ನಾಥರಿದ್ದೂ ಅನಾಥೆ

Author : ಎಲ್. ಎನ್. ಮುಕುಂದರಾಜ್

Pages 55

₹ 50.00




Year of Publication: 2017
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಜ್ಞಾನ ಭಾರತಿ, ಬೆಂಗಳೂರು ವಿಶ್ವವಿದ್ಯಾಲಯ ಆವರಣ ಹಿಂಭಾಗ, ಮಲ್ಲತ್ತಹಳ್ಳಿ ಬೆಂಗಳೂರು – 560056

Synopsys

ಭಾರತೀಯ ಭಾಷೆಯ ಉತ್ತಮ ನಾಟಕಗಳನ್ನು ಕನ್ನಡಿಗರಿಗೆ ಪರಿಚಯಿಸುವ ಉದ್ದೇಶದಿಂದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ’ಭಾರತೀಯ ಭಾಷಾ ನಾಟಕ ಮಾಲಿಕೆ’ಯನ್ನು ಆರಂಭಿಸಿದೆ. ’ನಾಥರಿದ್ದೂ ಅನಾಥೆ’ ನಾಟಕವು ಈ ಸರಣಿಯಲ್ಲಿ ಪ್ರಕಟವಾದ ಕೃತಿ.  ಮೂಲನಾಟಕಕಾರ ಶ್ಯಾವಲಿ ಮಿತ್ರ ಅವರು ಬಂಗಾಳದ ರಂಗಭೂಮಿ ಮತ್ತು ಸಿನಿಮಾ ರಂಗದ ಪ್ರಸಿದ್ದ ನಟಿ. ಮೂಲ ಹೆಸರಾದ ’ನಾಥಬತೀ ಅನಾಥಬತ್’ ನಾಟಕವನ್ನು ’ನಾಥರಿದ್ದೂ ಅನಾಥೆ’ ಎಂದು ಕನ್ನಡೀಕರಿಸಲಾಗಿದೆ.  ಕನ್ನಡ ರೂಪಾಂತರ ಮಾಡಿದವರು ಲೇಖಕಿ, ಮೀರಾ ಚಕ್ರವರ್ತಿ ಮತ್ತು  ಕವಿ ಎಲ್. ಎನ್. ಮುಕುಂದರಾಜ್.

ದ್ರೌಪದಿಯ ನೋಟದ ಮೂಲಕವೇ ಮಹಾಭಾರತದ ಸನ್ನಿವೇಶಗಳನ್ನು ನೋಡುವ ’ನಾಥರಿದ್ದೂ ಅನಾಥೆ’ ಸಹಜವಾಗಿಯೇ ದ್ರೌಪದಿಯ ಪರವಾದ ವಾದವೊಂದನ್ನು ರೂಪಿಸುತ್ತದೆ.  ಈ ನಾಟಕದ ಪಾತ್ರವಾದ ದ್ರೌಪದಿಯ ವ್ಯಕ್ತಿತ್ವದಲ್ಲಿ ಯಾತನೆ, ಅಣಕ, ಹಾಸ್ಯ ಕೋಪ, ಮುಂತಾದ ಭಾವನೆಗಳನ್ನು ಪ್ರಧಾನವಾಗಿಸಿ ಅವನ್ನೆಲ್ಲಾ ಈ ಕಾಲದ ನಿರೂಪಕಿಯೊಬ್ಬಳ ಮೂಲಕ ಮಂಡಿಸಿದ್ದಾರೆ.  ದ್ರೌಪದಿ ನಾಟಕದುದ್ದಕ್ಕೂ ಎಲ್ಲಾ ಪಾತ್ರವನ್ನು ಪ್ರಶ್ನಿಸುತ್ತಾ, ಗೇಲಿ ಮಾಡುತ್ತಾ ಟೀಕಿಸುತ್ತಾ ಮಹಾಭಾರತದ ಘಟನಾವಳಿಗಳನ್ನು ಪುನರ್ವಿಮರ್ಶಿಸುತ್ತಾ ನಡೆಯುತ್ತಾಳೆ.

 

About the Author

ಎಲ್. ಎನ್. ಮುಕುಂದರಾಜ್

ಎಲ್. ಎನ್. ಮುಕುಂದರಾಜ್  ಹೊಸ ತಲೆಮಾರಿನ ಹೆಸರಾಂತ ಲೇಖಕರು, ಕನ್ನಡ ಎಂ.ಎ. ಪಡೆದ ಇವರು ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. - ದೇಶ ಕೋಶ ದಾಸವಾಳ, ನಿರಂಕುಶ ಮುಂತಾದ ಕವನ ಸಂಕಲನಗಳು, ವೈಶಂಪಾಯನ ತೀರ, ಇಗೋ ಪಂಜರ ಅಗೋ ಮುಗಿಲು, ಸಂಗ್ರಾಮ ಭಾರತ ಮುಂತಾದ ನಾಟಕಗಳು, ಅನೇಕ ಜೀವನ ಚರಿತ್ರೆಗಳು ಹಾಗೂ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ನಟಿಸಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುವುದಲ್ಲದೆ, ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ, ಸುವರ್ಣ ಸಂಭ್ರಮಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಶಿಕ್ಷಕ ...

READ MORE

Related Books