ನಮ್ಮ ಗಿರಡ್ಡಿ ಸರ್‌

Author : ಶ್ಯಾಮಸುಂದರ ಬಿದರಕುಂದಿ

Pages 218

₹ 100.00
Published by: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ
Phone: 0836-2790030

Synopsys

ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರದು ಬಹುಮುಖಿ ವ್ಯಕ್ತಿತ್ವ. ಅವರ ಒಡನಾಡಿಗಳು ಬರೆದ ಲೇಖನಗಲು ಈ ಕೃತಿಯಲ್ಲಿವೆ. ಈ ಕೃತಿಯಲ್ಲಿ ಒಟ್ಟು 52 ಲೇಖನಗಳಿವೆ.

ಜಿ.ಎಸ್‌.ಆಮೂರ, ಚೆನ್ನವೀರ ಕಣವಿ, ಗುರುಲಿಂಗ ಕಾಪಸೆ, ವೀಣಾ ಶಾಂತೇಶ್ವರ, ಚಂದ್ರಶೇಖರ ಪಾಟೀಲ, ಸಿ.ಎನ್‌.ರಾಮಚಂದ್ರನ್‌, ಸಿದ್ಧಲಿಂಗ ಪಟ್ಟಣಶೆಟ್ಟಿ, ಎಚ್‌.ಎಸ್‌.ವೆಂಕಟೇಶಮೂರ್ತಿ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಸೇರಿದಂತೆ ಹಲವು ಲೇಖಕರು ಮತ್ತು ಕವಿಗಳು ಗಿರಡ್ಡಿಯವರ ಬಗ್ಗೆ ಬರೆದ ಬರೆಹಗಳಿವೆ.

About the Author

ಶ್ಯಾಮಸುಂದರ ಬಿದರಕುಂದಿ
(18 May 1947)

ನಿವೃತ್ತ ಪ್ರಾಧ್ಯಾಪಕರಾಗಿರುವ ಡಾ. ಶ್ಯಾಮಸುಂದರ ಬಿದರಕುಂದಿ ಅವರು ಸದ್ಯ ಹುಬ್ಬಳ್ಳಿ  ನಿವಾಸಿಯಾಗಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಿಂ ಎಂ.ಎ., ಪಿಎಚ್‌.ಡಿ. ಪಡೆದಿರುವ ಅವರು ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು.  ಅಜ್ಜಗಾವಲು, ಅಲ್ಲಮ ಪ್ರಭುವಾದ, ಬರುವುದೇನುಂಟೊಮ್ಮೆ, ತಲೆ ಎತ್ತಿ ಶರಣು (ಕವನ ಸಂಕಲನ), ಕೃತಿ ನೋಟ, ಅಚ್ಚು ಕಟ್ಟು, ನೆಲೆಗಟ್ಟು, ಪ್ರಸಂಗೋಚಿತ (ವಿಮರ್ಶೆ), ನವ್ಯಮಾರ್ಗದ ಕಾದಂಬರಿಗಳು (ಪಿಎಚ್.ಡಿ. ಮಹಾಪ್ರಬಂಧ), ಗಂಧಕೊರಡು, ಪ್ರಬಂಧಪ್ರಪಂಚ, ಸ್ವಾತಂತ್ರ್ಯದ ಸವಿನೀರು, ಕರ್ಕಿಯವರ ಸಮಗ್ರ ಸಾಹಿತ್ಯ ( ಸಂಪಾದಿತ), ಗರೂಡ ಶ್ರೀಪಾದರಾವ; ಶಂಕರ ಮೊಕಾಶಿ ಪುಣೇಕರ; ಫ.ಶಿ. ಭಾಂಡಗೆ (ಇತರೆ) ಪ್ರಕಟಿತ ಕೃತಿಗಳು.  ...

READ MORE

Related Books