ನಮ್ಮ ನಿತ್ಯ ಜೀವನದಲ್ಲಿ ಭಗವದ್ಗೀತೆ

Author : ಮಾಲತಿ ಮುದಕವಿ

Pages 208

₹ 210.00




Year of Publication: 2022
Published by: ಶ್ರೀ ಚೂಡ ಪ್ರಕಾಶನ
Address: # 275/F6-1, 5ನೇ ವೆಸ್ಟ್ ಕ್ರಾಸ್, ಉತ್ತರಾಧಿಮಠ ರಸ್ತೆ, ಮೈಸೂರು- -570004
Phone: 9740129274

Synopsys

ಮಾಲತಿ ಮುದಕವಿ ಅವರು ಬರೆದಿರುವ ಕೃತಿ ನಮ್ಮ ನಿತ್ಯ ಜೀವನದಲ್ಲಿ ಭಗವದ್ಗೀತೆ .ಒಂದು ಜೀವಿ ಪಡೆದುಕೊಳ್ಳುವ ಎಲ್ಲ ಬಗೆಯ ತಿಳಿವು, ನೈಪುಣ್ಯ ಅಥವಾ ವರ್ತನೆಯ ರೀತಿಯ ಸಂಪಾದನೆಯೇ ಕಲಿಕೆ. “ಸುತ್ತಲಿನ ಪರಿಸರದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವದೇ ಕಲಿಕೆ..” ಎಂದು ಹೇಳುತ್ತಾರೆ. ಈ ಹೊಂದಾಣಿಕೆ ಎನ್ನುವುದು ನಮಗೆ ಹುಟ್ಟಿನಿಂದ ಬಂದಿರುವುದಲ್ಲ. ಇದನ್ನು ನಾವು ಕಲಿಯಬೇಕಾಗುತ್ತದೆ. ಮಾನವ ಜೀವಿಯು ಹುಟ್ಟಿನಿಂದಲೇ ಜೀವನಕ್ಕೆ ಅವಶ್ಯವಾದ ಎಲ್ಲ ಸಾಮರ್ಥ್ಯಗಳನ್ನೂ ಸಾಮಾನ್ಯವಾಗಿ ಪಡೆದುಬಂದಿರುವುದಿಲ್ಲ. ಬೆಳವಣಿಗೆಯ ಹಂತದಲ್ಲಿ ಕಾಲಕ್ರಮೇಣ ಕೆಲವು ತಾವಾಗಿ ಪ್ರಕಾಶಕ್ಕೆ ಬರುತ್ತವೆ, ಮತ್ತೆ ಕೆಲವನ್ನು ಜೀವಿ ಸ್ವಪ್ರಯತ್ನದಿಂದಲೊ, ಇತರರನ್ನು ಅನುಕರಿಸುವುದರಿಂದಲೊ, ಇತರರಿಂದ ಹೇಳಿಸಿಕೊಂಡೊ, ತನ್ನ ಸ್ವಂತ ಅನುಭವಗಳ ಮೂಲಕವೊ ಕಲಿತುಕೊಳ್ಳುತ್ತದೆ. ಮಾನವೇತರ ಜೀವಿಗಳಿಗೆ ಕಲಿಕೆಯ ಆವಶ್ಯಕತೆ ಮಾನವನಿಗಿಂತ ಕಡಿಮೆ. ಅವು ಹುಟ್ಟುವಾಗಲೇ ತಮ್ಮ ಜೀವನಕ್ಕೆ ಆವಶ್ಯಕವಾದ ವರ್ತನವಿಧಾನಗಳನ್ನು ಪಡೆದುಕೊಂಡು ಬಂದಿರುತ್ತವೆ. ಕಲಿಯುವ ಆವಶ್ಯಕತೆ ಇಲ್ಲದೆಯೇ ಅನೇಕ ಜೀವಿಗಳಿಗೆ ಅವುಗಳ ಆಹಾರ, ಅದನ್ನು ತಿನ್ನುವ ವಿಧಾನ, ಅದು ಸಿಗುವ ಜಾಗ ಎಲ್ಲವೂ ತಿಳಿದಿರುತ್ತದೆ. ನೀರಿನಲ್ಲಿ ವಾಸಿಸುವ ಮೀನು, ಆಮೆ ಮೊದಲಾದ ಜೀವಿಗಳಿಗೆ ಈಜನ್ನು ಯಾರೂ ಕಲಿಸಬೇಕಾಗಿಲ್ಲ. ಕೆಲವು ಕೀಟಗಳು ಮತ್ತು ಪಕ್ಷಿಗಳು ತಮ್ಮ ಜಾತಿಗನುಗುಣವಾದ ಗೂಡುಗಳನ್ನು ಇತರರ ಸಹಾಯವಿಲ್ಲದೆಯೇ, ಇತರರು ಕಟ್ಟುವುದನ್ನು ನೋಡದೆಯೇ ಕಟ್ಟಬಲ್ಲವು. ಇಂಥ ಪ್ರಕೃತಿಸಿದ್ಧವಾದ ವರ್ತನಾವಿಶೇಷಗಳು, ಸಿದ್ಧವರ್ತನೆಗಳು, ಸ್ವಾಭಾವಿಕ ವೃತ್ತಿಗಳು ಅಥವಾ ಮೂಲಪ್ರವೃತ್ತಿಗಳು ಎನಿಸಿಕೊಳ್ಳುತ್ತವೆ. ಇವುಗಳಲ್ಲಿ ಕೆಲವು ವರ್ತನೆಗಳು ಮನುಷ್ಯರಲ್ಲೂ ಕಂಡುಬಂದರೂ ಕೂಡ ಮಾನವ ಜೀವಿಗಳ ವರ್ತನೆಯಲ್ಲಿ ಕಲಿಕೆಯ ಅಂಶವೇ ಬಹಳ ಹೆಚ್ಚು. ಜೀವವಿಕಾಸ ವೃಕ್ಷದಲ್ಲಿ ಉನ್ನತ ಮಟ್ಟವನ್ನು ಏರಿದಂತೆಲ್ಲಾ ಜೀವಿಗಳು ಕಲಿಯಬೇಕಾದ ಅಂಶ ಹೆಚ್ಚಾಗುತ್ತ ಹೋಗುತ್ತದೆ; ನೈಜವಾದ ಅಂಶಗಳು ಕಡಿಮೆಯಾಗುತ್ತವೆ. ಹಾಗೆಂದು ಹುಟ್ಟಿದ ಒಡನೆಯೇ ಮಗುವಿನಲ್ಲಿ ಕಂಡುಬರುವ ಗುಣಗಳು ಮಾತ್ರವೇ ನೈಜವಾದವೆಂದೂ ಮಿಕ್ಕವೆಲ್ಲಾ ಕಲಿತುಕೊಂಡವೆAದೂ ತಿಳಿಯಬಾರದು. ಅನೇಕ ಗುಣಗಳು ಕಲಿಯುವ ಆವಶ್ಯಕತೆ ಇಲ್ಲದೆಯೇ ತಾವಾಗಿಯೇ ಸಕಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗೆ ಬೆಳೆವಣಿಗೆಯಿಂದ ದೈಹಿಕ ಶಕ್ತಿಗಳಂತೆ ಮಾನಸಿಕ ಶಕ್ತಿಗಳೂ ಪಕ್ವತೆ ಪಡೆಯುತ್ತವೆ. ಕೆಲವು ಶಕ್ತಿಗಳು ಪಕ್ವವಾಗಲು ಬೆಳೆವಣಿಗೆ ಮಾತ್ರವೇ ಸಾಕು. ಇನ್ನು ಕೆಲವಕ್ಕೆ ಕಲಿಕೆಯು ಸಹಾಯ ಮಾಡುತ್ತದೆ. ಮಗುವನ್ನು ಶಾಲೆಗೆ ಕಳಿಸುವುದರಿಂದ ಅದು ಸಮಾಜದಲ್ಲಿ ಹೊಂದಿಕೊAಡು ಇರುವುದನ್ನು ಕಲಿಯುತ್ತದೆ. ವಿದ್ಯೆಯನ್ನೂ ಕಲಿಯುತ್ತದೆ. ಮುಂದೆ ತನ್ನ ಉಪಜೀವನದ ಮಾರ್ಗವನ್ನೂ ಕಲಿಯುತ್ತದೆ. ಇದೆಲ್ಲವೂ ಲೌಕಿಕದ ವಿದ್ಯೆಯಾದರೆ ಮನುಷ್ಯ ದೊಡ್ಡವನಾದಂತೆ ಅವನ ತಲೆಯಲ್ಲಿ ಸರಿ ತಪ್ಪುಗಳ ಜಿಜ್ಞಾಸೆಯೂ ಪ್ರಾರಂಭವಾಗುತ್ತದೆ. ಈ ವಿಷಯಗಳ ಬಗ್ಗೆ ಚಿಂತನೆಯು ಆರಂಭವಾದಾಗ ಅನೇಕ ಬಾರಿ ತನ್ನ ಚಿಂತನೆಯ ಮಾರ್ಗವು ಸರಿಯೋ ತಪ್ಪೋ ಎಂದು ಎನ್ನಿಸತೊಗುತ್ತದೆ. ಅಂಥ ಸಮಯದಲ್ಲಿ ನಮ್ಮ ಈ ಮನೋತುಮುಲವನ್ನು ತಹಬಂದಿಗೆ ತರಲು ನಾವು ನಮ್ಮ ಧರ್ಮ ಗ್ರಂಥಗಳ ಮೊರೆ ಹೋಗುತ್ತೇವೆ. ಈ ಗ್ರಂಥಗಳು ನಮ್ಮ ಮನಸ್ಸಿನ ಪ್ರಶ್ನೆಗಳಿಗೆ ಕೊಡುವ ಉತ್ತರಗಳು ಒಮ್ಮೊಮ್ಮೆ ನಮ್ಮ ಅರಿವಿನ ದಾಹವನ್ನು ತಣಿಸವು.. ಅಥವಾ ಅವು ನಮ್ಮ ಅರಿವಿನ ವ್ಯಾಪ್ತಿಯನ್ನು ದಾಟಿರುತ್ತವೆ. ಅಂಥ ಸಮಯದಲ್ಲಿ ನಮಗೆ ಒಬ್ಬ ಗುರುವಿನ ಅವಶ್ಯಕತೆ ಇರುತ್ತದೆ. ಗುರುಮುಖೇನ ನಮ್ಮ ಸಂಶಯಗಳನ್ನು ನಾವು ನಿವಾರಿಸಿಕೊಳ್ಳಬಹುದು. ಗುರುಗಳು ನಮಗೆ ದೊರೆಯುವುದು ಅಶಕ್ಯವಾದಂಥ ಸಂದರ್ಭದಲ್ಲಿ ಗ್ರಂಥಗಳ ಮುಖಾಂತರವೂ ನಾವು ಈ ದಾಹವನ್ನು ನೀಗಿಸಿಕೊಳ್ಳಬಹುದು. ಜಗತ್ತು ಯಾವಾಗಲೂ ಬದಲಾವಣೆ ಹೊಂದುತ್ತಲಿರುತ್ತದೆ. ಅದರಂತೆಯೇ ನಮ್ಮ ಜೀವನದ ರೀತಿ ನೀತಿಗಳೂ ಕೂಡ. ಅಂಥ ಸಮಯದಲ್ಲಿ, ನಮ್ಮ ಧರ್ಮಗ್ರಂಥಗಳು ಹೇಳುವುದನ್ನು ನಮ್ಮ ಇಂದಿನ ನಿತ್ಯ ಜೀವನ ಮಾರ್ಗಕ್ಕೆ ಹೇಗೆ ಅಳವಡಿಸಿಕೊಳ್ಳಬಹುದು ಎಂಬ ಚಿಂತೆಯಲ್ಲಿ ನಾವಿರುವಾಗ ನಮ್ಮ ಇಂದಿನ ಆಧುನಿಕ ಜೀವನ ಪದ್ಧತಿಯನ್ನು ನಮ್ಮ ಅಂದಿನ ಜೀವನಮಾರ್ಗಕ್ಕೆ ಸಮೀಕರಿಸಿ ಹೇಳುವ ತಂತ್ರವನ್ನು ಈ ನಮ್ಮ ಧರ್ಮಗ್ರಂಥಗಳ ಬೋಧನೆಯನ್ನು ಸರಳೀಕರಿಸಿ ಹೇಳುವಂಥ ಪ್ರಯತ್ನವನ್ನು ನಮ್ಮ ಅನೇಕ ವಿದ್ವಾಂಸರು ಮಾಡಿದ್ದಾರೆ.

About the Author

ಮಾಲತಿ ಮುದಕವಿ
(10 April 1950)

ಲೇಖಕಿ ಮಾಲತಿ ಮುದಕವಿ ಅವರು ಎಂ ಎ., ಬಿ ಎಡ್ ಪದವೀಧರರು. ನಿವೃತ್ತ ಕನ್ನಡ ಉಪನ್ಯಾಸಕಿ. ಕರ್ನಾಟಕ ರಾಜ್ಯ ಮಟ್ಟದ ‘ನಗೆಮುಗುಳು’ ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿಕೆ.  ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ 'ಸಾಹಿತ್ಯಶ್ರೀ' ಎಂಬ ಪುರಸ್ಕಾರ. ಲೇಖಿಕಾ ಸಾಹಿತ್ಯ ವೇದಿಕೆಯ 2020ರ ಎರಡು ರಾಜ್ಯ ಮಟ್ಟದ ಸ್ಪರ್ಧೆಗಳಾದ ...

READ MORE

Related Books