'ಮೈ ನೇಮ್ ಇಸ್ ಖಾನ್’ ಬಟ್ ಐ ಆಮ್ ನಾಟ್ ಟೆರರಿಸ್ಟ್ ಎಂಬ ಚಿತ್ರ ಬಿಡುಗಡೆಗೆ ಮುನ್ನವೇ ವಿವಾದಕ್ಕೆ ಕಾರಣವಾಗಿತ್ತು. ಈ ಪುಸ್ತಕದ ಶೀರ್ಷಿಕೆಯೂ ಬಹುತೇಕ ಅದೇ ತರಹ ಇದೆ. ಆದರೆ, ಇದು ಸಿನಿಮಾ ಕತೆಯಲ್ಲ. ವ್ಯಕ್ತಿಯೊಬ್ಬನ ದಾರುಣ ವ್ಯಥೆ. ವಿನಾಕಾರಣ ವರ್ಷಾನುಗಟ್ಟಲೆ ಸೆರೆಯಲ್ಲಿದ್ದು ನರಳಿದ ಅಮೀರ್‌ಖಾನ್ ಎಂಬ ಭಾರತೀಯನ ದಯನೀಯ ಸ್ಥಿತಿ. ವ್ಯವಸ್ಥೆಯ ಶಿಕಾರಿಗೆ ಬಲಿಯಾದ ವ್ಯಕ್ತಿ ಮೊಹಮ್ಮದ್ ಅಮೀರ್‌ಖಾನ್ ಹಕ್ಸರ್. ಅಮೀರ್ ನಿರಪರಾಧಿ ಎಂದು ಸಾಬೀತಾಗಲು ಹದಿನಾಲ್ಕು ವರ್ಷ ಬೇಕಾಯಿತು. ಅಷ್ಟೂ ದಿನ ಮಾಡದ ತಪ್ಪಗೆ ಪ್ರಭುತ್ವ ವಿಧಿಸಿದ ’ಶಿಕ್ಷೆ’ ಅನುಭವಿಸಬೇಕಾಯಿತು. ಕೊನೆಗೆ ’ಭಯೋತ್ಪಾದಕನಲ್ಲ’ ಎಂಬ ಸಂಗತಿ ಸಾಬೀತಾಗಿ ಸೆರೆಯಿಂದ ಹೊರ ಬಂದಾಗ ಕಟ್ಟಿಕೊಳ್ಳಲು ಬದುಕೇ ಉಳಿದಿರಲಿಲ್ಲ. ಅಮೀರ್‌ಖಾನ್ ಅನುಭವ ಕಥನ ಓದುತ್ತಿದ್ದರೆ ಕ್ರೌರ್ಯದ ಎದುರು ಸೆಣೆಸಿದ ಅಸಹಾಯಕ ಕ್ಷಣಗಳ ಬಗ್ಗೆ ವಿಷಾದ ಹುಟ್ಟದೇ ಇರದು.
©2022 Book Brahma Private Limited.