ನಾಲ್ಕನೇ ಎಕರೆ

Author : ಅಜಯ್ ವರ್ಮಾ ಅಲ್ಲೂರಿ

Pages 112

₹ 100.00
Year of Publication: 2021
Published by: ಛಂದ ಪುಸ್ತಕ
Address: ಐ-004, ಮಂತ್ರಿ ಪ್ಯಾರಡೇಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು- 560076
Phone: 9844422782

Synopsys

‘ನಾಲ್ಕನೇ ಎಕರೆ’ ತೆಲುಗಿನ ಮಿಥುನ ಕೃತಿಯ ಲೇಖಕರಾದ ಶ್ರೀರಮಣ ಅವರ ತೆಲುಗು ನೀಳ್ಗತೆಗಳ ಕನ್ನಡಾನುವಾದ. ಈ ನೀಳ್ಗತೆಯನ್ನು ಲೇಖಕ, ಅನುವಾದಕ ಅಜಯ್ ವರ್ಮಾ ಅಲ್ಲೂರಿ ಕನ್ನಡೀಕರಿಸಿದ್ದಾರೆ. ಛಂದ ಪ್ರಕಾಶನ ಪ್ರಕಟಿಸಿರುವ ಈ ಕೃತಿಯಲ್ಲಿ ರೈತರ ಬದುಕನ್ನು ಅತ್ಯಂತ ಸೂಕ್ಷ್ಮವಾಗಿ, ಕಲಾತ್ಮಕವಾಗಿ, ಭಾವುಕವಾಗಿ ಚಿತ್ರಿಸುವ ಕತೆ ನೇಪಥ್ಯದಲ್ಲಿದ್ದುಕೊಂಡೇ ರೈತರ ಬದುಕಿನ ಮೇಲೆ ಆಕ್ರಮಣ ಮಾಡುವ ಕಾರ್ಪೊರೇಟ್ ವ್ಯವಸ್ಥೆಯ ಕ್ರೌರ್ಯವನ್ನು ಆರ್ದ್ರವಾಗಿ ಹೇಳುತ್ತದೆ. ಇದು ಸದ್ಯದ ಭಾರತದ ಸ್ಥಿತಿ-ಗತಿಯನ್ನು ಚಿತ್ರಿಸುವ ಸಮಕಾಲೀನ ಕಥನ. ರೈತ ಕುಟುಂಬಗಳ ಎರಡು ತಲೆಮಾರುಗಳ ಸಂಘರ್ಷವನ್ನು ಈ ಕತೆ ಸಮರ್ಥವಾಗಿ ಕಟ್ಟಿಕೊಡುತ್ತದೆ.

ಈ ನೀಳ್ಗತೆಯನ್ನು ಅನುವಾದಿಸಿರುವ ಅಜಯ್ ವರ್ಮಾ ಅಲ್ಲೂರಿ ಅವರು ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಅಭ್ಯಾಸ ಮಾಡುತ್ತಿದ್ದು, ಈಗಾಗಲೇ ಮಾಡಿರುವ ಸಾಧನೆ ಅಚ್ಚರಿ ಮೂಡಿಸುವಂತಹದ್ದು. ನಾಲ್ಕು ಕೃತಿಗಳನ್ನು ರಚಿಸಿರುವ ಇವರಿಗೆ ಕುವೆಂಪು ಭಾಷಾ ಭಾರತಿ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿ-ಬಹುಮಾನಗಳು ಸಂದಿವೆ. ಗುಂಟೂರು ಜಿಲ್ಲೆಯ ತೆನಾಲಿ ಸೀಮೆಯ ಗ್ರಾಮ್ಯವನ್ನು ಹೊಂದಿರುವ ಮೂಲಕೃತಿಯನ್ನು, ತಮ್ಮ ರಾಯಚೂರು ಸೀಮೆಯ ರೈತರ ಭಾಷೆಯನ್ನು ಬಳಸಿಕೊಂಡು ಯಶಸ್ವಿಯಾಗಿ ಅನುವಾದಿಸಿದ್ದಾರೆ.

About the Author

ಅಜಯ್ ವರ್ಮಾ ಅಲ್ಲೂರಿ
(07 September 1996)

ಯುವಲೇಖಕ, ಅನುವಾದಕ ಅಜಯ್ ವರ್ಮಾ ಅಲ್ಲೂರಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರು. ಕಾಲೇಜುದಿನಗಳಿಂದ ಸಾಹಿತ್ಯಾಸಕ್ತಿ ಬೆಳೆಸಿಕೊಂಡ ಅಜಯ್, ಕ್ರೈಸ್ಟ್ ಕಾಲೇಜಿನ ಬೇಂದ್ರೆ ಕಾವ್ಯ ಸ್ಪರ್ಧೆ ಮತ್ತು ಅ.ನ.ಕೃ.ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅಜಯ್ ವರ್ಮಾ ಅಲ್ಲೂರಿಯವರ ಮನೆ ಭಾಷೆ ತೆಲುಗು.  ಎರಡೂ ಭಾಷೆಗಳಲ್ಲೂ ಹಿಡಿತ ಸಾಧಿಸಿರುವ ಅವರು ಕನ್ನಡದ ಕವಿತೆಗಳನ್ನು ತೆಲುಗಿಗೆ ಅನುವಾದಿಸಿದ್ದಾರೆ. ಜೊತೆಗೆ ತೆಲುಗಿನ ಕೃತಿಗಳನ್ನೂ ಕನ್ನಡೀಕರಿಸಿದ್ದಾರೆ. 'ಗಗನಸಿಂಧು',  'ಡಯಾನಾ ಮರ' ಮತ್ತು ಕನ್ನಡ ಕವಿತೆಗಳ ತೆಲುಗು ಅನುವಾದ ಕೃತಿ  'ಕಲಲ ಕನ್ನೀಟಿ ಪಾಟ' ಪ್ರಕಟಗೊಂಡಿವೆ.  ಕಳೆದ ಎರಡು-ಮೂರು ವರ್ಷಗಳಿಂದೀಚೆಗೆ ...

READ MORE

Related Books