ನಮ್ಮ ಸಂಸ್ಕೃತಿ

Author : ಚಂದ್ರಕಾಂತ ಪೋಕಳೆ

Pages 112

₹ 85.00
Year of Publication: 2016
Published by: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು- 560001
Phone: 08030578023

Synopsys

‘ನಮ್ಮ ಸಂಸ್ಕೃತಿ’ ಪ್ರಸಿದ್ಧ ಶಿಕ್ಷಣ ತಜ್ಞೆ, ಮಾನವಶಾಸ್ತ್ರಜ್ಞೆ, ಲೇಖಕಿ ಇರಾವತಿ ಕರ್ವೆ ಅವರ ಮರಾಠಿ ಕೃತಿಯನ್ನು ಲೇಖಕ ಚಂದ್ರಕಾಂತ ಪೋಕಳೆ ಅವರು ಕನ್ನಡೀಕರಿಸಿದ್ದಾರೆ. ಇಲ್ಲಿ ಸಂಸ್ಕೃತಿ ಚಿಂತನೆಯ ಕುರಿತಾದ ಬಿಡಿ ಬರಹಗಳು ಸಂಕಲನಗೊಂಡಿವೆ.

ಸಂಸ್ಕೃತಿ ಎಂದರೇನು, ಹಿಂದೂಗಳ ಸಾಂಸ್ಕೃತಿಕ ಇತಿಹಾಸದ ಮರ್ಮ, ಸಾಹೇಬರು ಮತ್ತು ನಮ್ಮ ಸಂಸ್ಕೃತಿ, ಭಾರತದ ಗಿರಿಜನರು, ಗೋಹತ್ಯೆ ನಿಷೇಧದ ಚಳವಳಿ, ಸಮಾಜಶಾಸ್ತ್ರೀಯ ದೃಷ್ಟಿಯಲ್ಲಿ ಹೊಸ ಹಿಂದೂ ಕಾನೂನು ಸಮೀಕ್ಷೆ, ಭಾರತೀಯ ಭಾಷೆ ಮತ್ತು ಇಂಗ್ಲಿಷಿನ ಸ್ಥಾನ, ಎರಡು ತಲೆಮಾರು, ನಾವು ಮಹಿಳೆಯರು, ಆಕಾಂಕ್ಷೆ ಎಂಬ 10 ಪ್ರಮುಖ ಲೇಖನಗಳು ಇಲ್ಲಿ ಸಂಕಲನಗೊಂಡಿವೆ.

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books