ನಮ್ಮೂರ ಅಗಸ್ಯಾಗ

Author : ಮಲ್ಲಪ್ಪ ಫ ಕರೇಣ್ಣನವರ

Pages 146

₹ 130.00




Year of Publication: 2021
Published by: ಅವಿರತ ಪುಸ್ತಕ
Address: # 1, 13ನೇ ಮುಖ್ಯರಸ್ತೆ, ಎಂ,ಸಿ ಬಡಾವಣೆ, ವಿಜಯನಗೆ ಬೆಂಗಳೂರು-560040
Phone: 9449935103

Synopsys

’ನಮ್ಮೂರ ಅಗಸ್ಯಾಗ’ ಕೃತಿಯು ಮಲ್ಲಪ್ಪ ಫ. ಕರೇಣ್ಣನವರ ಅವರು ಬರೆದ ಲೇಖನಗಳ ಸಂಕಲನ. ಬಾಲ್ಯದ ಮಣ್ಣಿನಾಟ, ಕಾಲೇಜು ದಿನಗಳ ತುಂಟಾಟ, ಬದುಕು ಕಟ್ಟಿಕೊಂಡ ಪರದಾಟ ಎಲ್ದವೂ ಅಚ್ಚಾಗಿದೆ. ಕೃಷಿ, ಶಿಕ್ಷಣ, ಭಾವನಾತ್ಮಕ ವಲಯ, ಹಸಿವು, ಸಂಕಟ, ಹಾಸ್ಟೆಲ್, ಪರಿಸರ, ರಾಜಕಾರಣ, ಕ್ರೀಡೆ, ದೇಗುಲದರ್ಶನ ಹೀಗೆ ವೈವಿಧ್ಯಮಯ ವಸ್ತುವಿನ ಬರಹಗಳನ್ನು ಈ ಕೃತಿ ಒಳಗೊಂಡಿದೆ.

ಕೃತಿಗೆ ಮುನ್ನುಡಿ ಬರೆದಿರುವ ಸಾಹಿತಿ ಸಿದ್ದರಾಮ ಹೊನ್ಕಲ್ ಅವರು, ‘ಮೂಲಭೂತವಾಗಿ ಲೇಖಕ ಮಲ್ಲಪ್ಪ ಕರೇಣ್ಣನವರ ತಮ್ಮ ಸುತ್ತಲೂ ನಡೆದ ಆನೇಕ ಘಟನೆಗಳನ್ನು ಇಲ್ಲಿ ಅತ್ಯಂತ ಸರಳವಾಗಿ ಕಥೆಯಂತೆ, ಲಲಿತ ಪ್ರಬಂಧದಂತೆ ದಾಖಲಿಸಿದ್ದಾರೆ. ಒಂದು ಪ್ರಬಂಧದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಗುವ ಪ್ರೀತಿ ಪ್ರೇಮ ಮುಂದೆ ಚಾಟ್ ಮಾಡುವಲ್ಲಿ ವಿಫಲವಾಗಿ, ದೂರಾಗಿ ಅವಿ ಮೇಡಂ ಪ್ರೇಮಕ್ಕೆ ಕಾದಿರುವ ಹಳ್ಳಿಮೇಷ್ಟು ಎಂಬ ಕುತೂಹಲಕಾರಿ ಪ್ರಬಂಧ ಓದಲು ಆಸಕ್ತಿ ಹುಟ್ಟಿಸುತ್ತದೆ. ಮುಂದೆ ಹೋದಂತೆಲ್ಲ ಬದನೆಕಾಯಿ ಪಲ್ಯದ ಘಟನೆ ಅದನ್ನವರು ಮುಳಗಾಯಿ ಪಲ್ಯ ಎಂದು ತಿಳಿಸಿದ್ದಾರೆ. ಅದನ್ನು ತಿನ್ನಲು ಅವರು ಪಡುವ ಕಷ್ಟ: ಹಾಸ್ಟೆಲ್ ನಲ್ಲಿ ೀ ಪಲ್ಯ ಮಾಡಿದಾಗ ಊಟ ಮಾಡಿದೆ. ಇರುವುದು. ಆ ಬಗೆಗಿನ ಘಟನೆಗಳು, ಮುಂದೆ ಭಾವಿ ಪತ್ನಿ ಮನೆಗೆ ಹೋದಾಗಲೂ ಅಲ್ಲಿ ಅವರಿಗೆ ಅದೇ ಮುಳುಗಾಯಿ ಪಲ್ಯ ನೀಡಲು ತರುವುದು ತಮಾಷೆ ಉಂಟು ಮಾಡುತ್ತದೆ. ಇವರ ಪ್ರಬಂಧಗಳಲ್ಲಿ ಕ್ರಿಕೆಟ್ ಆಟದ ಬಗ್ಗೆ: ಖೋಖೋ ಆಟದ ಬಗ್ಗೆ ಅನೇಕ ಘಟನೆಗಳು ಸಂಭವಿಸುತ್ತವೆ, ಎಷ್ಟೋ ಹುಡುಗರು ದನಕರು ಮೇಯಿಸಲು ಹೋದಾಗ ಅದನ್ನು ಬಿಟ್ಟು ಕ್ರಿಕೆಟ್ ಆಡುವುದು ಕಂಡು ಬರುತ್ತದೆ. ಇಂತಹ ವಿಷಯಗಳು ಇಲ್ಲಿಯ ವಸ್ತುಗಳಾಗಿವೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಮಲ್ಲಪ್ಪ ಫ ಕರೇಣ್ಣನವರ

ಲೇಖಕ ಮಲ್ಲಪ್ಪ ಫ ಕರೇಣ್ಣನವರ ಮೂಲತಃ ರಾಣೇಬೆನ್ನೂರ ತಾಲೂಕಿನ ಹನುಮಾಪರ ಗ್ರಾಮದವರು. ಪ್ರಾಥಮಿಕ ಶಿಕ್ಷಣ ಹನುಮಾಪುರದ ಸರಕಾರಿ ಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣ ರಾಣೆಬೆನ್ನೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಬ್ಯಾಡಗಿ ತಾಲ್ಲೂಕಿನ ದುಮ್ಮಿಹಾಳದಲ್ಲಿ ಸೇವೆ ಸಲ್ಲಿಸಿ, 2004ರಲ್ಲಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕರ್ತವ್ಯದಲ್ಲಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಾಮೀಣ ಘಟಕ ಅಧ್ಯಕ್ತ ಮತ್ತು ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿಯಾಗಿದ್ದಾರೆ. ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಕೃತಿಗಳು: ನಮ್ಮೂರ ಅಗಸ್ಯಾಗ ...

READ MORE

Reviews

ನಮ್ಮೂರ ಅಗಸ್ಯಾಗ ಕೃತಿಯ ವಿಮರ್ಶೆ

ಬಾಲ್ಯ, ವೃತ್ತಿ, ಬದುಕಿನ ಅನುಭವಗಳನ್ನು ಪುಟ್ಟ ಪುಟ್ಟ ಲೇಖನಗಳಾಗಿ ಬರೆದ ಬರಹಗಳ ಗುಚ್ಛವಿದು. ಲೇಖಕರ ಜೀವನಾನುಭವ, ಹಳ್ಳಿ ಸೊಗಡಿನ ಬದುಕು, ಗ್ರಾಮ ರಾಜಕೀಯ, ಹಸಿವು, ಬಡತನ ಇತ್ಯಾದಿಗಳೆಲ್ಲವೂ ಈ ಕೃತಿಯಲ್ಲಿ ಚಿತ್ರಣಗೊಂಡಿವೆ. ವಿವಿಧ ಪತ್ರಿಕೆಗಳಲ್ಲಿ ಲೇಖನ, ನುಡಿಚಿತ್ರಗಳಾಗಿ ಬರೆದ ಬರಹಗಳನ್ನು ಸ್ಥಳೀಯ ಸೊಗಡಿನಲ್ಲೇ ಈ ಕೃತಿ ನಿರೂಪಿಸಿದೆ. 37 ಲೇಖನಗಳು ಈ ಕೃತಿಯಲ್ಲಿವೆ. ಪ್ರವಾಸಿ ತಾಣಗಳ ಪರಿಚಯ, ಕೃಷಿ ಪರಿಚಯ, ಹಾಸ್ಯ, ಫಜೀತಿಯ ಪ್ರಸಂಗಗಳು, ಕಿಡಿಗೇಡಿತನ ಈ ಕೃತಿಯ ವೈವಿಧ್ಯವನ್ನು ಹೆಚ್ಚಿಸಿವೆ. ಸೆಗಣಿ ಮಾರಿ ಬಹುಮಾನ ಕೊಟ್ಟದ್ದು, ಅಂದಿನ ಹಳ್ಳಿ ಹುಡುಗರ ಕ್ರಿಕೆಟ್ ಹುಚ್ಚು, ಹಣದ ವ್ಯವಹಾರದಲ್ಲಾಗುವ ಎಡವಟ್ಟುಗಳನ್ನು ನವಿರಾಗಿ ಲಘು ದಾಟಿಯಲ್ಲಿ ವಿವರಿಸಿದ್ದಾರೆ. ಬಹುಶಃ ಪದಮಿತಿ, ಪ್ರಕಟಣಾ ವೇದಿಕೆಗಳ  ಚೌಕಟ್ಟು ಇಲ್ಲವಾಗಿದ್ದರೆ ಈ ಬರಹಗಳು ಇನ್ನಷ್ಟು ವಿಸ್ತರಣೆಗೊಳ್ಳುತ್ತಿದ್ದವೇನೋ ಪೊಲೀಸ್ ಬದುಕಿನ ಅನುಭವ, ಶಿಕ್ಷಕನ ದೃಷ್ಟಿಯಲ್ಲಿ ಕಂಡ ಗ್ರಾಮ ಬಿಂಬಗಳನ್ನೂ 'ನಮ್ಮೂರ ಅಗಸ್ಯಾಗ'ದಲ್ಲಿ ಕಾಣಬಹುದು.

(ಕೃಪೆ ; ಪ್ರಜಾವಾಣಿ)

Related Books