ನಭಃ ಸ್ಪೃಶಂ ದೀಪ್ತಂ

Author : ಸುದರ್ಶನ ಬಿ.ಎಸ್.

Pages 157

₹ 200.00




Year of Publication: 2022
Published by: ಸಮನ್ವಿತ ಪ್ರಕಾಶನ

Synopsys

ಭಾರತೀಯ ವಾಯುಸೇನೆಯಲ್ಲಿ ವಾಯುಸೈನಿಕರಾಗಿ ಸೇವೆಗೆ ತೊಡಗಿದ ಸುದರ್ಶನ್, ದೃಢ ಸಂಕಲ್ಪ ಮತ್ತು ತ್ರಿವಿಕ್ರಮ ಛಲದಿಂದ ವಾಯುಸೇನೆಯ ಯಶಸ್ವೀ ವೈಮಾನಿಕರಾಗಿ ಹೆಸರು ಮಾಡಿದ್ದು ನಮ್ಮ ನಾಡಿಗೇ ಹೆಮ್ಮೆಯ ವಿಷಯ. ಈ ಎಲ್ಲಾ ಬಹಿರಂಗದ ನಡುವೆ ಅವರ ಅಂತರಂಗದಲ್ಲಿ ಕನ್ನಡ ಮತ್ತು ಸಾಹಿತ್ಯದ ಒಲವು ಜೀವಂತ ಝರಿಯಾಗಿತ್ತು. ವಾಯುಸೇನೆಯಿಂದ ನಿವೃತ್ತರಾದ ಮೇಲೆ ಇಂಡಿಗೋ ವಾಯುಯಾನ ಸಂಸ್ಥೆಯಲ್ಲಿ ವೈಮಾನಿಕರಾದ ಶ್ರೀಯುತರು ಜೊತೆಯಲ್ಲಿಯೇ ಸಾಹಿತ್ಯ ರಚನೆಯಲ್ಲಿಯೂ ಸಹಾ ತಮ್ಮನ್ನು ತಾವು ತೊಡಗಿಸಿಕೊಂಡರು. ಪ್ರಸ್ತುತ ಕೃತಿ 'ನಭ ಸ್ಪಶಂ ದೀಪ್ತಂ, ಗಂಗೂರಿನಿಂದ ಗಗನಕ್ಕೆ” ಅವರ ವಾಯುಸೇನೆಯ ಶಿಕ್ಷಣದ ಮತ್ತು ರೋಚಕ ಅನುಭವಗಳ ಅತ್ಯಾಕರ್ಷಕ ನಿರೂಪಣೆ, ಸುದರ್ಶನರು ಈಗ ನನ್ನ ಅಭಿಮಾನದ ಕಿರಿಯ ಮಿತ್ರರು ಎಂದು ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸುದರ್ಶನ ಬಿ.ಎಸ್.

ವಿಂಗ್ ಕಮಾಂಡರ್ ಸುದರ್ಶನರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ಗಂಗೂರು ಎನ್ನುವ ಪುಟ್ಟ ಹಳ್ಳಿಯಲ್ಲಿ. ಉಪಾಧ್ಯಾಯರಾಗಿದ್ದ ತಂದೆಯವರೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ದಾವಣಗೆರೆಯಲ್ಲಿ ಪಿಯುಸಿ ಮುಗಿಸಿದ ನಂತರ ವಾಯುಸೇನೆಯಲ್ಲಿ ವೈದ್ಯಕೀಯ ಸಹಾಯಕರಾಗಿ ಆಯ್ಕೆಯಾದರು. ದೇಶ ಸುತ್ತು ಕೋಶ ಓದು ಎನ್ನುವಂತೆ ವಾಯುಸೇನೆಯಲ್ಲಿ ಭಾರತದಲ್ಲಿ ಇವರು ಸುತ್ತದ ಪ್ರದೇಶಗಳಿಲ್ಲ, ಅಂತೆಯೇ ಕೋಶವನ್ನು ಓದುತ್ತಲೇ ಇವರು ತಮ್ಮ ವೃತ್ತಿವಲಯದಲ್ಲಿ ಹಂತಹಂತವಾಗಿ ಮೇಲೇರುತ್ತಾ ವಾಯುಸೇನೆಯಲ್ಲಿ ಪೈಲಟ್ ಆಗಿ ಮುಂದುವರೆದರು.  ವೈಮಾನಿಕ ಜೀವನದಲ್ಲಿ ಇವರು ಸುಮಾರು ಹದಿನಾಲ್ಕು ವಿವಿಧ ರೀತಿಯ, ಗಾತ್ರದ ವಿಮಾನಗಳನ್ನು ಹಾರಿಸುತ್ತಾ ಹನ್ನೆರಡು ಸಾವಿರ ಗಂಟೆಗಳಿಗೂ ...

READ MORE

Related Books