ನಗೆಯ ಹೊಗೆ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 40

₹ 40.00




Year of Publication: 2008
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ದ.ರಾ.ಬೇಂದ್ರೆಯವರು 1936ರಲ್ಲಿ ರಚಿಸಿದ ನಾಟಕ ನಗೆಯ ಹೊಗೆ. ಇದು ಅವರ ಏಳನೆಯ ನಾಟ. ಇದೊಂದು ಏಕಾಂಕ. ಅವರ ಎರಡು ಆವಿದ್ದ ಪ್ರಯೋಗಗಳಲ್ಲಿ (ದುಃಖಾಂತ) ಇದು ಕೂಡ ಒಂದು. ನಾಟಕದಲ್ಲಿ ಆರು ಪ್ರವೇಶಗಳಿವೆ. ಈ ನಾಟಕವು 27 ಪುಟಗಳಲ್ಲಿದೆ. ನಿತ್ಯ ಕಾಣುವ ಸಮಸ್ಯೆಯನ್ನು ನಾಟಕದ ವಸ್ತುವನ್ನಾಗಿ ಬಳಸಿ ಅದರಿಂದ ಓದುಗರೇ ಸಮಸ್ಯೆಯ ಪರಿಹಾರವನ್ನು ಕಂಡುಕೊಳ್ಳಬೇಕು ಎಂಬುದು ನಾಟಕಕಾರರ ಉದ್ದೇಶ. ಮುನ್ನುಡಿಯಲ್ಲಿ ’ಸಮಾಜದಲ್ಲಿ ಕಂಡು ಬರುವ ಅನೇಕ ಕುಂದುಕೊರತೆಗಳಿಗೆ 'ಸಮಾಜ' ವೇ ಕಾರಣವೆಂದು ನಾವು ಮೇಲಿಂದ ಮೇಲೆ ಎನ್ನುತ್ತೇವೆ. ಆದರೆ ಸಮಾಜವೇ ಹೇಗೆ ಕಾರಣವೆಂಬುದನ್ನು 'ಜನಸಂಘ' ದ ಜೀವನದಿಂದಲೇ ನಾಟಕಗಳಲ್ಲಿ ತೋರಿಸಿರುವುದಿಲ್ಲ. ಈ ಚಿಕ್ಕ ದೃಶ್ಯದಲ್ಲಿ ಹಾಗೆ ತೋರಿಸಲಾಗಿದೆ' ಎಂದು ಹೇಳಿದ್ದಾರೆ. ಸಮಾಜದ ಕಠೋರ ಹಿಡಿತಕ್ಕೆ ಸಿಕ್ಕಿ ನಲುಗುವ ಒಂದು ಕುಟುಂಬ ಮತ್ತು ಅಲ್ಲಿ ಹೆಣ್ಣು ಬಲಿಯಾಗುವ ದುರಂತದ ಚಿತ್ರಣವು ಕಂಡು ಬರುತ್ತದೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books