ನಮ್ಮ ಕನ್ನಡ

Author : ಕೆ.ವಿ. ತಿರುಮಲೇಶ್‌

Pages 120

₹ 60.00




Year of Publication: 2006
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

'ನಮ್ಮ ಕನ್ನಡ' ಎಂಬ ಹೆಸರಿನ ಈ ಪುಸಕ್ತ, ಈಗಾಗಲೇ ಬೇರೆ ಬೇರೆ ಕಡೆ ಪ್ರಕಟಗೊಂಡ ಲೇಖನಗಳ ಸಂಕಲನ. ಈ ಲೇಖನಗಳಲ್ಲಿ ಕೆಲವು ಹಳತು, ಕೆಲವು ಹೊಸತು. ಭಾಷೆ ಹಾಗೂ ಭಾಷಾವಿಜ್ಞಾನ'  ಕಾಲ 1983ನೇ ಇಸವಿ, ಬೇಸಿಗೆ ರಜೆಯಲ್ಲಿ ಊರಿಗೆ ಹೋಗಿದ್ದಾಗ ಬರೆದುದು ಎನ್ನುತ್ತಾರೆ ಲೇಖಕ ಕೆ.ವಿ.ತಿರುಮಲೇಶ್.

ಅದಾಗಲೇ ಹೈದರಾಬಾದಿನಲ್ಲಿ ಭಾಷಾವಿಜ್ಞಾನ ಕಲಿಸಲು ತೊಡಗಿ ಐದಾರು ವರ್ಷಗಳಾಗಿದ್ದವು.  ಹೆಚ್ಚು ಪಾರಿಭಾಷಿಕ ಪದಗಳನ್ನು ಬಳಸದೆ, ಸಾಧಾರಣ ಓದುಗರಿಗೆ ಅರ್ಥವಾಗುವ ಹಾಗೆ ಮತ್ತು ಜನಕ್ಕೆ ಆಧುನಿಕ ಭಾಷಾವಿಜ್ಞಾನದ ಕೆಲವು ಒಲವುಗಳ ಪರಿಚಯ ಮಾಡಿಸಿಕೊಡುವ ಉದ್ದೇಶದಿಂದ ಈ ಕೃತಿಯನ್ನು ಬರೆದಿದ್ದಾರೆ. ಭಾಷೆಯ ಎರಡು ಮುಖ್ಯ ಆಯಾಮಗಳಾದ ಒಳರಚನೆ ಮತ್ತು ಸಾಮಾಜಿಕವಾದ ಉಪಯೋಗ-ಈ ವಿಷಯಗಳ ಪರಿಚಯ ಮಾಡಿಕೊಡಲು ಇದರಲ್ಲಿ ಪ್ರಯತ್ನಿಸಿದ್ದಾರೆ.

About the Author

ಕೆ.ವಿ. ತಿರುಮಲೇಶ್‌
(12 September 1940 - 30 January 2023)

ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ...

READ MORE

Related Books