ನಳ ಚರಿತ್ರೆ

Author : ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)

Pages 113

₹ 0.00




Year of Publication: 1938
Published by: ವೆಂಕಟೇಶ ತಿರಕೋ ಕುಲಕರಣಿ
Address: ಹಾವೇರಿ

Synopsys

ಗಳಗನಾಥರು ಬರೆದ ಕೃತಿ-ನಳಚರಿತ್ರೆ. ಇದು  ಮಹಾಭಾರತಾಮೃತದ ವನಪರ್ವದೊಳಗಿರುವ ರಹಸ್ಯ ಪ್ರಕಾಶಕದ ಭಾಗವಾಗಿದ್ದು, ವಿವಾಹವಾದ ಮೇಲೆ ಶೀಲವೂ, ನಿಯತಾಚರಣೆಯೂ ಹಾಗೂ ತೇಜಸ್ವಿತೆಯೂ ಇರಬೇಕು ಎಂಬುದಕ್ಕೆ ನಳ ಚರಿತ್ರೆ ತನ್ನದೇ ಆದ ರಹಸ್ಯವನ್ನು ತಿಳಿಸುತ್ತದೆ.

ನಳಚರಿತ್ರೆ, ದಮಯಂತಿಯ ಸ್ವಯಂವರ, ದಮಯಂತಿಯ ತ್ಯಾಗ, ದಮಯಂತಿಯ ವಿಲಾಪ, ನಳನ ಅಜ್ಞಾತವಾಸ, ನಳನ ಶೋಧ, ದಮಯಂತಿಯ ಯೋಚನೆ, ನಳದಮಯಂತಿ ಸಂಯೋಗ ನಂತರ ಸ್ತ್ರೀಯರಿಗೆ ಸ್ವಾತಂತ್ಯ್ರ ಕೊಡಬಹುದೋ ( ಸ್ತ್ರೀ ಸ್ವಾತಂತ್ಯ್ರ), ಸ್ತ್ರೀಯರಲ್ಲಿಯ ವರ್ಗಗಳು ಹಾಗೂ ಸ್ತ್ರೀಯರಲ್ಲಿಯ ಬಾಲ-ಪ್ರೌಢವಿವಾಹಗಳು ಹೀಗೆ ಚಿಂತನೆಗಳಿವೆ. 

About the Author

ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)
(05 January 1869 - 22 April 1922)

ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...

READ MORE

Related Books