ನಾಡೋಜ ಡಾ. ಚಂದ್ರಶೇಖರ ಕಂಬಾರ

Author : ವೀರೇಶ ಬಡಿಗೇರ

Pages 80

₹ 80.00




Year of Publication: 2018
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಅವರ ಬದುಕು-ಬರೆಹ ಕುರಿತು ವಿವಿಧ ಲೇಖನಗಳ ಸಂಗ್ರಹವೇ ’ನಾಡೋಜ. ಚಂದ್ರಶೇಖರ ಕಂಬಾರ’ ಕೃತಿ. ಜಾನಪದ, ರಂಗಭೂಮಿ, ಸಿನಿಮಾ ಹೀಗೆ ವಿವಿಧ ಆಯಾಮಗಳಲ್ಲಿ ಡಾ. ಚಂದ್ರಶೇಖರ್ ಕಂಬಾರ ಅವರ ವ್ಯಕ್ತಿತ್ವವನ್ನು ತೋರುವ ಬರೆಹಗಳು ಇಲ್ಲಿವೆ. ವ್ಯಕ್ತಿಯಾಗಿಯೂ ಡಾ. ಚಂದ್ರಶೇಖರ್ ಕಂಬಾರರ ಬದುಕು ಕುರಿತೂ ಮಾಹಿತಿ ಇದೆ. ಡಾ. ವೀರೇಶ ಬಡಿಗೇರ ಅವರು ಕೃತಿಯನ್ನು ಸಂಪಾದಿಸಿದ್ದಾರೆ.

About the Author

ವೀರೇಶ ಬಡಿಗೇರ
(04 April 1966)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ, ಕನ್ನಡದ ಹಸ್ತಪ್ರತಿ ತಜ್ಞರಲ್ಲಿ ಒಬ್ಬರು. 1966 ಏಪ್ರಿಲ್‌ 4 ರಂದು ಜನಿಸಿದರು. ಎಂ. ಎ., ಪಿಎಚ್.ಡಿ. ಹಾಗೂ ಬಿ.ಇಡ್, ಡಿಪ್ಲೊಮಾ ಇನ್ ಎಪಿಗ್ರಾಫಿ ಮಾಡಿದ್ದು, ಕನ್ನಡ ಸಾಹಿತ್ಯ, ಸಂಸ್ಕೃತಿ, ಜಾನಪದ, ಸಂಗೀತ, ತಂತ್ರಜ್ಞಾನ ಆಸಕ್ತಿ ಕ್ಷೇತ್ರಗಳು. 28 ವರ್ಷ ಕಾಲ ಬೋಧನೆ ಹಾಗೂ ಸಂಶೋಧನೆಯ ಅನುಭವ ಇದೆ. ಬಾಗಲಕೋಟೆಯ  ಪಿ. ಎಂ. ನಾಡಗೌಡಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ  ಅರೆಕಾಲಿಕ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. 1992 ರಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕೆಲಸಕ್ಕೆ ಸೇರಿದರು. 1996 ಆಗಸ್ಟನಿಂದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿಉಪನ್ಯಾಸಕರಾದರು. 1996ರಲ್ಲಿ ಉತ್ತರ ಕರ್ನಾಟಕದ ಜಾನಪದ ...

READ MORE

Related Books