`ನಮ್ಮೊಳಗೆ ಬುದ್ದನೊಬ್ಬʼ ಅರವು ಮತ್ತು ಬದುಕಿನ ಚಿಂತನೆಗಳು ಮಹಾದೇವ ಬಸರಕೋಡ ಅವರ ಕೃತಿಯಾಗಿದೆ. ಮಹಾದೇವ ಬಸರಕೋಡರ ಈ ಕೃತಿಯ ಪ್ರತಿ ಲೇಖನವೂ ಕಿರಿದೇ, ಆದರೆ ಒಳಗಿನ ಹೂರಣ ಘನ. ಬಸರಕೋಡರ ಕ್ಯಾನ್ಸಾಸ್ ಚಿಕ್ಕದೇ, ಆದರೂ ಅಲ್ಲೊಂದು ದೃಷ್ಟಾಂತವನ್ನಿಟ್ಟು ಮಾತಾಡಲು ಮರೆಯುವುದಿಲ್ಲ ಅವರು. ಹೀಗಾಗಿ ಈ ಬರಹಗಳು ಹೆಚ್ಚು ಆಪ್ತವಾಗುತ್ತವೆ ಕೂಡ. ಓದಲು ವೇಳೆಯಿಲ್ಲ ಅನ್ನುವವರ ಕಾಲವಿದು. ಆದರೆ ಈ ಕಿರು ಬರಹಗಳು ಬದುಕ ಪಾಠ ಅವಿತಿಟ್ಟ ಪುಟಾಣಿ ಗುಳಿಗೆಗಳಂತಿವೆ. ಇಲ್ಲಿ ಸೋತ ಮನಕ್ಕೆ ಸಂತೈಕೆ ಇದೆ, ಗೆಲುವಿನ ಹಾದಿ ತೋರುವ ಕೈಮರಗಳೂ ಇವೆ, ಒಳಗನ್ನು ತಿಳಿಗೊಳಿಸುವ ಸಂತನ ನುಡಿಮಾತೂ ಇದೆ. ಇಲ್ಲಿ ಹೇಳಿರುವ ಎಲ್ಲವೂ ನಮ್ಮೊಳಗೇ ಇವೆ, ಆದರೂ ಏನೂ ಇಲ್ಲವೆಂಬಂತೆ ನಾವು ಇದ್ದೇವೆ. ಅವುಗಳನ್ನು ತೆರೆದು ತೋರುವ ಪಯಣವೇ ಈ ಪುಸ್ತಕದ ಓದು. ಇದರ ಸಾಂಗತ್ಯ ನಮ್ಮ ಆಂತರ್ಯವನ್ನು ಬೆಳಗಿಸಬಲ್ಲುದು, ಬಾಳನ್ನೂ ಸಹ. ಹೀಗಾಗಿಯೇ ಇದು ಬುದ್ಧತ್ವದ ದಾರಿ, "ನಮ್ಮೊಳಗಿನ ಬುದ್ದನೊಬ್ಬ' ನನ್ನು ಕಂಡುಕೊಳ್ಳುವ ತಾಣ
ಮೂಲತಃ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಬೇನಾಳ ಗ್ರಾಮದವರಾದ ಬರಹಗಾರ ಮಹಾದೇವ ಬಸರಕೋಡ ಅವರು ಜನಿಸಿದ್ದು 1972 ಜೂನ್ 14ರಂದು. ನಿಡಗುಂದಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಇಲಕಲ್ಲಿನ ಎಸ್.ಆರ್. ಕಂಠಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಹಾಗೂ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಕನ್ನಡ ಸಾಹಿತ್ಯ ಆಸಕ್ತಿ ಕ್ಷೇತ್ರ. ಮಹಾದೇವ ಅವರ ಪ್ರಮುಖ ಕೃತಿಗಳೆಂದರೆ ಬದುಕು ಬೆಳಕು, ತಮಂಧ ಘನ ಕಳೆದು (ಕವನ ಸಂಕಲನ), ಒಡಲುಗೊಂಡವ (ವಚನ ಸಾಹಿತ್ಯ), ಹಸಿವೆಂಬ ಹೆಬ್ಬಾವು, ವರ್ತಮಾನದಲ್ಲಿ ನಿಂತು ...
READ MORE