ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ

Author : ನಾಗೇಶ ಹೆಗಡೆ

Pages 260

₹ 240.00
Year of Publication: 2021
Published by: ಭೂಮಿ ಬುಕ್ಸ್
Address: #150,1ನೇ ಮೇನ್, 2ನೇ ಮುಖ್ಯರಸ್ತೆ, ಶ್ರೀರಾಮಪುರಂ, ಶೇಷಾದ್ರಿಪುರಂ, ಬೆಂಗಳೂರು-560020
Phone: 08023565885

Synopsys

ಪತ್ರಕರ್ತರಾಗಿ ನಾಗೇಶ ಹೆಗಡೆ ಅವರು ತಮ್ಮ ಅನುಭವಗಳನ್ನು ಸ್ಮರಿಸಿ, ದಾಖಲಿಸಿದ ಕೃತಿ-ನಡುಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದ ಪದವೀಧರರಾಗಿ ಅವರು ಪ್ರಜಾವಾಣಿಯಲ್ಲಿ ಸೇರಿ, ವಿಜ್ಞಾನ ಹಾಗೂ ಅಭಿವೃದ್ಧಿ ಬಾತ್ಮೀದಾರರಾಗಿದ್ದರು. ಬೇಡ್ತಿ ಚಳವಳಿ, ಕುದುರೆಮುಖ ಗಣಿಗಾರಿಕೆ, ರಾಣೆಬೆನ್ನೂರು ಬಳಿಯ ಹರಿಹರ ಪಾಲಿಫೈಬರ್ ಕಾರ್ಖಾನೆ, ಕೊಳ್ಳೆಗಾಲದ ಕಾಡು ಧ್ವಂಸ, ಕೈಗಾ ಉಳಿಸಿ ಹೋರಾಟ ಇತ್ಯಾದಿ ವಿದ್ಯಮಾನಗಳನ್ನು ವರದಿ ಮಾಡುತ್ತಿದ್ದ ಲೇಖಕರು, ತಮ್ಮ ವೃತ್ತಿ ಜೀವನದಲ್ಲಿ ಇತರರಿಂದ ಅಷ್ಟೇ ಅಲ್ಲ; ಸ್ವತಃ ಸಹೋದ್ಯೋಗಿ ಗೆಳೆಯರಿಂದಲೂ ಟೀಕೆ, ನಿಂದೆಗೆ, ಅಸಮಾಧಾನಕ್ಕೆ ಗುರಿಯಾದರು. ‘ಇಷ್ಟೊಂದು ತೀವ್ರವಾಗಿ ಬರೆಯಬಾರದು, ಸರ್ಕಾರವನ್ನು ನೇರವಾಗಿ ಟೀಕಿಸಬಾರದು. ಬರೀ ಸರ್ಕಾರ ವಿರೋಧಿ ಸುದ್ದಿಗಳನ್ನೇ ಮಾಡಬಾರದು’ ಇತ್ಯಾದಿ ವೃತ್ತಿ ಆಸಕ್ತಿಯನ್ನು ಕಮರಿಸುವಂತಹ ಸಲಹೆಗಳಿರುತ್ತಿದ್ದವು. ಆದರೆ, ಈ ಎಲ್ಲವೂ ಬರಹದ ಜೊತೆ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತಿದ್ದವು ಎಂದು ಬರೆದ ಚಿಂತನೆಗಳು ಮಾತ್ರವಲ್ಲ; ಎಷ್ಟು ಜನ ಪತ್ರಕರ್ತರು ವೃತ್ತಿನಿಷ್ಠೆ ತೋರುತ್ತಾರೆ ? ಎಂಬ ಪ್ರಶ್ನೆಗಳು, ಅವುಗಳಿಗೆ ನೀಡುವ ಉದಾಹರಣೆಗಳು ಪತ್ರಕರ್ತನ ಸಾಮಾಜಿಕ ಹೊಣೆಗಾರಿಕೆ, ಕಚೇರಿಯಲ್ಲಿ ಹಾಗೂ ಹೊರಗಡೆ ಆತ ಎದುರಿಸುವ ಸವಾಲುಗಳು ಇತ್ಯಾದಿ ಚಿತ್ರಣ ನೀಡುವ ಕೃತಿ ಇದು.

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books