ನಗೆ ಬುಗ್ಗೆ

Author : ಎಸ್.ಎನ್. ಶಿವಸ್ವಾಮಿ

Pages 64

₹ 13.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು
Phone: 08022161900

Synopsys

ಹಾಸ್ಯ ಸಾಹಿತಿ ಎಸ್.ಎನ್. ಶಿವಸ್ವಾಮಿ ಅವರ ಹಾಸ್ಯ ಬರಹಗಳನ್ನು ಒಳಗೊಂಡ ಕೃತಿ-ಬುಗ್ಗೆ. ಸಾಹಿತ್ಯದ ವಿಶಿಷ್ಟ ಪ್ರಕಾರಗಳ ಪೈಕಿ ಹಾಸ್ಯ ಸಾಹಿತ್ಯವೂ ಒಂದು. ವ್ಯಂಗ್ಯ-ವಿಡಂಬನೆ ಮೂಲಕ ವ್ಯಕ್ತಿ ಇಲ್ಲವೇ ಸಮಾಜದ ಲೋಪ-ದೋಷಗಳನ್ನು ಇಲ್ಲವೇ ಆತ್ಮಾವಲೋಕನಕ್ಕೂ ಪ್ರೇರಣೆ ನೀಡುವಂತಹ ಹಾಸ್ಯ ಬರಹಗಳನ್ನು ಈ ಕೃತಿ ಒಳಗೊಂಡಿದೆ. ಬದುಕಿನ ಸಣ್ಣಸಣ್ಣ ಘಟನೆಗಳಲ್ಲೂ ಹಾಸ್ಯ ಇದ್ದು, ಅದನ್ನು ಕಂಡುಕೊಂಡು ಕಲಾತ್ಮಕವಾಗಿ ಓದುಗರಿಗೆ ನೀಡುವ ಬರಹಗಾರರ ಪೈಕಿ ಲೇಖಕ ಎಸ್.ಎನ್. ಶಿವಸ್ವಾಮಿ ಒಬ್ಬರಿದ್ದು, ಈ ಸಂಕಲನದ ಬರಹಗಳು ಪರಿಶುದ್ಧ ಹಾಸ್ಯವನ್ನು ಹಾಗೂ ಸಾಮಾಜಿಕ ಹೊಣೆಗಾರಿಕೆಯ ಎಚ್ಚರವನ್ನು ಹೊಂದಿವೆ.

About the Author

ಎಸ್.ಎನ್. ಶಿವಸ್ವಾಮಿ
(09 February 1920 - 13 August 2007)

ಕನ್ನಡದಲ್ಲಿ ಹಾಸ್ಯ ಸಾಹಿತ್ಯಕ್ಕೊಂದು ಗೌರವ ತಂದ ಎಂದೇ ಖ್ಯಾತಿಯ ಸಾಹಿತಿ ಎಸ್.ಎನ್. ಶಿವಸ್ವಾಮಿ (ಸೇಲಂ ನಂಜುಂಡಯ್ಯ ಶಿವಸ್ವಾಮಿ) ಚಿಕ್ಕಬಳ್ಳಾಪುರ ಮೂಲದವರು. ತಂದೆ ಸೇಲಂ ನಂಜುಂಡಯ್ಯ, ತಾಯಿ ಶಾರದಮ್ಮ. ಬೆಂಗಳೂರು  ಸೆಂಟ್ರಲ್‌ ಕಾಲೇಜಿನಿಂದ ಬಿ.ಎಸ್ಸಿ. (ಆನರ್ಸ್) ಪದವೀಧರರು.ಬರೋಡದ ಕಾಲೇಜೊಂದರಲ್ಲಿ ಝಾಆಲಜಿ ಬೋಧನೆ. ಆದರೆ, ಅಲ್ಲಿಯ ರಾಜಕೀಯದಿಂದ ಬೇಸತ್ತು ಬಂದರು. ಆಲ್‌ ಇಂಡಿಯಾ ರೇಡಿಯೋ. ‘ಫೆಡರಲ್‌ ರಿಪಬ್ಲಿಕ್‌ ಸರ್ವೀಸ್‌ ಕಮೀಷನ್‌’ (ಆಗ ಇದ್ದುದು) ನಿಂದ (1944) ಆಯ್ಕೆಯಾಗಿ ಸಹಾಯಕ ಕಾರ್ಯಕ್ರಮ ಅಧಿಕಾರಿಯಾದರು. ಮದರಾಸಿನ ಆಲ್‌ ಇಂಡಿಯಾ ರೇಡಿಯೊ. ತಮಿಳು, ತೆಲುಗು, ಮಲಯಾಳಂ ಭಾಷೆಗಳ ಮಧ್ಯೆ ಕನ್ನಡವನ್ನೂ ಬಿಂಬಿಸಿದರು.  ಬೀಚಿಯವರ ಸ್ನೇಹ ದೊರೆತ ಮೇಲೆ ...

READ MORE

Related Books