ನಮ್ ಕಂಪ್ ನಿ ನಮ್ಕ್ಳಬ್ಬ ಮತ್ತು ಅನುಕೂಲಕ್ಕೊಬ್ಬಣ್ಣ

Author : ಟಿ.ಪಿ. ಕೈಲಾಸಂ

Pages 78

₹ 1.00




Year of Publication: 1962
Published by: ಶಾರದಾ ಪ್ರಕಟನಾಲಯ
Address: ಅರಳೇಪೇಟೆ, ಬೆಂಗಳೂರು-2.

Synopsys

ಟಿ.ಪಿ. ಕೈಲಾಸಂ ಅವರು ಬರೆದ ಮೂರು ನಾಟಕಗಳ ಸಂಕಲನ-ನಮ್ ಕಂಪ್ ನಿ ನಮ್ಕ್ಳಬ್ಬ ಮತ್ತು ಅನುಕೂಲಕ್ಕೊಬ್ಬಣ್ಣ. ನಮ್ ಕಂಪ್ ನಿ -ಈ ನಾಟಕದ ಎರಡನೇ ಮುದ್ರಣವರೆಗೂ ಇದ್ದು, ಮೂರನೇ ಮುದ್ರಣದ ವೇಳೆ ನಮ್ಕ್ಳಬ್ಬ ಮತ್ತು ಅನುಕೂಲಕ್ಕೊಬ್ಬಣ್ಣ_ ಈ ಎರಡೂ ನಾಟಕಗಳನ್ನು ಸೇರ್ಪಡೆಗೊಳಿಸಲಾಯಿತು. ಕೈಲಾಸಂ ಅವರ ನಾಟಕಗಳ ವೈಶಿಷ್ಟ್ಯ- ಆಡುಮಾತಿನ ಪಕ್ಕಾ ಭಾಷೆ. ಇಂತಹ ಭಾಷೆಯ ಮೂಲಕವೇ ಪಾತ್ರ, ಘಟನೆ-ಸನ್ನಿವೇಶದ ಭಾವವು ಸಂಪೂರ್ಣವಾಗಿ ಓದುಗರಿಗೆ ಹಾಗೂ ಪ್ರೇಕ್ಷಕರಿಗೆ ರವಾನೆಯಾಗಬೇಕು ಎಂಬುದು ಲೇಖಕರ ಆಶಯ. ಇಲ್ಲಿಯ ನಾಟಕಗಳಲ್ಲಿ ಇಂಗ್ಲಿಷ್ ಭಾಷೆಯು ಶೇ.70ಕ್ಕಿಂತ ಅಧಿಕವಾಗಿದ್ದು, ಆ ಪಾತ್ರದ ವ್ಯಕ್ತಿತ್ವವನ್ನು ಇಂಗ್ಲಿಷ್ ಭಾಷೆಯ ಮೂಲಕವೇ ವ್ಯಕ್ತ ಮಾಡಿದ್ದು, ಅನಿವಾರ್ಯವೆನಿಸುತ್ತದೆ.

About the Author

ಟಿ.ಪಿ. ಕೈಲಾಸಂ
(26 July 1885 - 23 November 1946)

ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ 26-07-1885ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ 1908ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ 6 ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ 1915ಕ್ಕೆ ಬೆಂಗಳೂರಿಗೆ ಹಿಂತಿರುಗಿದರು. ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ 5 ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು. ವ್ಯಾಯಾಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕೈಲಾಸಂ ಕನ್ನಡ ...

READ MORE

Related Books