ನಗ್‌ನಗ್ತಾ ವಿಜ್ಞಾನ

Author : ಶರಣಬಸವೇಶ್ವರ ಅಂಗಡಿ

₹ 140.00




Published by: ಭೂಮಿ ಬುಕ್ಸ್
Address: ಮಳಿಗೆ ಸಂಖ್ಯೆ 150, 1ನೇ ಮೇನ್, 2ನೇ ಮುಖ್ಯರಸ್ತೆ, ಶ್ರೀರಾಮಪುರ, ಶೇಷಾದ್ರಿಪುರಂ, ಬೆಂಗಳೂರು-560020.
Phone: 9449177628

Synopsys

ಲೇಖಕರಾದ ಶರಣಬಸವೇಶ್ವರ ಅಂಗಡಿ ಹಾಗೂ ಟಿ. ಆರ್. ಅನಂತರಾಮು ಅವರು ರಚಿಸಿದ ಲೇಖನ ಕೃತಿ ʻನಗ್‌ನಗ್ತಾ ವಿಜ್ಞಾನʼ. ಪುಸ್ತಕದಲ್ಲಿ ವಿಸ್ತಾರವಾದ ವಿಷಯಗಳ ಕುರಿತಾದ ಹಲವಾರು ಪ್ರಶ್ನೆಗಳು, ಅದಕ್ಕೆ ವೈಜ್ಞಾನಿಕ ಉತ್ತರಗಳನ್ನು ತಮಾಷೆಯ ರೀತಿಯಲ್ಲಿ ಹೇಳಲಾಗಿದೆ. 'ಎಕ್ಸ್ʼ ಕಿರಣವೇ ಏಕೆ? 'ವೈ' ಕಿರಣ ಯಾಕೆ ಅಲ್ಲ? ಚಂದ್ರ ನೀಲಿಯಾಗುವುದು ಯಾವಾಗ? ಭಾಷಣಕ್ಕೆ ನಿಂತಾಗ ಗಂಟಲು ಒಣಗುವುದು ಏಕೆ? ಗಾಯ ಮಾಯುವಾಗ ನವೆ-ತುರಿಕೆ ಏಕೆ? ಇಂದ್ರಜಾಲದಲ್ಲಿ ಇಂದ್ರ ಹೇಗೆ ಬಂದ? ನಾಯಿ ಮಲಗುವ ಮುನ್ನ ಮೂರು ಸುತ್ತು ಹಾಕುವುದೇಕೆ? ಹೀಗೆ, ನಮ್ಮ ಮುಂದೆಯೆ ನಿತ್ಯವೂ ನಡೆಯುವ, ಆದರೆ ನಾವು ಕ್ಷುಲ್ಲಕ ಎಂದು ಪರಿಗಣಿಸುವ ಹಲವು ಹತ್ತು ವಿಷಯಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ. ಪ್ರತಿಯೊಂದು ಕ್ರಿಯೆಯ ಹಿಂದೆಯೂ ಇರುವ ವಿಜ್ಞಾನವನ್ನು ಬಹಳ ಸರಳವಾಗಿ ಎಲ್ಲಾ ವಯೋಮಾನದವರಿಗೂ ಅರ್ಥವಾಗುವ ರೀತಿಯಲ್ಲಿ ಹೇಳುವ ಪ್ರಯತ್ನ ಈ ಕೃತಿಯಲ್ಲಿ ನಡೆದಿದೆ.

About the Author

ಶರಣಬಸವೇಶ್ವರ ಅಂಗಡಿ

ಡಾ. ಶರಣಬಸವೇಶ್ವರ ಅಂಗಡಿ ವೃತ್ತಿಯಿಂದ ಕೃಷಿ ವಿಜ್ಞಾನಿಯಾಗಿದ್ದಾರೆ.  ಧಾರವಾಡದ ಕೃಷಿ ಕಾಲೇಜು, ತಮಿಳುನಾಡು ಕೃಷಿ ವಿಶ್ವವಿದ್ಯಾಲಯ ಹಾಗೂ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಗಳಲ್ಲಿ ಅಭ್ಯಾಸ ಮಾಡಿ ಕೃಷಿಯಲ್ಲಿ ಕ್ರಮವಾಗಿ ಬಿ.ಎಸ್ಸಿ., ಎಂ.ಎಸ್ಸಿ. ಮತ್ತು ಪಿಎಚ್.ಡಿ., ಪದವಿ ಗಳನ್ನು ಪಡೆದಿದ್ದಾರೆ. ಬೆಂಗಳೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯಗಳ ಹಾಗೂ ಭಾರತೀಯ ಕೃಷಿ ಸಂಶೋಧನಾ ಸೇವೆಯ ವಿಜ್ಞಾನಿಯಾಗಿ ಅನುಭವ ಹೊಂದಿದ್ದಾರೆ. 1993 ರಿಂದ ಖಾಸಗಿ ಬೀಜೋದ್ಯಮದ ನಂಟು ಹೊಂದಿರುವ ಇವರು ಬಹುರಾಷ್ಟ್ರೀಯ ಕಂಪೆನಿಯೊಂದರ ಸಂಶೋಧನಾ ಮುಖ್ಯಸ್ಥರು, ಅನೇಕ ಪತ್ರಿಕೆ, ನಿಯತ ಕಾಲಿಕೆಗಳಲ್ಲಿ ತಮ್ಮ ನೆಚ್ಚಿನ ವಿಷಯದ ಬಗ್ಗೆ ಸುಮಾರು 50 ಜನಪ್ರಿಯ ವಿಜ್ಞಾನ ...

READ MORE

Related Books