ನಮ್ಮದಿದು ಇತಿಹಾಸ

Author : ಎಚ್.ಎಸ್. ಗೋಪಾಲರಾವ್

Pages 160

₹ 100.00




Year of Publication: 2010
Published by: ಅಭಿನವ ಪ್ರಕಾಶನ
Address: ಮುಖ್ಯರಸ್ತೆ, ಮಾರೇನಹಳ್ಳಿ, 17/18-2, 1ನೇ ವಿಜಯನಗರ, ಬೆಂಗಳೂರು -560040
Phone: 9448804905

Synopsys

ಪ್ರವೃತ್ತಿಯಿಂದ ಸಂಶೋಧಕ, ಲೇಖಕರಾದ ಎಚ್.ಎಸ್. ಗೋಪಾಲರಾವ್ ಅವರು ಬರೆದಿರುವ ’ನಮ್ಮದಿದು ಇತಿಹಾಸ’ ಕೃತಿಯು ಕರ್ನಾಟಕದ ಇತಿಹಾಸದ ಸುತ್ತ ಚಲಿಸುತ್ತಾ ರಾಜ ಮಹಾರಾಜರ, ಪ್ರಭುತ್ವದ, ಮುಖ್ಯ ಪ್ರವಾಹದ ಬಗೆಗಿನ ಇತಿಹಾಸವನ್ನು ನಿರೂಪಿಸುತ್ತದೆ.

ಲೇಖಕರು ಕರ್ಮವೀರ ಪತ್ರಿಕೆಗಾಗಿ ’ನಮ್ಮದಿದು ಇತಿಹಾಸ’ ಅಂಕಣವನ್ನು ಮೊದಲು ಬರೆಯುತ್ತಿದ್ದರು. ಆ ಎಲ್ಲಾ ಅಂಕಣಗಳ ಬರಹ ರೂಪ ಈ ಪುಸ್ತಕವಾಗಿ ಹೊರಬಂದಿದೆ.

ಅಕ್ಬರ್‍ ಆಸ್ಥಾನದಲ್ಲಿದ್ದ ಏಕೈಕ ದಕ್ಷಿಣದ ಸಂಗೀತಗಾರ, ವಿದ್ವಾಂಸ ಸಾತನೂರಿನ ಪುಂಡರೀಕ ವಿಠಲ, ಬೃಹತ್ ಶಿಲಾಯುಗದ ಹೂಜಿಗಲ್ಲು, ಹಲವು ಸಾಂಸ್ಕೃತಿಕ ವಿಚಾರಗಳನ್ನು ಈ ಕೃತಿ ತೆರೆದಿಡುತ್ತದೆ.

ಕೃಷ್ಣದೇವರಾಯ, ಟಿಪ್ಪು, ಅಶೋಕ, ಶ್ರವಣಬೆಳಗೊಳದ ಬಗೆಗೂ ಚರ್ಚಿಸುವ ಈ ಕೃತಿ ಸ್ಥಳೀಯ ವಿಚಾರಗಳನ್ನೂ ಒಳಗೊಂಡಿದೆ.

ಅಕ್ಷರ ಕಲ್ಲು, ಅಶೋಕ ಮತ್ತು ಕರ್ನಾಟಕ, ಶ್ರವಣಬೆಳಗೊಳದ ಮುದ್ದು ಗೊಮ್ಮಟ, ಕೆರೆಗಳು ಮತ್ತು ಬದುಕು, ಪರಾಂಗನಾ ಪುತ್ರ ಕನ್ನರದೇವ, ಕವಿರಾಜ ಮಾರ್ಗದ ಶ್ರೀವಿಜಯ, ಬೃಹತ್ ಶಿಲಾಯುಗದ ಹೂಜಿಗಲ್ಲು, ಚೋಳರು ವಿಷ್ಣು ದ್ವೇಷಿಗಳೆ?, ಶಾಸನಗಳು ಮತ್ತು ಹಸ್ತಪ್ರತಿಗಳ ಮೇಲಿನ ಸಿಟ್ಟು, ನಮ್ಮ ಗರ್ವ ಹೆಚ್ಚಿಸುವ ಅತ್ತಿಮಬ್ಬೆ, ಕೈಫಿಯತ್ತುಗಳು, ವಕೀಲ ರಾಮಪ್ಪನ ಕೈಫಿಯತ್ತು, ಸರ್ವಜ್ಞ ಚಕ್ರವರ್ತಿ, ಶಿವಪ್ಪನಾಯಕನ ಶಿಸ್ತು, ಕರ್ಮಯೋಗಿ ಸಿದ್ದರಾಮ, ರಾಜಾವಳೀ ಕಥೆಯ ದೇವಚಂದ್ರ, ತಲಕಾಡು ಮತ್ತು ಮರಳು, ಬ್ರಿಟಿಷರ ವಶವಾದ ಬೆಂಗಳೂರು,  ದೇವಾಯಲದ ಮಾರಾಟ, ಇತಿಹಾಸದ ಪುಟಗಳಲ್ಲಿ ಕಂಡ ವಚನಕಾರರು, ಗೋ ಸಾಕಣೆಗೆ ಆದ್ಯತೆ, ನರ್ತನ ಸೇವೆಗೆ ಅವಕಾಶ, ಸ್ಥಳನಾಮಗಳು, ಭೌಗೋಳಿಕ ಸ್ವರೂಪ ಮತ್ತು ಇತಿಹಾಸ ಹೀಗೆ ಹಲವಾರು ವಿಷಯಗಳನ್ನೊಳಗೊಂಡ ಲೇಖನಗಳು ’ನಮ್ಮದಿದು ಇತಿಹಾಸ’ ಕೃತಿ ಒಳಗೊಂಡಿದೆ.

About the Author

ಎಚ್.ಎಸ್. ಗೋಪಾಲರಾವ್
(18 November 1946)

ಡಾ. ಎಚ್.ಎಸ್. ಗೋಪಾಲರಾವ್  ಅವರು 1946ರ ನವೆಂಬರ್‌ 18ರಂದು ನೆಲಮಂಗಲ ತಾಲ್ಲೂಕಿನ ಹುಲ್ಲೇಗೌಡನ ಹಳ್ಳಿಯಲ್ಲಿ ಜನಿಸಿದರು. ಎಲೆಕ್ಟ್ರಿಕಲ್ ಇಂಜನಿಯರಿಂಗ್ ಡಿಪ್ಲೊಮ ಮುಗಿಸಿ ನಂತರ ಅವರು ಮೈಸೂರು ವಿವಿ ಕನ್ನಡ ಎಂ.ಎ. (1984- ಎರಡು ಚಿನ್ನದ ಪದಕ) ಪದವಿ ಪಡೆದರು.  ಶಾಸನಗಳ ಹಿನ್ನೆಲೆಯಲ್ಲಿ ಕಲ್ಯಾಣ ಚಾಲುಕ್ಯ ದೇವಾಲಯಗಳು ಒಂದು ಸಾಂಸ್ಕೃತಿಕ ಅಧ್ಯಯನ ಕುರಿತು ಪಿಎಚ್. ಡಿ.  ಪದವಿ ಪಡೆದರು. (ಮೈಸೂರು ವಿ ವಿ 1991). ಸರ್ಕಾರಿ ಕಾರ್ಯನಿರ್ವಾಹಕ ಎಂಜಿನಿಯರ್, ಕೆಪಿಟಿಸಿಎಲ್ ನಿಯಮಿತ, (ಕನ್ನಡ ಸಮನ್ವಯಾಧಿಕಾರಿಯಾಗಿ) ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಸನ ಶಾಸ್ತ್ರ ಬೋಧಕರಾಗಿ ಕೆಲಸ ನಿರ್ವಹಿಸಿದ್ದಾರೆ.  ಜೇನು ನಂಜು, ...

READ MORE

Related Books