ನಲಿವಿನ ನಾಲಗೆ

Author : ಸುಮಾ ವೀಣಾ

Pages 128

₹ 120.00




Year of Publication: 2019
Published by: ಸ್ನೇಹ ಬುಕ್‌ಹೌಸ್‌
Address: ನಂ.165, 10ನೇ ಮುಖ್ಯ ರಸ್ತೆ, ಶ್ರೀನಗರ ಬಸ್ ನಿಲ್ದಾಣ ಹತ್ತಿರ ಶ್ರೀನಗರ, ಬೆಂಗಳೂರು - 560 050
Phone: 9845031335

Synopsys

ಎರಡು ಮೂರು ಲೇಖನಗಳನ್ನು ಹೊರತುಪಡಿಸಿದರೆ ಉಳಿದ ಲೇಖನಗಳು 'ಶುದ್ದ ಪ್ರಬಂಧದ ಜಾತಿಗೆ ಸೇರಿವೆ. ಇಲ್ಲಿಯ ಪ್ರಬಂಧಗಳಲ್ಲಿ ಅನೇಕ ವಸ್ತು ವಿವರಗಳನ್ನು ಒಂದೊಂದಾಗಿ ಸಾವಧಾನವಾಗಿ ವಿವರಿಸುತ್ತ ಚಿತ್ರಿಸಿದ್ದಾರೆ- ಪ್ರಬಂಧಗಾರ್ತಿ. ಅವರ ಬರಹದ ಹಿಂದೆ ಶುದ್ದವಾದ ತೆರದ ಭಾವವಿದೆ, ವೈಚಾರಿಕತೆಯು ಇಲ್ಲಿಯ ಸ್ಥಾಯಿಭಾವವಾಗಿದೆ. ತಮ್ಮ ಲೇಖನಿಯನ್ನು ಇನ್ನಷ್ಟು ಪಳಗಿಸಿಕೊಳ್ಳುತ್ತ, ಸಮಾಜ ಸಂಸ್ಕೃತಿಯನ್ನು ಇನ್ನಷ್ಟು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತ; ಮುಂದುವರಿಯುವ ಉತ್ತಮ ಪ್ರಬಂಧಗಳು ಇಲ್ಲಿವೆ.

About the Author

ಸುಮಾ ವೀಣಾ
(04 July 1977)

ಪ್ರಬಂಧಗಾರ್ತಿ ಸುಮಾ ವೀಣಾ ಅವರು ಉಪನ್ಯಾಸಕಿ. ತಂದೆ ಪುಟ್ಟರಾಜು, ತಾಯಿ ಲಲಿತಾ. ಹಾಸನದ ಹೇಮಗಂಗೋತ್ರಿಯಲ್ಲಿ ಕನ್ನಡ ಎಂ. ಎ ಅಧ್ಯಯನ. ವಿದ್ಯಾರ್ಥಿ ದಿಸೆಯಿಂದಲೇ ರಾಜ್ಯ ಮತ್ತು ರಾಷ್ಟ್ರಿಯ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ಅವರ ಬರೆಹಗಳು ವಿಜಯವಾಣಿ, ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾಗಿವೆ. ವಚನ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ. ಕೃತಿಗಳು: ನಲಿವಿನ ನಾಲಗೆ (ಪ್ರಬಂಧಗಳ ಸಂಕಲನ), ಶೂರ್ಪನಖಿ ಅಲ್ಲ ಚಂದ್ರ ನಖಿ (ಕವನ ಸಂಕಲನ), ಮನಸ್ಸು ಕನ್ನಡಿ (ಪ್ರಬಂಧಗಳ ಸಂಕಲನ). ...

READ MORE

Related Books