ನಾಡು ನುಡಿ ಲಾಕುಳಶೈವ ಇತಿಹಾಸ

Author : ಎಂ. ಧ್ರುವನಾರಾಯಣ

Pages 204

₹ 150.00




Year of Publication: 2010
Published by: ಅನಂತ ಪ್ರಕಾಶನ
Address: ನಂ. 103/ಎ, 3ನೇ ಮುಖ್ಯರಸ್ತೆ, 2ನೆ ಷಾಪ್ ಲೈನ್, ಟಾಟಾ ಸಿಲ್ಕ್ ಫಾರಂ ಬಸವನಗುಡಿ , ಬೆಂಗಳೂರು - 560004

Synopsys

ಸಾಹಿತಿ, ಸಂಶೋಧಕ, ಸ್ವಾತಂತ್ಯ್ರ ಹೋರಾಟಗಾರರಾದ ಕಪಟರಾಳ ಕೃಷ್ಣರಾಯರು ಕನ್ನಡ ಭಾಷೆ ಮತ್ತು ಸಂಸ್ಕೃತಿ, ಸಂಶೋಧನೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟವರು.

ಕರ್ನಾಟಕದ ಧಾರ್ಮಿಕ ರಂಗದಲ್ಲಿ 11-12 ನೆಯ ಶತಮಾನಗಳ ಕನ್ನಡ ಶಿಲಾಲೇಖಗಳಲ್ಲಿ ಕಂಡು ಬಂದಿರುವ  ಲಾಕುಳಶೈವರ ಬಗೆಗಿನ ಪ್ರಮುಖವಾದ ಉಲ್ಲೇಖಗಳು ಈ ಕೃತಿಯಲ್ಲಿ ದೊರೆಯುತ್ತವೆ. ಕರ್ನಾಟಕದಲ್ಲಿ ಲಾಕುಳಶೈವರ ಆಗಮನದ ಪ್ರಚಾರದ ಅವಶೇಷಗಳು ಶಿಲ್ಪದಲ್ಲಿ ಕಂಡ ಬಗ್ಗೆ, ಐಹೊಳೆ, ಪಟ್ಟದಕಲ್ಲು ಇತ್ಯಾದಿ ಸ್ಥಳಗಳಲ್ಲಿ ಆ ಕುರುಹುಗಳನ್ನು ಈಗಲೂ ಕಾಣಬಹುದಾದ ವಿವರಗಳನ್ನು ಕಪಟರಾಳರು ಪುಸ್ತಕದಲ್ಲಿ ಒದಗಿಸಿದ್ಧಾರೆ. 

ಕಪಟರಾಳ ಕೃಷ್ಣರಾಯರ ಮನೆತನದ ಇತಿಹಾಸ, ಮತ್ತು ಅವರನ್ನು ಕುರಿತಂತೆ ಮಹನೀಯರ ಅಭಿಪ್ರಾಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಮತ್ತು ಮುಖ್ಯವಾಗಿ ಕನ್ನಡ ನಾಡು-ನುಡಿಯ ಇತಿಹಾಸವನ್ನು ವಿವರಿಸಿದ್ಧಾರೆ. ಕಪಟರಾಳ ಕೃಷ್ಣರಾಯರು ತಮ್ಮ ಆಳವಾದ ಅಧ್ಯಯನದಿಂದ ಸುಮಾರು 30 ಕ್ಕೂ ಅಧಿಕ ಲೇಖನಗಳನ್ನು ಬರೆದಿದ್ಧಾರೆ. ಪುಸ್ತಕದಲ್ಲಿ ದಾಖಲಾದ  ಸಂಪೂರ್ಣ ಅಧ್ಯಯನ ಸಾಮಗ್ರಿಯನ್ನು ನೋಡಿದಾಗ ಕಪಟರಾಳರ ವಿದ್ವತ್ತಿನ ಪರಿಚಯವಾಗುತ್ತದೆ. 

ಕಪಟರಾಳರ ಬದುಕು ಬರಹ ಕುರಿತು ಪ್ರೊ. ಧ್ರುವನಾರಾಯಣ ಅನೇಕ ಕೃತಿಗಳನ್ನು ಹೊರತಂದಿದ್ದರು ಅದರ ಭಾಗವಾಗಿ ’ನಾಡು ನುಡಿ ಲಾಕುಳಶೈವ ಇತಿಹಾಸ’ವನ್ನು ಪ್ರಕಟಿಸಿದ್ದಾರೆ.  

About the Author

ಎಂ. ಧ್ರುವನಾರಾಯಣ
(01 July 1929)

ಹಿರಿಯ ವಿದ್ವಾಂಸ ಎಂ. ಧ್ರುವನಾರಾಯಣ ಅವರು ಜನಿಸಿದ್ದು ನಾರಾಯಣದೇವರಕೆರೆಯಲ್ಲಿ. ರಾಯಚೂರಿನ ಪಂಡಿತ್‌ ತಾರಾನಾಥ ವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ ಅವರು ನಿವೃತ್ತರಾಗಿ ಬೆಂಗಳೂರು ನಿವಾಸಿಯಾಗಿದ್ದಾರೆ.  ಜೀವನ ಚರಿತ್ರೆ ಅನುವಾದ ಕ್ಷೇತ್ರಗಳಲ್ಲದೆ ಪಠ್ಯ ಪುಸ್ತಕ ರಚನೆ ಮಾಡಿದ್ದಾರೆ. ರಾವ್ ಬಹದ್ದೂರ್, ಪಂಡಿತ ತಾರಾನಾಥ, ಹನುಮಂತಗೌಡ (ಜೀವನ ಚರಿತ್ರೆ), ಡಾ. ಬಾಬಾ ಸಾಹೇಬ ಅಂಬೇಡ್ಕರರ ಬರಹಗಳು, ವಿಜಯನಗರ ಕಾಲದಲ್ಲಿನ ನೀರಾವರಿ ವ್ಯವಸ್ಥೆ (ಅನುವಾದ), ಭಾರತದ ಸಂವಿಧಾನ, ರಾಜ್ಯ ಶಾಸ್ತ್ರ ಮೀಮಾಂಸಕರು, ಸಾರ್ವಜನಿಕ ಆಡಳಿತ (ಪಠ್ಯ ಪುಸ್ತಕಗಳು). ಪಂಡಿತ್‌ ತಾರಾನಾಥ ಅವರ ಸಮಗ್ರ ಕೃತಿಗಳನ್ನು ಸಂಪಾದಿಸಿದ ಹಿರಿಮೆ ಅವರದು. ...

READ MORE

Related Books