ನಾಗರಿಕತೆಯ ಕಥೆ ಸಂಪುಟ-5 ಪುನರುಜ್ಜೀವನ

Author : ಈಶ್ವರಚಂದ್ರ

Pages 1084

₹ 1000.00




Year of Publication: 2012
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಕ್ರಿ.ಶ. 1304ರಿಂದ 1576 ರವರೆಗೆ ಅಂದರೆ ಪೀಟ್ರಾರ್ಕನ ಜನ್ಮದಿಂದ ಚಿಷಿಯನ್ನ ಮರಣದವರೆಗೆ, ಇಟಲಿಯಲ್ಲಿ ಎಲ್ಲಾ ಕ್ಷೇತ್ರಗಳೂ ಜೀವ ಚೈತನ್ಯವನ್ನು ಪಡೆದುಕೊಂಡ ಪುನರುಜ್ಜೀವನದ ಚಿತ್ರ ನಾಗರಿಕತೆಯ ಕಥೆಯ ವಿಷಯಗಳನ್ನು ಸಂಪುಟ ಒಳಗೊಂಡಿದೆ. ಈ ಕಾಲದ ಎಲ್ಲಾ ಕಲಾಕೃತಿಗಳನ್ನೂ ಡ್ಯೂರಾಂಟ್ ಸ್ವತಃ ಅಧ್ಯಯನ ಮಾಡಿ ತಮ್ಮ ಅಭಿಪ್ರಾಯಗಳನ್ನು ಕೃತಿಯ ಮೂಲಕ ದಾಖಲಿಸಿದ್ದಾರೆ.

ಫ್ಲಾರೆನ್ಸ್ ಪುನರುಜ್ಜೀವನ, ಕಲೆ, ಸಾಹಿತ್ಯ ಮತ್ತು ಶಿಲ್ಪದ ಸುವರ್ಣ ಯುಗ (1464-92),ಲಿಯೊನಾರ್ಡೊ ಡ ವಿಂಚಿ ಯ ಕಲೆ, ವೆನಿಸ್ನ ಸರ್ಕಾರ, ಅರ್ಥವ್ಯವಸ್ಥೆ, ನೇಪಲ್ಸ್ ನ ಸಾಮ್ರಾಜ್ಯ, ರೋಮ್ ನ ಪುನರುಜ್ಜೀವನ ಮತ್ತು ಅವನತಿಯ ಕುರಿತ ಮಾಹಿತಿಯನ್ನು ಕುರಿತ ವಿವರಗಳನ್ನು  ಸಂಪುಟ ಒದಗಿಸುತ್ತದೆ.

About the Author

ಈಶ್ವರಚಂದ್ರ
(14 July 1946)

ಕನ್ನಡದ ಪ್ರಸಿದ್ಧ ಕಥೆಗಾರ ಈಶ್ವರಚಂದ್ರರು ಜುಲೈ 14, 1946ರಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೋದಿಗೆರಿಯಲ್ಲಿ ಜನಿಸಿದರು. ತಂದೆ ಎಚ್.ಎನ್. ರಾಮರಾವ್ ಅವರು ಮತ್ತು ತಾಯಿ ಪದ್ಮಾವತಮ್ಮನವರು. ಈಶ್ವರ ಚಂದ್ರರ ಪ್ರಾರಂಭಿಕ ಶಿಕ್ಷಣ ಚನ್ನಗಿರಿ, ಸಾಗರ, ಶಿವಮೊಗ್ಗಗಳಲ್ಲಿ ನಡೆದವು. ಮುಂದೆ ಭದ್ರಾವತಿಯಲ್ಲಿ ಡಿಪ್ಲೊಮಾ ಪೂರೈಸಿದ ಅವರು ಬೆಂಗಳೂರು ವಿಮಾನ ಕಾರ್ಖಾನೆಯ ‘ವಿಮಾನ ಸಂಶೋಧನೆ ಮತ್ತು ವಿನ್ಯಾಸ’ ಕೇಂದ್ರವನ್ನು ಸೇರಿ ನಲವತ್ತು ವರ್ಷಗಳ ಸುದೀರ್ಘಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದ ಕಡೆ ಒಲವು ತಳೆದ ಈಶ್ವರಚಂದ್ರರು ತಂದೆ ಹೇಳುತ್ತಿದ್ದ ಭಾರತ, ಭಾಗವತ, ರಾಮಾಯಣ ಕಾವ್ಯ, ಕಥೆಗಳಿಂದ ಪ್ರೇರಣೆ ಪಡೆದರು. ...

READ MORE

Related Books