ನಮ್ಮ ಹಿಮಾಲಯ

Author : ಎಂ. ವೆಂಕಟಸ್ವಾಮಿ

Pages 56

₹ 50.00




Year of Publication: 2011
Published by: ಜಾಗೃತಿ ಪ್ರಿಂಟರ್ಸ್
Address: 56/1-6, ನರಸಿಂಹಯ್ಯ ಗಾಡ೵ನ್, ಕೊಟ್ಟಿಗೆ ಪಾಳ್ಯ, ಮಾಗಡಿ ಮುಖ್ಯರಸ್ತೆ, ಬೆಂಗಳೂರು 560 091

Synopsys

`ನಮ್ಮ ಹಿಮಾಲಯ' ಡಾ. ಎಂ. ವೆಂಕಟಸ್ವಾಮಿ ಅವರ ಕೃತಿ. ಹಿಮಾಲಯ ಕುರಿತು ಪ್ರೌಢಶಾಲೆ ವಿದ್ಯಾರ್ಥಿಗಳು ತಿಳಿಯಲು ಅನುಕೂಲವಾಗುವಂತೆ ರಚಿಸಲಾಗಿದೆ. ಹಿಮಾಲಯ ಹೆಸರು ಕೇಳಿದ್ದೆ ಎಲ್ಲಾ ಭಾರತೀಯರಿಗೂ ಮೈ ರೋಮಾಂಚನಗೊಳ್ಳುತ್ತದೆ. ಹಿಮಾಲಯಕ್ಕೆ ಇನ್ನೊಂದು ಹೆಸರು ಭೂಮಿಯ ಮೇಲಿನ ಸ್ವರ್ಗ.  ಹಿಮಾಲಯ ಸಿಂಧೂ, ಗಂಗಾ, ಬ್ರಹ್ಮಪುತ್ರದಂತಹ ಅನೇಕ ಜೀವ ನದಿಗಳ ಉಗಮ ಸ್ಥಾನವಾಗಿದೆ. ಸಿಂಧೂ ಮತ್ತು ಗಂಗಾ ನದಿ ದಡಗಳಲ್ಲಿ ಮನುಷ್ಯನ ನಾಗರಿಕತೆಗಳು ಬೆಳೆದು ವಿಕಾಸಗೊಂಡಿವೆ.

ಹಿಮಾಲಯ ಪ್ರಾಚೀನ ಋಷಿಗಳು, ಸಾಧು-ಸಂತರ ತಪೋಭೂಮಿಯೇ ಅಲ್ಲದೆ ನಮ್ಮ ದೇಶದ ಭದ್ರಕೋಟೆಯೂ ಕೂಡ. ಹಿಮಾಲಯ ಸಾವಿರಾರು ಲಕ್ಷಾಂತರ ಪಕ್ಷ-ಪ್ರಾಣಿ ಪ್ರಭೇದಗಳ ವಾಸ ಸ್ಥಳವಾಗಿದೆ. ಬೆಳ್ಳನೆ ಬಿಳುಪು ಹಿಮ ಕವಚಗಳನ್ನು ಹೊದ್ದಿರುವ ಕಣಿವೆ ಶಿಖರಗಳ ಹಿಮಾಲಯ.ಇದು ಎಲ್ಲಾ ಕಾಲಕ್ಕೂ ಮನುಷ್ಯನ ಸಂಭ್ರಮದ ತಾಣವಾಗಿದೆ. ಆದರೆ ಪ್ರಸ್ತುತ ಅಭಿವೃದ್ಧಿಯ ಹೆಸರಿನಲ್ಲಿ ಮಾನವನ ದುರಾಢಳಿತದ ಫಲವಾಗಿ ಹಿಮರಾಶಿ ಬೇಗನೆ ಕರಗಿ ಹೋಗುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಹಸಿರುಮನೆ ಅನಿಲಗಳ ಬಿಡುಗಡೆ. 1952ರಲ್ಲಿ ಜಗತ್ತಿನ ಅತಿ ಎತ್ತರದ ಎವರೆಸ್ಟ್ ಶಿಖರವನ್ನು ಮೊದಲಿಗೆ ಏರಿ ನಿಂತ ಭಾರತದ ತೇನ್ಸಿಂಗ್ ನಾರ್ಕೆ ಮತ್ತು ಆಸ್ಟ್ರಿಯಾದ ಹೆಡ್ಮಂಡ್ ಹಿಲ್ಲೇರಿ ಮಾನವ ಸಾಹಸದ ಪ್ರತೀಕವಾದರು.

ಹಿಮಾಲಯದ ಇತಿಹಾಸವನ್ನು ಕೆದಕಿದ ಭೂವಿಜ್ಞಾನಿಗಳು ಅದರ ಉಗಮ-ವಿಕಾಸವನ್ನು ಕೋಟ್ಯಂತರ ವರ್ಷಗಳ  ಹಿಂದಕ್ಕೆ ತಳ್ಳಿ ಅದರ ಮೂಲ ಗರ್ಭವಾದ ತೆಥಿಸ್ ಮಹಾಸಾಗರದಿಂದ ಹಂತಹಂತವಾಗಿ ಏರಿನಿಂತ ಎವರೆಸ್ಟ್ ಶಿಖರದವರೆಗೂ ಅದರ ಹೆಜ್ಜೆಗಳನ್ನು ಗುರುತಿಸಿ ದಾಖಲಿಸಿದರು. ಆರೂವರೆ ಕೋಟಿ ವರ್ಷಗಳ  ಹಿಂದೆ ಹಿಮಾಲಯ ಇರುವ ಇಂದಿನ ಸ್ಥಳ ತೆಥಿಸ್ ಸಮುದ್ರವಾಗಿತ್ತು. ಅಂಟಾರ್ಟಿಕ ನಿಂದ ಕಳಚಿಕೊಂಢು ಹೊರಟು ನಿಂತ ಆಸ್ಟ್ರೇಲಿಯಾ-ಇಂಡಿಯಾ ಮತ್ತು ಯುರೋಷ್ಯಾ ಭೂಫಲಕಗಳು ಹಿಮಾಲಯ ಪ್ರದೇಶದಲ್ಲಿ ಘರ್ಷಣೆಗೆ  ನಿಂತುಕೊಂಡವು. ಈ ಎರಡೂ ಫಲಕಗಳ ಮಧ್ಯೆ ಸಿಕ್ಕಿಕೊಂಡ ತೆಥಿಸ್ ಸಾಗರ ಹಂತಹಂತವಾಗಿ ಹಿಮಾಲಯ ಪರ್ವತ  ಶ್ರೇಣಿಗಳು ಪ್ರಪಂಚದ ಛಾವಣಿಯಾಗಿ ಎತ್ತರಕ್ಕೆ ಏರಿ ನಿಂತುಕೊಂಡವು. ಸಮುದ್ರದಲ್ಲಿದ್ದ ಅಪಾರ ಪ್ರಾಣಿಗಳ ಪಳಿಯುಳಿಕೆಗಳು ಹಿಮಾಲಯದಲ್ಲೆಲ್ಲ ಇಂದಿಗೂ ದೊರಕುತ್ತವೆ. ಈ ಎಲ್ಲಾ ವಿವರಣೆಗಳನ್ನುಈ ಕೃತಿ ಒಳಗೊಂಡಿದೆ.

ಕೃತಿಯು  ಪ್ಯಾಂಜಿಯ ಪೆಂಥೆಲೆಸ್ಸಾ,  ಭೂ-ಖಂಡಗಳು ಪಯಣ ಹೊರಟಿದ್ದು, ಭೂಮಿಯ ಅಂತರಾಳ, ಬಳೆದು ನಿಂತ ಹಿಮಾಲಯ, ತೆಥಿಸ್ ಮಹಾಸಾಗರ, ಸಾಗರ ತಳದಲ್ಲಿ ಪರ್ವತಸ್ತೋಮಗಳು, ಹಿಮಸಾಮ್ರಾಜ್ಯ,  ಸಸ್ಯ ಪ್ರಾಣಿ ಸಂಕುಲ,  ಪರಿಸರ ನಾಶ ಅಧ್ಯಾಯಗಳಡಿ ವಿಷಯವನ್ನು ವಿವರಿಸುತ್ತದೆ.

About the Author

ಎಂ. ವೆಂಕಟಸ್ವಾಮಿ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು,  ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು.  ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...

READ MORE

Related Books