ನಮ್ಮ ಲಿಪಿ ಹುಟ್ಟಿನ ಪೂರ್ವೋತ್ತರಗಳು

Author : ಟಿ.ಡಿ.ರಾಜಣ್ಣ ತಗ್ಗಿ

Pages 164

₹ 180.00




Year of Publication: 2020
Published by: ಪ್ರಸಾರಾಂಗ
Address: ಸೆಂಟ್ರಲ್ ಯ್ಯೂನಿವರ್ಸಿಟಿ ಆಫ್ ಕರ್ನಾಟಕ, ಕಲಬುರಗಿ

Synopsys

‘ನಮ್ಮ ಲಿಪಿ ಹುಟ್ಟಿನ ಪೂರ್ವೋತ್ತರಗಳು’ ತಿರುಮಲ ರಾಮಚಂದ್ರ ಅವರ ತೆಲುಗು ಕೃತಿಯನ್ನು ಲೇಖಕ, ಅನುವಾದಕ ಡಾ. ಟಿ.ಡಿ.ರಾಜಣ್ಣ ತಗ್ಗಿ ಅವರು ಕನ್ನಡೀಕರಿಸಿದ್ದಾರೆ. ಪ್ರಪಂಚದ ಅನೇಕ ಲಿಪಿಗಳ ಪರಿಣಾಮ ಕ್ರಮವನ್ನು ಈ ಕೃತಿಯು ಪರಿಚಯಿಸುತ್ತದೆ. ಆರಂಭ ಕಾಲದ ಸಜೀವ ಗ್ರಂಥಾಲಯದ ಕತೆಯನ್ನು ಮತ್ತು ಲಿಪಿ ಹುಟ್ಟುವ ಮುನ್ನ ಮನುಷ್ಯನಲ್ಲಿದ್ದ ಅಗಾಧ ನೆನಪಿನ ಶಕ್ತಿಯನ್ನು ಈಜಿಪ್ಟ್ ಗಳ ಈಡೋಸ್ ಗಳ ವಿವರಣೆ ನೀಡುತ್ತದೆ. ಈಜಿಪ್ಟ್ ನ ಅಕ್ಷರ ಯಾತ್ರೆಯ ಬಗೆಗೆ ಮಾಹಿತಿ ಒದಗಿಸುವ ಈ ಕೃತಿಯು ಭಾರತದ ಅನೇಕ ಭಾಷೆಗಳ ಲಿಪಿಗಳ ಮಾಹಿತಿ ನೀಡುತ್ತದೆ. ನಮ್ಮ ಲಿಪಿಗೆ ಬೌದ್ಧರು ಮತ್ತು ಜೈನರು ಮಾಡಿದ ಪ್ರಚಾರಗಳನ್ನು ಅನೇಕ ಉಪಕತೆಗಳ ಮೂಲಕ ಕಟ್ಟಿಕೊಡುವ ಈ ಕೃತಿ, ಬ್ರಾಹ್ಮಿ ಲಿಪಿಯ ಅವತಾರಗಳನ್ನು ಮತ್ತು ಅದರ ಅನೇಕ ಲಕ್ಷಣಗಳನ್ನು ಪರಿಚಯಿಸುತ್ತದೆ. ಒಂದೇ ಸ್ವರೂಪವನ್ನು ಒಳಗೊಂಡಿರುವ ಕನ್ನಡ ಮತ್ತು ತೆಲುಗು ಲಿಪಿಯನ್ನು ಕುರಿತು ಪ್ರಮುಖವಾಗಿ ಚರ್ಚೆ ಮಾಡುತ್ತದೆ. ನಮ್ಮ ಲಿಪಿಯ ಪ್ರಾಚೀನತೆ, ಆ ಲಿಪಿಯ ಮೂಲ, ಲಿಪಿ ಹುಟ್ಟುವ ಮೊದಲು ಇದ್ದ ಸ್ವರೂಪಗಳು ಅಥವಾ ಚಿಹ್ನೆಗಳನ್ನು ತಿಳಿಸುತ್ತಾ, ಕನ್ನಡ - ತೆಲುಗು ಲಿಪಿಯ ಪರಿಣಾಮ ಕ್ರಮವನ್ನು ಸಮರ್ಥವಾಗಿ ಕಟ್ಟಿಕೊಡುವ ಕೃತಿಯಾಗಿದೆ.

About the Author

ಟಿ.ಡಿ.ರಾಜಣ್ಣ ತಗ್ಗಿ

ಕನ್ನಡದ ಯುವ ಸಂಶೋಧಕ, ಅನುವಾದಕ ಟಿ.ಡಿ. ರಾಜಣ್ಣ ತಗ್ಗಿ ಅವರು ಮೂಲತಃ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ತಗ್ಗಿಹಳ್ಳಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ, ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದಿರುವ ಅವರು ಮದರಾಸು ವಿಶ್ವವಿದ್ಯಾಲಯ ಹಾಗೂ ಜೈನ್ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.  ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮೌಲಿಕ ಪ್ರಬಂಧಗಳನ್ನು ಮಂಡಿಸಿರುವ ರಾಜಣ್ಣ ತಗ್ಗಿ ಅವರು ಮದರಾಸು , ಬೆಂಗಳೂರು ಮತ್ತು ಗುಲಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿಯೂ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.   ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಭಾಷೆ ಬಲ್ಲವರಾಗಿದ್ದು, ...

READ MORE

Related Books