ನಂಬಿಕೆ, ಮೂಢನಂಬಿಕೆ, ವೈಜ್ಞಾನಿಕ ಮನೋವೃತ್ತಿ

Author : ಎಂ. ಅಬ್ದುಲ್ ರೆಹಮಾನ್ ಪಾಷಾ

Pages 200

₹ 144.00




Year of Publication: 2016
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 0802220358001

Synopsys

‘ನಂಬಿಕೆ, ಮೂಢನಂಬಿಕೆ, ವೈಜ್ಞಾನಿಕ ಮನೋವೃತ್ತಿ’ ಕೃತಿಯು ಡಾ. ಅಬ್ದುಲ್ ರೆಹಮಾನ್ ಪಾಷಾ ಅವರು ಬರೆದಿದ್ದಾರೆ. ಓದುಗರಲ್ಲಿ ವೈಜ್ಞಾನಿಕ ಮನೋಭಾವ ರೂಢಿಸುವ ಪ್ರಯತ್ನ ಇದಾಗಿದೆ. ನಂಬಿಕೆಗೆ, ಮೂಢನಂಬಿಕೆ ಹಾಗೂ ವೈಜ್ಞಾನಿಕ ಮನೋಭಾವಕ್ಕೆ ಇರುವ ವ್ಯತ್ಯಾಸವನ್ನು ಇಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ನಂಬಿಕೆ ತೀರಾ ವ್ಯಕ್ತಿಗತವಾದ ಅಂಶ. ಅದನ್ನು ಸಾಮಾಜಿಕವಾಗಿ ಹೇರಲು ಯತ್ನಿಸಬಾರದು. ಯಾವುದೇ ಆಧಾರವಿಲ್ಲದ ಭಯಗ್ರಸ್ತ ನಂಬಿಕೆಯು ಮೂಢನಂಬಿಕೆಯಾಗುತ್ತದೆ. ವೈಜ್ಞಾನಿಕ ಮನೋಭಾವವು ಆಧಾರಸಹಿತವಾದ ದೃಢ ನಿಲುವು. ಇದನ್ನು ಸಾರ್ವತ್ರಿಕವಾಗಿಯೂ ಸಾಬೀತುಪಡಿಸಲು ಬರುತ್ತದೆ. ಇಂತಹ ಅಂಶಗಳ ವಿಶ್ಲೇಷಣೆ ಈ ಕೃತಿಯಲ್ಲಿದೆ.

ಈ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ‘ಕಾವ್ಯನಂದ’ ಪ್ರಶಸ್ತಿ (2015) ಲಭಿಸಿದೆ. ಶಿವಮೊಗ್ಗದ ಕರ್ನಾಟಕ ಸಂಘ, ಪಿ. ಲಂಕೇಶ್ ಹೆಸರಿನಲ್ಲಿ ನೀಡುವ “ಅತ್ಯುತ್ತಮ ಮುಸ್ಲಿಮ್ ಲೇಖ“ ಹಾಗೂ  ನಾಡೋಜ ಡಾ. ಬರಗೂರು ಪ್ರತಿಷ್ಠಾನವು ವಿಚಾರ ಸಾಹಿತ್ಯಕ್ಕಾಗಿ ನೀಡುವ ರಾಜ್ಯ ಮಟ್ಟದ “ಬರಗೂರು ಪುಸ್ತಕ ಪ್ರಶಸ್ತಿ“ 2015 ಲಭಿಸಿದೆ.

About the Author

ಎಂ. ಅಬ್ದುಲ್ ರೆಹಮಾನ್ ಪಾಷಾ

ಸಿನಿಮಾ, ಮಾಧ್ಯಮ ಮತ್ತು ವಿಜ್ಞಾನಗಳಿಗೆ ಸಂಬಂಧಿಸಿದಂತೆ  ಬರೆಯುವ ಅಬ್ದುಲ್ ರೆಹಮಾನ್ ಪಾಷಾ ಕನ್ನಡ ಲೇಖಕರು. ಗಾಂಧೀ ನೆಹರೂ ಆಯ್ದ ಪತ್ರಗಳು, ಅಭಿವೃದ್ಧಿ ಸಂವಹನ ಕೌಶಲ್ಯಗಳು, ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ, ವೈಜ್ಞಾನಿಕ ಮನೋವೃತ್ತಿ ಮಕ್ಕಳ ಹಕ್ಕು, ಶಿಕ್ಷಕರ ಹೊಣೆ, ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ, ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಶ್ವಮಾನ್ಯರು ಜೀವನ ಚರಿತ್ರೆ ಮಾಲೆಯಲ್ಲಿ ಮಹಾತ್ಮ ಗಾಂಧಿ, ಟೀಪು ಸುಲ್ತಾನ, ಜವಾಹರಲಾಲ್ ನೆಹರೂ, ಪ್ರವಾದಿ ಮುಹಮ್ಮದ್ ಕಿರುಹೊತ್ತಿಗೆಗಳು ಮುದ್ರಣ ಕಂಡಿವೆ. ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ’ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ‘ಕಾವ್ಯನಂದ’ ಪ್ರಶಸ್ತಿ (2015), ಶಿವಮೊಗ್ಗದ ...

READ MORE

Related Books