ನಮ್ಮ ಭೈರಪ್ಪನವರು

Author : ಎಂ. ಎಸ್‍ ವಿಜಯಾಹರನ್

Pages 480

₹ 432.00
Year of Publication: 2020
Published by: ಸಂಸ್ಕೃತಿ ಬುಕ್ ಪ್ಯಾರಡೈಸ್
Address: ಲಕ್ಷ್ಮೀಪುರಂ , ಮೈಸೂರು - 560004

Synopsys

ನಮ್ಮ ಭೈರಪ್ಪನವರು (ಓದುಗರ ಮನದಾಳದ ಮಾತು) ಕೃತಿಯನ್ನು ಎಂ.ಎಸ್. ವಿಜಯಾಹರನ್ ಅವರು ಸಂಪಾದಿಸಿದ್ದು, ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರ ಸಾಹಿತ್ಯಕ ಸಾಧನೆ ಕುರಿತು ವಿವಿಧೆಡೆಯ ಲೇಖಕರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಸಂಗ್ರಹಿಸಿ ನೀಡಿದ್ದು ಈ ಕೃತಿಯ ಹೆಚ್ಚುಗಾರಿಕೆ. ಭೈರಪ್ಪನವರ ಸಾಹಿತ್ಯಕ ಸಾಧನೆಯನ್ನು ಓದುಗರು ಹೇಗೆ ಕಂಡಿದ್ದಾರೆ, ಯಾವ ಮತ್ತು ಎಂತಹ ನಿರೀಕ್ಷೆ ಹೊಂದಿದ್ದಾರೆ ಎಂಬ ಬಗ್ಗೆ ತಮ್ಮದೇ ಧಾಟಿಯಲ್ಲಿ ವ್ಯಕ್ತಪಡಿಸಿದ್ದನ್ನು ದಾಖಲಿಸಿದ ಕೃತಿ. ಆ ಮೂಲಕ ಭೈರಪ್ಪನವರ ಸಾಹಿತ್ಯಕ ವ್ಯಕ್ತಿತ್ವವನ್ನು ತೋರಲಾಗಿದೆ.

About the Author

ಎಂ. ಎಸ್‍ ವಿಜಯಾಹರನ್

ಮೂಲತಃ ಕೋಲಾರ ಜಿಲ್ಲೆಯವರಾದ ಬರಹಗಾರ್ತಿ ಎಂ.ಎಸ್. ವಿಜಯಾ ಹರನ್‌ ಅವರು ಸುಮಾರು ನಾಲ್ಕು ದಶಕಕ್ಕೂ ಹೆಚ್ಚು ಕಾಳ ಆಕಾಶವಾಣಿಯಲ್ಲಿ ಸೇವೆಸಲ್ಲಿಸಿ ನಿವೃತ್ತರಾದವರು. ಮೈಸೂರು, ಮಂಗಳೂರು, ಭದ್ರಾವತಿ, ಗುಲ್ಬರ್ಗ ಹಾಗೂ ಹಾಸನ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬಾನುಲಿ ಬೆಳಗು ಕಾರ್ಯಕ್ರಮದ ಮೂಲಕ ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ ಕಾರ್ಯಕ್ರಮಗಳ ಪ್ರಸಾರ, ತರಬೇತಿಗಳನ್ನು ನಡೆಸಿದ್ದಾರೆ.  ಆನಂದರ ಬದುಕು ಬರಹ - ಒಂದು ಅಧ್ಯಯನ, ಆಲೋಕ, ಅಜ್ಜಂಪುರ ಸೀತಾರಾಂ, ಸಂಕೇತಿ ಬೇಸಾಯದ ಬದುಕು, ಗಾದೆ ಗದ್ದುಗೆ, ಎಸ್.ಎಲ್. ಭೈರಪ್ಪನವರ ಕಾದಂಬರಿಯಲ್ಲಿ ಗಾದೆಗಳು ಮುಂತಾದ ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books