ನಾಗರಿಕತೆಯ ಶೋಧದಲ್ಲಿ

Author : ನಾ. ದಿವಾಕರ

Pages 472

₹ 450.00




Year of Publication: 2020
Published by: ಸಂಸ್ಕೃತಿ ಪಬ್ಲಿಷಿಂಗ್ ಹೌಸ್
Address: ಫ್ಲಾಟ್ ಸಂಖ್ಯೆ, ಎಫ್ 2, #1461, 7ನೇ ಕ್ರಾಸ್, ವನಿತಾ ಸದನದ ಎದುರು ಸನ್ ರೈಸ್ ಅಪಾರ್ಟ್ ಮೆಂಟ್ಸ್, ಕೃಷ್ಣಮೂರ್ತಿಪುರಂ, ಮೈಸೂರು- 4

Synopsys

‘ನಾಗರಿಕತೆಯ ಶೋಧದಲ್ಲಿ’ ನಾ. ದಿವಾಕರ ಅವರ ಲೇಖನ ಸಂಕಲನ. ಈ ಕೃತಿಗೆ ಪುರುಷೋತ್ತಮ ಬಿಳಿಮಲೆ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ನಾಗರಿಕತೆಯ ಸಮಕಾಲೀನ ಶೋಧದ ಸಂದರ್ಭದಲ್ಲಿ ದಿವಾಕರರು ಎಲ್ಲಿಯೂ ಭಾರತದ ಬಹುತ್ವದ ಪರಿಕಲ್ಪನೆಯನ್ನೂ, ತನ್ನ ಜನಪರ ನಿಲುವುಗಳನ್ನೂ ಬಿಟ್ಟುಕೊಡುವುದಿಲ್ಲ. ಇದು ಇಂದಿನ ದಿನಗಳಲ್ಲಿ ಪ್ರವಾಹಕ್ಕೆ ಇದಿರಾಗಿ ಈಜುವ ಸಾಹಸದ ಕೆಲಸ. ಅದನ್ನವರು ಶ್ರದ್ಧೆಯಿಂದ ಮಾಡಿದ್ದಾರೆ ಎಂದಿದ್ದಾರೆ ಪುರುಷೋತ್ತಮ ಬಿಳಿಮಲೆ. ಹಿಂದುತ್ವದ ನಿರಂಕುಶ ಸರ್ವಾಧಿಕಾರವು ಬಂಡವಾಳಶಾಹಿಗಳೊಡನೆ ಸೇರಿಕೊಂಡಾಗ, ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಉಂಟಾಗುವ ಅನಾಹುತಗಳಿಗೆ ಲೇಖಕರು ಧ್ವನಿಯಾಗುತ್ತಾಲೇ ಹೋಗುತ್ತಾರೆ. ಈ ಎರಡೂ ಶಕ್ತಿಗಳು ಉಂಟು ಮಾಡಿದ ಮತ್ತು ಮತ್ತು ಮಾಡುತ್ತಿರುವ ಅನಾಹುತಗಳ ವ್ಯಾಪ್ತಿ ಬಹಳ ವಿಸ್ತಾರವಾದುದು. ಮಾಡಿದ ಗಾಯಗಳು ಆಳವಾದುದು. ಇವೆಲ್ಲವೂ ಲೇಖಕರನ್ನು ಪುಸ್ತಕದುದ್ದಕ್ಕೂ ನಿರಂತರವಾಗಿ ಕಾಡಿದೆ. ನಿಲ್ಲದ ದಲಿತರ ಶೋಷಣೆ, ಮಾನವೀಯತೆಯ ಕುಸಿತ, ಮಕ್ಕಳ ಸಾವು, ಹೆಚ್ಚುತ್ತಿರುವ ಕ್ರೌರ್ಯ, ಅಸಹಿಷ್ಣುತೆ, ಆಹಾರದ ಸ್ವಾಮತೆಯ ಪ್ರಶ್ನೆ, ಸಾಂಸ್ಕೃತಿಕ ರಾಜಕಾರಣ, ಲವ್ ಜಿಹಾದ್, ಲಿಂಚಿಂಗ್, ನ್ಯಾಯಾಂಗ ವ್ಯವಸ್ಥೆಯ ಕುಸಿತ, ಕೋಮುವಾದದ ಹೆಚ್ಚಳ, ಎನ್ ಕೌಂಟರ್ ರಾಜಕೀಯ,ಮತಾಂಧತೆ, ಧಾರ್ಮಿಕ ದೌರ್ಜನ್ಯಗಳು, ಸರ್ವಾಧಿಕಾರೀ ಮನೋಭಾವದ ಹೆಚ್ಚಳ, ಶಿಕ್ಷಣ ವ್ಯವಸ್ಥೆಯ ಮಿತಿಗಳು, ಮಠಗಳ ಮಾನವ ವಿರೋಧಿ ನಿಲುವುಗಳು, ಬೌದ್ಧಿಕ ಸಂವಾದಗಳ ಅಗತ್ಯ, ಗಲ್ಲು ಶಿಕ್ಷೆಯ ಗೊಂದಲಗಳು, ವಿಕೃತ ಮನಸುಗಳ ಅಟ್ಟಹಾಸ, ದ್ವೇಷದ ಪ್ರಸಾರ, ಮಾಧ್ಯಮಗಳ ಸೋಗಲಾಡಿತನ, ಸಾವಿನ ರಾಜಕೀಯ, ಮಹಿಳೆಯರ ಮೇಲಿನ ಅತ್ಯಾಚಾರ, ಪೌರತ್ವ ಕಾಯಿದೆ ತಿದ್ದುಪಡಿಯ ಅಘೋಷಿತ ಉದ್ದೇಶಗಳು, ನಿಲ್ಲದ ಪಾಳೇಗಾರಿ ಪದ್ಧತಿ, ಹೆಚ್ಚುತ್ತಿರುವ ಮುಸ್ಲಿಂ ದ್ವೇಷ, ನ್ಯಾಯಾಂಗ ವ್ಯವಸ್ಛಥೆಯ ವೈಫಲ್ಯ ಮೊದಲಾದ ಹಲವು ವಿಷಯಗಳಿಗೆ ಲೇಖಕರಿಲ್ಲಿ ದಿಟ್ಟವಾಗಿ ಪ್ರತಿಕ್ರಿಯಿಸಿದ್ದಾರೆ. ಆಶ್ಚರ್ಯವೆಂದರೆ, ಇಂಥ ಅಮಾನವೀಯ ಕೃತ್ಯಗಳೆಲ್ಲ ಹೆಚ್ಚುತ್ತಿರುವಾಗ ಹಿಂದುತ್ವವು 20-21ನೇ ಶತಮಾನ ಕಲಿಸಿಕೊಟ್ಟ ಉದಾರವಾದೀ ಮಾನವತಾವಾದವನ್ನು ತ್ಯಜಿಸಿ, ನಾವು ಬದುಕದೇ ಇರುವ ಮಧ್ಯಕಾಲೀನ ಅಥವಾ ಅದಕ್ಕೂ ಹಿಂದಿನ ಮೌಲ್ಯಗಳತ್ತ ಜನರನ್ನು ಕೊಂಡೊಯ್ಯುತ್ತಿರುವುದು. ಅದರಲ್ಲಿ ಅದು ಸಾಕಷ್ಟು ಯಶಸ್ಸನ್ನೂ ಕಂಡಿದೆ. ಆದರೆ ಅದು ನಮ್ಮ ಸಮಸ್ಯೆಗಳನ್ನು ಕಡಿಮೆ ಮಾಡಿತೇ ಎಂಬ ಪ್ರಶ್ನೆಗೆ ಯಾರೂ ಉತ್ತರ ಕೊಡುವುದಿಲ್ಲ. ದಿವಾಕರರ ಈ ಪುಸ್ತಕವು ಆಕ್ರಮಣಕಾರೀ ಹಿಂದುತ್ವವು ಹುಟ್ಟು ಹಾಕಿದ ಅನೇಕ ಸಮಸ್ಯೆಗಳತ್ತ ನಮ್ಮ ಗಮನವನ್ನು ಸೆಳೆಯುತ್ತದೆ. ಅದರ ಜೊತೆಜೊತೆಗೆ ಅದು ಆಕ್ರಮಣಕಾರೀ ಹಿಂದುತ್ವದ ಹೊರಗಡೆಗೆ, ಜನರ ಮಾನಸದಲ್ಲಿ ಮಲಿನಗೊಳ್ಳದೇ ಉಳಿದಿರುವ ಕೆಲವು ಉದಾತ್ತ ಮೌಲ್ಯಗಳನ್ನು ಗುರುತಿಸುತ್ತದೆ ಎಂದಿದ್ದಾರೆ. ಜೊತೆಗೆ ಈ ಪುಸ್ತಕವು ಆಧುನಿಕ ಮಾನವನಿಗೆ ಅಗತ್ಯವಾಗಿರುವ ತತ್ತ್ವಶಾಸ್ತ್ರವೊಂದನ್ನು ನಮ್ಮ ಮುಂದಿಡುತ್ತದೆ. ಅದನ್ನು ಓದಿ, ಅರ್ಥಮಾಡಿಕೊಂಡು, ನಮ್ಮ ಸಾಮಾಜಿಕ ಜೀವನವನ್ನು ಸಹ್ಯಗೊಳಿಸಿಕೊಳ್ಳುವುದರಲ್ಲಿ ಭಾರತದ ಭವಿಷ್ಯ ಅಡಗಿದೆ ಎಂದು ತಿಳಿಸಿದ್ದಾರೆ.

About the Author

ನಾ. ದಿವಾಕರ

ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ...

READ MORE

Related Books