ನು ಈ ಕಾದಂಬರಿ ನಿಕಷಕ್ಕೊಡ್ಡುತ್ತದೆ. ಕೊಡಗಿನ ಪ್ರಾಕೃತಿಕ ರಮಣೀಯತೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವುದು ಈ ಕಾದಂಬರಿಯ ಮತ್ತೊಂದು ವಿಶೇಷ. ಕರಾವಳಿ ತೀರದ ನಾದಾ ಅವರ ಈ ಕಾದಂಬರಿ ಕನ್ನಡ ಸಾರಸ್ವತ ಲೋಕಕ್ಕೆ ಒಂದು ಅನುಪಮ ಕೊಡುಗೆ
ನಟ, ನಾಟಕಕಾರ, ಸಾಹಿತಿ ನಾ. ದಾಮೋದರ ಶೆಟ್ಟಿ ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಾದ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಪಡೆದರು. ಆನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಡಾ. ಶ್ರೀನಿವಾಸ ಹಾವನೂರರ ಮಾರ್ಗದರ್ಶನದಲ್ಲಿ ‘ಮುದ್ದಣನ ಶಬ್ದ ಪ್ರತಿಭೆ’ ಮಹಾಪ್ರಬಂಧ ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. 1975ರಲ್ಲಿ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಕನ್ನಡವಿಭಾಗದ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಅವರು 36 ವರ್ಷಗಳ ದೀರ್ಘಸೇವೆಯ ನಂತರ 2011ರಲ್ಲಿ ನಿವೃತ್ತಿಯಾಗಿದ್ದಾರೆ. ಚಿಕ್ಕಂದಿನಿಂದಲೇ ನಾಟಕ, ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಕೇರಳದ ತ್ರಿಶೂರಿನ ಸ್ಕೂಲ್ ಆಫ್ ...
READ MORE