ನಾಗಾಭರಣ ಸಿನಿಮಾವರಣ

Author : ಎನ್. ಕೆ. ಪದ್ಮನಾಭ

Pages 232

₹ 400.00




Year of Publication: 2020
Published by: ವಿಸ್ಮಯ ಬುಕ್ ಹೌಸ್
Address: #1542, ಒಂದನೆ ಮಹಡಿ, ಸಿ ಮತ್ತು ಡಿ ಬ್ಲಾಕ್, ಅನಿಕೇತನ್ ರೋಡ್, ಎ ಟು ಝಡ್ ಸೂಪರ್ ಮಾರ್ಕೆಟ್ ಎದುರುಗಡೆ, ಕುವೆಂಪುನಗರ, ಮೈಸೂರು.
Phone: 8050302424

Synopsys

ಟಿ.ಎಸ್. ನಾಗಾಭರಣ ಅವರು ಕನ್ನಡ ಚಲನಚಿತ್ರ ವಲಯದಲ್ಲಿ ಬಹು ದೊಡ್ಡ ಹೆಸರು. ವಿವಿಧ ವಿಚಾರ ಸಂಕಿರಣಗಳಲ್ಲಿ, ಚಿತ್ರೋತ್ಸವಗಳಲ್ಲಿ  ಸಿನಿಮಾ ಕುರಿತಂತೆ ವ್ಯಕ್ತಪಡಿಸಿದ ವಿಚಾರಗಳ ಧ್ವನಿಮುದ್ರಣಗಳನ್ನು ಅಕ್ಷರ ರೂಪಕ್ಕೆ ಇಳಿಸಿರುವ ವಿಶೇಷತೆಯೇ ಈ ಕೃತಿ ‘ನಾಗಾರಭರಣ ಸಿನಿಮಾವರಣ’. ಗುಬ್ಬಿಗೂಡು ರಮೇಶ್ ಹಾಗೂ ಎನ್.ಕೆ. ಪದ್ಮನಾಭ ಅವರು ಕೃತಿಯ ಸಂಪಾದಕರು. ’

ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಜಯಂತ್ ಕಾಯ್ಕಿಣಿ ’ ಒಬ್ಬ ಕವಿ ಬರೆಯುವಾಗ ಮಾತ್ರ ಕವಿ, ಒಬ್ಬ ಹಾಡುಗಾರ ಹಾಡುವಾಗ ಮಾತ್ರ ಹಾಡುಗಾರ. ಸಚಿನ್ ತೆಂಡೂಲ್ಕರ್ ಬ್ಯಾಟ್ ಮಾಡುವಾಗ ಮಾತ್ರ ಬ್ಯಾಟ್ಸ್‌ಮ್ಯಾನ್, ನಾವು ಉಳಿದ ಟೈಮ್ನಲ್ಲಿ ಕವಿ ಥರ ಓಡಾಡಿಬಿಡ್ತೀವಿ. ನಾವು ಉಳಿದ ಟೈಮ್ನಲ್ಲಿ ತೀವ್ರವಾಗಿ ಬದುಕಬೇಕು, ಬರೆಯುವಾಗ ಆ ತೀವ್ರತೆ ಬರುತ್ತದೆ. ಹಾಗೆ ಒಬ್ಬ ನಿರ್ದೇಶಕ ಚಿತ್ರ ಮಾಡುವಾಗ ಎಲ್ಲ ಫ್ಯಾಕಲ್ಟಿಗಳು ಜೊತೆಗೇ ಬರುತ್ತವೆ. ಆ ಥರದ ಫ್ಯಾಕಲ್ಟಿಗಳನ್ನು ಓಪನ್ ಆಗಿರಿಸಿಕೊಂಡಂತಹ  ನಿರ್ದೇಶಕ ನಾಗಾಭರಣ’ ಎಂದು ಪ್ರಶಂಸಿಸಿದ್ದಾರೆ.

About the Author

ಎನ್. ಕೆ. ಪದ್ಮನಾಭ

ರಾಯಚೂರು ಜಿಲ್ಲೆಯವರಾದ ಎನ್.ಕೆ. ಪದ್ಮನಾಭ  ಅವರು ಸುದ್ದಿಮೂಲ, ವಿಜಯ ಕರ್ನಾಟಕ, ವಿಜಯ ಟೈಮ್ಸ್, ಹಾಗೂ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ವರದಿಗಾರ, ಸಹ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಉಜಿರೆಯ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕರಾಗಿರುವ ಪದ್ಮನಾಭ ಅವರು ವಿದ್ಯಾರ್ಥಿಗಳಿಗೂ ಸಾಹಿತ್ಯಾಸಕ್ತಿ ಬೆಳೆಸುವ ಕಾಯಕದಲ್ಲಿ ತೊಡಗಿದ್ದಾರೆ.  ಟಿ.ಎಸ್. ನಾಗಾಭರಣ ಅವರ ಚಲನಚಿತ್ರಗಳು: ಒಂದು ವಿಶ್ಲೇಷಣಾತ್ಮಕ ಅಧ್ಯಯನ' ...

READ MORE

Related Books