ನಾಳೆಗಳನ್ನು ನಂಬಬಹುದೇ

Author : ಕೆ.ಎನ್. ಭಗವಾನ್

Pages 120

₹ 100.00




Year of Publication: 2021
Published by: ನ್ಯೂ ವೇವ್ ಬುಕ್ಸ್
Address: #90/3, ಒಂದನೇ ಮಹಡಿ, ಈ.ಎ.ಟಿ ಸ್ಟ್ರೀಟ್ ಬಸವನಗುಡಿ, ಬೆಂಗಳೂರು- 560004
Phone: 9448788222

Synopsys

‘ನಾಳೆಗಳನ್ನು ನಂಬಬಹುದೇ’ ಕೃತಿಯು ಕೆ.ಎನ್.ಭಗವಾನ್‌ ಅವರ ಪ್ರಬಂಧಗಳ ಸಂಕಲನವಾಗಿದೆ. ಪ್ರಸ್ತುತ ಈ ಸಂಕಲನದಲ್ಲಿ ಹದಿನಾರು ಲೇಖನಗಳಿವೆ. ಕಾಗದ ಬರೆಯೋಣ, ಟೂರಿಂಗ್ ಟಾಕೀಸು, ಅಸಹಿಷ್ಣುತೆ, ಆರ್ಯ ದ್ರಾವಿಡವೆಂಬ ಕಿತಾಪತಿ, ಕಥಾ ಸಮಯಯ, ಮಸಾಲೆ ದೋಸೆಯ ಘಮತ್ತು!, ಕೊಡೆಗಳು, ನನ್ನ ಗುರುಗಳು, ಚಪ್ಪಲಿಗಳು, ಟಿಕ್ ಟಿಕ್ ಗೆಳೆಯ, ಅರಳೀಕಟ್ಟೆಯೂ, ಟೀವಿ ಚರ್ಚೆಯೂ, ಪ್ರತಿಮಾ ಪ್ರತಿಷ್ಠೆ, ನಾಳೆಗಳನ್ನು ನಂಬಬಹುದೇ?, ನವರಾತ್ರಿ ಸಂಭ್ರಮ, ಮಧ್ಯವರ್ತಿ ಮಹತ್ವ, ಕ್ರಿಕೆಟ್ಟೆಂಬ ಕಾಲಕ್ಷೇಪ ಇವುಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ‘ಟಿಕ್ ಟಿಕ್ ಗೆಳೆಯ’, ‘ಟೂರಿಂಗ್ ಟಾಕೀಸು’, ಮತ್ತು ‘ಅರಳೀಕಟ್ಟೆಯೂ ಟೀವಿ ಚರ್ಚೆಯೂ, ಉತ್ಥಾನ ಮಾಸ ಪ್ರತಿಕೆಯಲ್ಲೂ ಪ್ರಕಟಗೊಂಡಿವೆ.

About the Author

ಕೆ.ಎನ್. ಭಗವಾನ್
(09 June 1942)

ಲೇಖಕ ಕೆ.ಎನ್. ಭಗವಾನ್ ಅವರು (ಜನನ: 1942, ಜೂನ್ 9 ) ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕ್ಯಾಶಾವಾರ ಗ್ರಾಮದವರು. ಹುಟ್ಟೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ, ಅಕ್ಕರಾಂಪುರದಲ್ಲಿ ಮಾಧ್ಯಮಿಕ ಶಿಕ್ಷಣ ಮತ್ತು ಮಧುಗಿರಿಯಲ್ಲಿ ಪ್ರೌಢಶಾಲಾ ಶಿಕ್ಷಣ, ನಂತರ, ತುಮಕೂರಿನ ಪಾಲಿಟೆಕ್ನಿಕಲ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಪದವಿ ಪಡೆದರು. ದೆಹಲಿಯ ಏರೋನಾಟಿಕ್ ಸೊಸೈಟಿ ಆಫ್ ಇಂಡಿಯಾದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಹಾಗೂ  ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ ಪಡೆದರು.  ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಮೇಲ್ವಿಚಾರಕರಾಗಿ ಉದ್ಯೋಗಕ್ಕೆ ಸೇರಿದರು. ಎಚ್. ಎ. ಎಲ್ ಸಂಸ್ಥೆಯಲ್ಲಿ ಅಧಿಕಾರಿಗಳಾಗಿ 37 ವರ್ಷ ದೀರ್ಘಕಾಲ ...

READ MORE

Related Books