ನಾಗಾರ್ಜುನ

Author : ಡಿ. ಆರ್. ನಾಗರಾಜ್

Pages 72

₹ 25.00




Year of Publication: 1993
Published by: ಅಕ್ಷರ ಪ್ರಕಾಶನ
Address: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ, ಕರ್ನಾಟಕ-577 417

Synopsys

’ನಾಗಾರ್ಜುನ ಕೃತಿ ಮತ್ತು ಚಿಂತನೆ’ ಬೌದ್ಧ ದಾರ್ಶನಿಕ ವಿಗ್ರಹ ವ್ಯಾವರ್ತಿನಿ ಮತ್ತುಸುಹೃಲ್ಲೇಖ ಕೃತಿಗಳ ಕನ್ನಡಾನುವಾದ ಮತ್ತು  ವಿಚಾರಗಳ ಬಗ್ಗೆ ಇರುವ ಪೀಠಿಕೆಯನ್ನು ತಿಳಿಸುವಂತದ್ದು. 

ಕನ್ನಡದ ಖ್ಯಾತ ಬರಹಗಾರರೂ, ವಿಮರ್ಶಕರೂ ಆದ ಡಿ. ಆರ್. ನಾಗರಾಜ್ ಅವರು ಹೊರತಂದಿರುವ ಈ  ಪುಸ್ತಕದಲ್ಲಿ ನಾಗಾರ್ಜುನನ ವಿಶಿಷ್ಟ ಕೃತಿಯಾದ ವಿಗ್ರಹ ವ್ಯಾವರ್ತಿನಿಯ ಭಾಷಾಂತರವಿದೆ. ಜೊತೆಗೆ, ಸಂಸ್ಕೃತದಲ್ಲಿ ಲಭ್ಯವಿರದ ಆತನ ಕೃತಿ ಸುಹೃಲ್ಲೇಖದ ಆಯ್ದ ಭಾಗಗಳ ಭಾಷಾಂತರೂ ಇದೆ. ಈ ಅನುವಾದಗಳ ಜೊತೆಗೆ ನಾಗಾರ್ಜುನನ ಮುಖ್ಯ  ತಾತ್ವಿಕ ಸಾಧನೆ ಮತ್ತು ಪರಿಕಲ್ಪನೆಗಳನ್ನು ಸರಳವಾಗಿ ಪರಿಚಯ ಮಾಡಿಕೊಡುವ ಒಂದು ಲೇಖನವೂ ಇದೆ. ಕನ್ನಡ ಚಿಂತನೆಗೆ ಇದೊಂದು ಮುಖ್ಯ ಕೊಡುಗೆ ಎನ್ನಬಹುದು. 

About the Author

ಡಿ. ಆರ್. ನಾಗರಾಜ್
(20 February 1954 - 12 August 1998)

ಕನ್ನಡದ ಖ್ಯಾತ ವಿಮರ್ಶಕ ಹಾಗೂ ಚಿಂತಕರಾದ ಡಾ.ಡಿ.ಆರ್.ನಾಗರಾಜು ಅವರು ಹುಟ್ಟಿದ್ದು ದೊಡ್ಡಬಳ್ಳಾಪುರದಲ್ಲಿ. ತಂದೆ ರಾಮಯ್ಯ, ತಾಯಿ ಅಕ್ಕಯ್ಯಮ್ಮ. ದೊಡ್ಡಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಾಗರಾಜ್ ಪ್ರೌಢ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದರು. ಅಂದಿನ ಸರ್ಕಾರಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ವಿದ್ಯಾರ್ಥಿಯಾದ ಅವರು ಆನರ್ಸ್ ಪದವಿಯನ್ನು ಅಲ್ಲಿಯೇ ಪಡೆದರು. ಮುಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ ಪಡೆದ ಡಿ.ಆರ್ ಸ್ವಲ್ಪ ಕಾಲ ಸಂಶೋಧಕ ವೃತ್ತಿಯಲ್ಲಿದ್ದು ಅಲ್ಲಿಯೇ ಕನ್ನಡ ಅಧ್ಯಾಪಕರಾದರು. ಪ್ರವಾಚಕರಾದರು, ಜೊತೆಗೆ ಕೈಲಾಸಂ ಪೀಠದ ಸಂದರ್ಶಕ ಪ್ರಾಧ್ಯಾಪಕರೂ ಆದರು. ಕನ್ನಡದ ವಿಮರ್ಶೆಗೆ ಸಾಂಸ್ಕೃತಿಕ ಆಯಾಮವನ್ನು ಒದಗಿಸಿದ ನಾಗರಾಜ್ ಅಮೆರಿಕದ ...

READ MORE

Related Books