ನಮ್ಮ ದೇಹದ ವಿಜ್ಞಾನ

Author : ಟಿ. ಆರ್. ಅನಂತರಾಮು

Pages 550

₹ 1500.00




Year of Publication: 2021
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001,
Phone: 08022161900

Synopsys

ಲೇಖಕರಾದ ಡಾ. ಟಿ.ಆರ್. ಅನಂತರಾಮು ಹಾಗೂ ಡಾ. ನಾ. ಸೋಮೇಶ್ವರ ಅವರು ಜಂಟಿಯಾಗಿ ಸಂಪಾದಿತ ಕೃತಿ-ನಮ್ಮ ದೇಹದ ವಿಜ್ಞಾನ. ವೈದ್ಯಕೀಯ, ಭೌತವಿಜ್ಞಾನ, ರಸಾಯನಶಾಸ್ತ್ರ,ಗಣಿತ, ಎಂಜಿನಿಯರಿಂಗ್, ಪರಿಸರ ವಿಜ್ಞಾನ ಹೀಗೆ ವಿವಿಧ ಜ್ಞಾನದ ಶಿಸ್ತುಗಳ ಹಿನ್ನೆಲೆಯಲ್ಲಿ ನಮ್ಮ ದೇಹದ ವೈಜ್ಞಾನಿಕ ಚಟುವಟಿಕೆಗಳ ಮಾಹಿತಿಯನ್ನು ವಿಸ್ತೃತವಾಗಿ ನೀಡಿದ್ದು, ಸಾಮಾನ್ಯ ಜನರೂ ಸಹ ಈ ಕೃತಿಯ ಪ್ರಯೋಜನ ಪಡೆಯಬಹುದು. ದೇಹದ ಅತ್ಯಂತ ಕ್ಲಿಷ್ಟಕರವಾದ ಚಟುವಟಿಕೆಗಳನ್ನು ಸರಳವಾಗಿ ವಿವರಿಸಿದ್ದು ಈ ಕೃತಿಯ ವೈಶಿಷ್ಟ್ಯ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books