ನಮ್ಮ ಭಾರತ

Author : ವಿಜಯ್‌ ಜೋಷಿ

Pages 194

₹ 200.00




Year of Publication: 2022
Published by: ಹರಿವು ಬುಕ್ಸ್‌
Address: ಸೌತ್‌ ಅವೆನ್ಯೂ ಕಾಂಪ್ಲಕ್ಸ್‌ ಡಿ.ವಿ.ಜಿ ರಸ್ತೆ, ನಾಗಸಂದ್ರ ಸರ್ಕಲ್‌ ಬಸವನಗುಡಿ, ಬೆಂಗಳೂರು 560062
Phone: 8088822171

Synopsys

ನಮ್ಮ ಭಾರತವು ನಮ್ಮೆಲ್ಲರ ಹೃದಯಗಳಿಗೆ ಮತ್ತು ಕಣ್ಣುಗಳಿಗೆ ಬಗೆ ಬಗೆಯ ಚಿತ್ರಗಳನ್ನು ಕಟ್ಟಿಕೊಡುವ ಹೆಸರು – ಮರೆಯಲು ಆಗದ ಇತಿಹಾಸದ ನೆನಪುಗಳು, ಪುರಾಣಗಳು ಹಾಗೂ ಕಾವ್ಯಗಳ ಜೊತೆ ಬೆಸೆದುಕೊಂಡಿರುವ ಕಥೆಗಳು, ಆಳವಾದ ತಾತ್ವಿಕತೆಯನ್ನು ಹೊಂದಿರುವ, ಬ್ರಹ್ಮಾಂಡದ ಆತ್ಯಂತಿಕ ಸತ್ಯವೇನೆಂಬುದರ ಹುಡುಕಾಟ ಇರುವ ಉಪನಿಷತ್ತುಗಳನ್ನು ಜಗತ್ತಿಗೆ ಕೊಟ್ಟ ಜನರು; ಮಹಾನ್ ಧರ್ಮಗಳಿಗೆ ಜನ್ಮ ನೀಡಿದ ಪುರಾತನ ನಾಗರಿಕತೆ: ಪ್ರವಾಹದೋಪಾದಿಯಲ್ಲಿ ಬಂದ ವಲಸಿಗರನ್ನು ಸ್ವೀಕರಿಸಿದ ಸಮಾಜ; ಚಂದ್ರಗುಪ್ತ ಮೌರ್ಯನಂತಹ ಮಹಾನ್ ಕ್ಷತ್ರಿಯ ರಾಜನನ್ನು ಕಂಡ ದೇಶ, ಐದು ಸಾವಿರ ವರ್ಷಗಳಷ್ಟು ಹಳೆಯದಾದ ನಾಗರಿಕತೆ ಇದು. ದಾಳಿಕೋರರನ್ನು ತನ್ನಲ್ಲಿ ಒಂದಾಗಿಸಿಕೊಂಡ, ಅವರ ಆಲೋಚನೆಗಳು, ಕಲೆ, ಸಂಗೀತ, ಸಂಸ್ಕೃತಿಯನ್ನು ತನ್ನಲ್ಲಿ ಸೇರಿಸಿಕೊಂಡ ದೇಶ ಇದು ಎಂಬುದನ್ನು ಇಲ್ಲಿ ಬಿಂಬಿಸಲಾಗಿದೆ.

About the Author

ವಿಜಯ್‌ ಜೋಷಿ

ವಿಜಯ್‌ ಜೋಷಿ ವೃತ್ತಿಯಲ್ಲಿ ಪತ್ರಕರ್ತರು. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಹಿರಿಯ ಉಪ ಸಂಪಾದಕ ಆಗಿ ಕೆಲಸ ಮಾಡುತ್ತಿದ್ದಾರೆ. ರಾಜಕಾರಣ, ಆರ್ಥಿಕತೆ, ಜಾಗತೀಕರಣ, ತಂತ್ರಜ್ಞಾನ, ಶಿಕ್ಷಣ ಹೀಗೆ ಹಲವು ಕ್ಷೇತ್ರಗಳ ಕುರಿತು ಆಸಕ್ತಿ ಹೊಂದಿರುವ ವಿಜಯ್ ಆಧುನಿಕ ಕಾಲಘಟ್ಟಕ್ಕೆ ಕನ್ನಡವೂ ಸಜ್ಜಾಗಬೇಕು ಅನ್ನುವ ಕುರಿತು ವಿಶೇಷ ಕಾಳಜಿ ಹೊಂದಿದ್ದಾರೆ. ‘ನಮ್ಮ ಭಾರತ’ ಅವರ ಮೊದಲ ಅನುವಾದಿತ ಕೃತಿ. ...

READ MORE

Related Books