ನಾಡಿ ಮಿಡಿತದ ದಾರಿ

Author : ಶಿವಾನಂದ ಕುಬಸದ

Pages 160

₹ 130.00




Year of Publication: 2019
Published by: ನೀಲಿಮಾ ಪ್ರಕಾಶನ
Address: ನಂ.208, 2ನೇ ಮಹಡಿ, ಸರಸ್ವತಿ ಬಿ 2 ಬ್ಲಾಕ್‌, ಬಿಡಿಎ ಅಪಾರ್ಟ್‌‌ಮೆಂಟ್ಸ್‌, ಮೈಲಸಂದ್ರ, ಕೆಂಗೇರಿ, ಬೆಂಗಳೂರು
Phone: 9900818744

Synopsys

ಆಸ್ಪತ್ರೆ ನೋಡದೇ ಇರುವವರು ಯಾರಿಲ್ಲ. ನಮ್ಮ ಆರೋಗ್ಯದಲ್ಲಿ ಚಿಕ್ಕಪುಟ್ಟ ವ್ಯತಯವಾದರೂ ಆಸ್ಪತ್ರೆಗೆ ಓಡಿ ಹೋಗುತ್ತವೆ. ಹೀಗೆ ಪ್ರತಿದಿನ ಲಕ್ಷಾಂತರ ಜನರು ಆಸ್ಪತ್ರೆ ಮೆಟ್ಟಿಲು ಹತ್ತುವುದು ಸರ್ವೇ ಸಾಮಾನ್ಯ. ನಾಡಿ ಮಿಡಿತದ ದಾರಿ ವೈದ್ಯ ಲೋಕದ ಅನುಭವಗಳ ಕಥನವಾಗಿರುವುದರಿಂದ ನಾನಾ ಬಗೆಯ, ನಾನಾ ವಿಷಯಗಳನ್ನು ತೆರೆದಿಡುವ ಮಹತ್ತರ ಕೃತಿ ಎಂದರೆ ತಪ್ಪಾಗಲಾರದು. 

ವೃತ್ತಿಯಲ್ಲಿ ವೈದ್ಯರಾಗಿರುವ ಶಿವಾನಂದ ಕುಬುಸದ ಅವರ ವೈದ್ಯ ಲೋಕದ ಅನುಭವ ಮತ್ತು ಅನುಭಾವಗಳ ಪರಿಚಯ ನಾಡಿ ಮಿಡಿತದ ದಾರಿ. ರೋಗಿಗಳೊಂದಿಗಿನ ಒಡನಾಟ, ಅವರ ಬದುಕು, ಕಷ್ಟಗಳು, ಆರೋಗ್ಯ ಇವೆಲ್ಲದರ ಕುರಿತು ತಾನು ನೋಡಿದ ವಿಷಯಗಳನ್ನು, ಅನುಭವಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ತನ್ನ ಸುತ್ತ ಇರುವವರನ್ನು ಅಗಾಧವಾಗಿ ನಂಬುವುದು, ಪ್ರೀತಿಸುವುದು, ಸಂತೋಷವಾಗಿರುವುದು, ಇಂತಹ ಹಲವಾರು ವಿಷಯಗಳು ಇವರ ಕೃತಿಯಲ್ಲಿ ನೆಲೆಗೊಂಡಿವೆ. ತಂತ್ರಜ್ಞಾನ ಬದಲಾದಂತೆ ತನ್ನ ವೃತ್ತಿಯಲ್ಲಾದ ಬದಲಾವಣೆಗಳ ಕುರಿತು ಲೇಖಕರು ವಿವರಿಸಿದ್ದಾರೆ. 

ವೃತ್ತಿ ಸಾರ್ಥಕ್ಯದ ಆ ದಿನ, ಆ ರೋಗಿಯೊಳಗೆ, ಇದ್ದನೊಬ್ಬ ಯೋಗಿ, ಜೀವ ಉಳಿಸಿತು ಅವ್ವನ ನೆನಪು, ಎಂದೂ ಮರೆಯದ ಪಾಠಗಳು, ಮನಸ್ಸನ್ನು ಕಲಕಿತು ಕೈ ಮೇಲಿನ ಆ ಹೆಸರು, ಆಸ್ಪತ್ರೆಯೆಂಬ ಸುರಕ್ಷಾ ತಂಗುದಾಣ, ಕ್ಯಾನ್ಸರ್‌ನೊಡನೆ ಸೆಣೆಸುತ್ತಲೇ ರೋಗಿಗಳ ಸೇವೆ ಮಾಡಿದವಳು, ಅಪ್ಪನೆಂಬ ಹೊರೆ ಇಳಿಸಿದವರು, ಕಥೆ ಬರೆಯುವವನೊಬ್ಬ ಕಥೆಯಾಗಿಬಿಟ್ಟ, ಮಡದಿಯೆಂಬ ಮಹಾಗುರು ಮುಂತಾದ ಹಲವಾರು ಅಧ್ಯಾಯಗಳು ಈ ಕೃತಿಯಲ್ಲಿವೆ. ಇಲ್ಲಿನ ಪ್ರತಿ ಅಧ್ಯಾಯವು ನಮ್ಮ ಕಣ್ಣ ಮುಂದೆ ನಡೆದ ಘಟನೆಗಳು ಎನ್ನಿಸಿದರೂ ತಪ್ಪೇನಿಲ್ಲ.

About the Author

ಶಿವಾನಂದ ಕುಬಸದ

ವೃತ್ತಿಯಲ್ಲಿ ವೈದ್ಯರಾಗಿರುವ ಬರಹಾಸಕ್ತರಾದ ಶಿವಾನಂದ ಮಹಾಗುಂಡಪ್ಪ ಕುಬಸದ ಅವರು ಜನಿಸಿದ್ದು 1957 ಆಗಸ್ಟ್‌ 11ರಂದು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮುಳವಾಡ ಇವರ ಹುಟ್ಟೂರು. ಪ್ರಸ್ತುತ ಮುಧೋಳದ ಕುಬಸದ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.  ಕಾಲೇಜು ದಿನಗಳಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಕನ್ನಡದ ವಿವಿಧ ದಿನಪತ್ರಿಕೆ, ಹಾಗೂ ನಿಯತಕಾಲಿಕೆಗಳಿಗೆ ವೈದ್ಯಕೀಯ ಲೋಕದ ಲೇಖನಗಳನ್ನು ಬರೆದಿದ್ದಾರೆ. ಗಿಲೋಟಿನ್‌ (ಪ್ರವಾಸ ಕಥನ), ಇಷ್ಟು ಮಾಡಿದ್ದೇನೆ (ಕವನ ಸಂಕಲನ), ನಾಡಿ ಮಿಡಿತದ ದಾರಿ (ವೈದ್ಯ ಲೋಕದ ಅನುಭವ ಕಥನಗಳು) ಇವರ ಪ್ರಮುಖ ಕೃತಿಗಳು.   ...

READ MORE

Related Books