ನಮ್ಮೊಳಗೆ ನಾವು

Author : ಸುಧಾಶರ್ಮಾ ಚವತ್ತಿ

Pages 144

₹ 130.00




Year of Publication: 2022
Published by: ಬೆನಕ ಬುಕ್ ಬ್ಯಾಂಕ್
Address: ಯಳಗಲ್ಲು, ಕೋಡೂರು 577 418 ಹೊಸನಗರ -ತಾ, ಶಿವಮೊಗ್ಗ-ಜಿಲ್ಲೆ
Phone: 7338437666

Synopsys

ಲೇಖಕಿ ಸುಧಾ ಶರ್ಮಾ ಚವತ್ತಿ ಅವರ ಲೇಖಕಗಳ ಸಂಕಲನ ನಮ್ಮೊಳಗೆ ನಾವು. ಹಿರಿಯ ಪತ್ರಕರ್ತ, ಲೇಖಕ ರವಿಂದ್ರ ಭಟ್ಟ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಸಾಕಷ್ಟು ಲೇಖನಗಳು ಕುಟುಂಬ ಮತ್ತು ಕೌಟುಂಬಿಕ ವ್ಯವಸ್ಥೆ ಬಗ್ಗೆ ಇವೆ. ನಮ್ಮಲ್ಲಿ ಅವಿಭಕ್ತ ಕುಟುಂಬಗಳು ಇದ್ದಾಗ ಮನೆಯಲ್ಲಿ 30-40 ಮಂದಿ ಇರುತ್ತಿದ್ದರು. ಆದರೆ ಒಂದೇ ಬಚ್ಚಲು ಮನೆ ಇತ್ತು. ಆದರೆ ಯಾವ ಮನೆಯಲ್ಲಿಯೂ ಸ್ನಾನಕ್ಕಾಗಿ ಜಗಳ ಆಗುತ್ತಿರಲಿಲ್ಲ. ಯಾರ ನಂತರ ಯಾರು ಸ್ನಾನ ಮಾಡಬೇಕು ಎನ್ನುವುದು ಅಲಿಖಿತವಾಗಿತ್ತು. ಆದರೆ ಕರಾರುವಾಕ್ಕಾಗಿ ನಡೆಯುತ್ತಿತ್ತು. ಅಂದರೆ ಅವಿಭಕ್ತ ಕುಟುಂಬ ಹೊಂದಾಣಿಕೆಯನ್ನು, ವಿವೇಕವನ್ನು ತನ್ನಿಂದ ತಾನೆ ಕಲಿಸುತ್ತಿತ್ತು. ಈಗ ಮನೆಯಲ್ಲಿ ಅಪ್ಪ, ಅಮ್ಮ, ಒಂದು ಮಗು ಅಥವಾ ಎರಡು ಮಕ್ಕಳೂ ಇರುತ್ತಾರೆ. ಆದರೆ ಮನೆಯಲ್ಲಿ ಮೂರು ಬಚ್ಚಲು ಮನೆಗಳಿವೆ. ಅಪ್ಪ ಅಮ್ಮನಿಗೆ ಪ್ರತ್ಯೇಕ, ಅತಿಥಿಗಳಿಗೆ ಪ್ರತ್ಯೇಕ ಮತ್ತು ಮಕ್ಕಳಿಗೆ ಪ್ರತ್ಯೇಕ ಬಾತ್ ರೂಂಗಳಿವೆ. ಅಂದರೆ ನಮ್ಮ ಮನೆಯಲ್ಲಿಯೇ ನಾವು ವಿಘಟನೆಯ, ಪ್ರತ್ಯೇಕತೆಯ ಬೀಜವನ್ನು ನಮಗೆ ಗೊತ್ತಿಲ್ಲದೇ ಬಿತ್ತುತ್ತಿದ್ದೇವೆ. ಅದು ಈಗ ಬೀದಿಗೆ ಬಂದಿದೆ. ಹೀಗೆ ಬೀದಿಗೆ ಬಂದ ಅಂತಹ ಭೂತವನ್ನು ನಮ್ಮ ಮನೆಯಲ್ಲಿ ಮತ್ತು ಮನದಲ್ಲಿ ಹೋಗಲಾಡಿಸುವುದು ಹೇಗೆ ಎನ್ನುವುದನ್ನು ಸುಧಾ ಅವರ ‘ನಮ್ಮೊಳಗಿನ ನಾವು’ ಪುಸ್ತಕ ಹೇಳಿಕೊಡುತ್ತದೆ. ಸರಳ, ಸುಂದರ ಭಾಷೆಯ, ಸಣ್ಣ ಸಣ್ಣ ಉದಾಹರಣೆಯೊಂದಿಗೆ ಎಲ್ಲರಿಗೂ ಇಷ್ಟವಾಗುವ ಹತ್ತಿರವಾಗುವ ಇಂತಹ ಪುಸ್ತಕಗಳು ಇನ್ನಷ್ಟು ಬರಲಿ. ಕವಿತೆ ಅವರ ಕೈಬಿಡದಿರಲಿ ಎಂಉದಾಗಿ ಹಾರೈಕೆಯ ಮಾತುಗಳನ್ನು ಬರೆದಿದ್ದಾರೆ.

About the Author

ಸುಧಾಶರ್ಮಾ ಚವತ್ತಿ

ದೃಶ್ಯ, ಮುದ್ರಣ, ಈಗ ಭರವಸೆ ಯೂಟ್ಯೂಬ್ ವಾಹಿನಿಗಳ ಮೂಲಕ ಆಪ್ತವಾಗುವವರು ಸುಧಾ ಶರ್ಮಾ, ಚವತ್ತಿ. ಕನ್ನಡದ ಮೊಟ್ಟ ಮೊದಲ ಪಾಸಿಟೀವ್ ಸೈಕಾಲಜಿಯ, ಸಕಾರಾತ್ಮಕ ಚಿಂತನೆಯ, ಭರವಸೆಯ ಬದುಕಿಗಾಗಿಯೇ ರೂಪತಳೆದ "ಪ್ರಾಫಿಟ್ ಪ್ಲಸ್" ಪತ್ರಿಕೆಯ ಸಂಪಾದಕಿ. ಇವರು ಉತ್ತಮ ಕವಯತ್ರಿಯೂ ಹೌದು. ದೃಶ್ಯ ಮತ್ತು ಮುದ್ರಣ ಮಾಧ್ಯಮಗಳೆಡರಲ್ಲೂ ಸಮೃದ್ಧ ಅನುಭವ ಉಳ್ಳವರು ವಿರಳ. ಇಂತಹ ವಿರಳರಲ್ಲಿ ಇವರೂ ಒಬ್ಬರು. ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಮುದ್ರಣ ಮಾಧ್ಯಮದಲ್ಲಿ ಕೆಲಸ. "ವ್ಯಾಪಾರ" ಎನ್ನುವ ವಾಣಿಜ್ಯ ಪುರವಣಿಯ ನಿರ್ವಹಣೆ. ಉದಯ ಟಿ.ವಿಯಲ್ಲಿ ವರದಿಗಾರ್ತಿಯಾಗಿ ದೃಶ್ಯ ಮಾಧ್ಯಮದಲ್ಲಿ ಕೆಲಸ. ಮುಂದೆ ಕಾವೇರಿ, ಈ ...

READ MORE

Related Books