ನದಿಯೊಂದು ನಿದ್ರಿಸಿದಾಗ

Author : ರವಿಕುಮಾರ ಹಂಪಿ

Pages 192

₹ 150.00




Year of Publication: 2023
Published by: ವೈಷ್ಣವಿ ಪ್ರಕಾಶನ
Address: ಕೆ ಗುಡದಿನ್ನಿ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ
Phone: 9620170027

Synopsys

ನದಿಯೊಂದು ನಿದ್ರಿಸಿದಾಗ ರವಿ ಹಂಪಿ ಅವರ ಅನುವಾದಿತ ಕಾದಂಬರಿ ಕೃತಿಯಾಗಿದೆ. ಈ ಕಾದಂಬರಿಯ ಮನುಷ್ಯ ಲೋಕವು ಪ್ರಕೃತಿಯ ಸಹಜ ಲಯ, ಏರಿಳಿತಗಳನ್ನು ತಮ್ಮ ಮಾರ್ಗದರ್ಶಕರಾಗಿ ಮಾಡಿಕೊಂಡಿದೆ. ತುರಚಿ ಗಿಡದ ಮುಳ್ಳು ಚುಚ್ಚಿ ಆದ ಗಾಯಕ್ಕೆ ಕಾಡುಜೇನುತುಪ್ಪ ಹಚ್ಚಿದರೆ ಬೇಗ ಮಾಯುತ್ತದೆ, ಮಾಚಿಪತ್ರೆ ಗಿಡದ ಎಲೆಯ ರಸ ಗಾಯಕ್ಕೆ ಒಳ್ಳೆಯದು, ಇನ್ಯಾವುದೋ ಎಲೆಯ ರಸ ರಕ್ತ ಸೋರುವುದನ್ನು ನಿಲ್ಲಿಸಲು ರಾಮಬಾಣ, ಜ್ವರ ಬಂದಾಗ ಯಾವ ಔಷಧೀಯ ಸಸ್ಯ ಬಳಸಬೇಕು, ಯಾವ ಬೇರನ್ನು ಹಸಿಯಾಗಿ ಸೇವಿಸಬೇಕು, ಯಾವುದನ್ನು ಕುಟ್ಟಿ ರಸ ಕುಡಿಯಬೇಕು ಇತ್ಯಾದಿಗಳಿಂದ ಹಿಡಿದು, ಕಾಡಿನಲ್ಲಿ ಅಡಗಿಕೊಂಡಾಗ ತಮ್ಮ ಇರವಿನ ರಹಸ್ಯವನ್ನು ಬಿಟ್ಟುಕೊಡದಂತೆ ಇರುವುದು ಹೇಗೆ, ಯಾವ ಮರದ ಕೆಳಗೆ ಯಾವ ಸೊಪ್ಪು ಬೆಳೆದಿರುತ್ತದೆ ಎಂಬಂತಹ ನೂರಾರು ಪ್ರಾಕೃತಿಕ ವಿಸ್ಮಯಗಳು ಬಹಳ ಸಹಜ ಅನ್ನುವ ಹಾಗೆ ಕಾದಂಬರಿಯ ಪ್ರತಿಯೊಂದು ಪುಟದಲ್ಲಿಯೂ ಕಾಣಿಸುತ್ತವೆ.

About the Author

ರವಿಕುಮಾರ ಹಂಪಿ
(01 June 1979)

ರವಿ ಹಂಪಿ ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಿ ಗ್ರಾಮದವರು.  ಪ್ರಸ್ತುತ ಲಿಂಗಸ್ಗೂರು ತಾಲೂಕಿನ ಕಸಬಾಲಿಂಗಸ್ಗೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಸಹಾಯ ಪಡೆದ ‘ಸಖ-ಸಖಿ’ ಗಜಲ್ ಸಂಕಲನ ಸೃಷ್ಠಿ ಪ್ರಕಾಶನದಿಂದ ಪ್ರಕಟಗೊಂಡಿದೆ.  ಇವರ ಕಥೆ ಗಜಲ್‌ಗಳು ತುಷಾರ, ಮಲ್ಲಿಗೆ, ಮಯೂರ, ಸಂಯುಕ್ತ ಕರ್ನಾಟಕ ಹೊಸತು ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ಅನುವಾದದಲ್ಲಿ ಆಸಕ್ತಿ ಹೊಂದಿರುವ ಇವರು ಇತ್ತೀಚಿಗೆ ಇಂಗ್ಲೀಷಿನಿಂದ ಕಾದಂಬರಿಗಳ ಅನುವಾದದಲ್ಲಿ ತೊಡಗಿಸಿಕೊಂಡಿದ್ದಾರೆ.  ಸಂಚಯ ಕಾವ್ಯ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ ...

READ MORE

Related Books