ನಾಟಕ ರಂಗಕೃತಿ

Author : ಪ್ರಸನ್ನ

Pages 172

₹ 25.00




Year of Publication: 1985
Published by: ಅಕ್ಷರ ಪ್ರಕಾಶನ
Address: ಅಕ್ಷರ ಪ್ರಕಾಶನ, ಹೆಗ್ಗೋಡು, ಹೊನ್ನೇಸರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417.
Phone: 08183 - 295645 / 9480280401

Synopsys

‘ನಾಟಕ ರಂಗಕೃತಿ’ ಪ್ರಸನ್ನ ಅವರ ನಾಟಕ ವಿಮರ್ಶೆಯ ಕೆಲವು ವಿಚಾರವನ್ನೊಳಗೊಂಡ ಕೃತಿಯಾಗಿದೆ. ಈ ಕೃತಿಯನ್ನ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗವಾಗಿ ಭಾಷೆ, ಎರಡನೇ ಭಾಗವಾಗಿ ಪರಂಪರೆ ಹಾಗೂ ಮೂರನೇ ಭಾಗವಾಗಿ ಕನ್ನಡದ ಕೆಲವು ನಾಟಕಗಳು, ನಾಟಕಕಾರರ ಕುರಿತು ವಿವರಿಸಲಾಗಿದೆ. ಇಲ್ಲಿ ರಂಗಭೂಮಿಯ ಕುರಿತು ಸಾಕಷ್ಟು ದೀರ್ಘ ಚರ್ಚೆಯು ನಡೆದಿರುತ್ತದೆ. ನಾಟಕ ಮತ್ತು ರಂಗಭೂಮಿಯ ನಡುವಿನ ಜೀವಂತ ತಿಕ್ಕಾಟದಿಂದಾಗಿ ನಾಟಕದ ಭಾಷೆ ಬೆಳೆಯುವ ಕ್ರಿಯೆಯನ್ನು ಗುರುತಿಸುವ ಪ್ರಯತ್ನಗಳು ಕನ್ನಡದಲ್ಲಿ ನಡೆದೇ ಇಲ್ಲ ಎನ್ನಬಹುದು. ಈ ಪುಸ್ತಕ ಅಂತಹದ್ದೊಂದು ಕೊರತೆಯನ್ನು ನೀಗುತ್ತದೆ. ಕನ್ನಡದ ಪ್ರಮುಖ ನಾಟಕಕಾರರು ಹಾಗೂ ನಾಟಕಗಳ ವಿವರವಾದ ಚರ್ಚೆಯೊಂದಿಗೆ ನಾಟಕ ಹಾಗೂ ರಂಗಕೃತಿಗಳ ನಡುವಿನ ದ್ವಂದ್ವಾತ್ಮ ವಿಚಾರವನ್ನು ಗುರುತಿಸುವ ಪ್ರಯತ್ನ ಮಾಡುತ್ತಿದೆ ಈ ಪುಸ್ತಕ.

About the Author

ಪ್ರಸನ್ನ
(23 March 1951)

ಖ್ಯಾತ ರಂಗಕರ್ಮಿ ಪ್ರಸನ್ನ ‌ಅವರು ಜನಿಸಿದ್ದು ಮಾರ್ಚ್ 23, 1951 ರಂದು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ. ತಂದೆ ಪ್ರಹ್ಲಾದಾಚಾರ್ಯ, ತಾಯಿ ಹೇಮಾವತಿ ಬಾಯಿ. ಸೆಂಟ್ರಲ್ ಕಾಲೇಜಿನಿಂದ ಎಂ.ಎಸ್ಸಿ. ಪದವಿ ಪಡೆದವರು.  ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.  ಪ್ರಸನ್ನರು ದೆಹಲಿಯ ನಾಟಕ ಶಾಲೆಯಲ್ಲಿದ್ದ ದಿನಗಳಲ್ಲಿ ನಿರ್ದೇಶಿಸಿದ ನಾಟಕಗಳಲ್ಲಿ ಗಾಂಧಿ, ಉತ್ತರ ರಾಮಚರಿತಂ, ಅಗ್ನಿ ಔರ್ ಬರ್ ಕಾ, ಫ್ಯೂಜಿಯಾಮ ಪ್ರಮುಖವಾದವು. ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳ ಮೇಲೆ ಅವರು ಪ್ರಭುತ್ವ ಸಾಧಿಸಿದ್ದರು. ರಾಷ್ಟ್ರೀಯ ನಾಟಕಶಾಲೆಯಲ್ಲಿ ಕೆಲಕಾಲ ಬೋಧನೆ ಮಾಡಿ, ರಂಗಭೂಮಿ ಅಧ್ಯಯನಕ್ಕಾಗಿ ...

READ MORE

Related Books