ನಮ್ಮೂರು ಅಮಕುಂದಿ

Author : ಎ.ಎನ್. ಸಿದ್ದೇಶ್ವರಿ

Pages 140

₹ 170.00




Year of Publication: 2018
Published by: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
Address: ಕರ್ನಾಟಕಜಾನಪದ ವಿಶ್ವವಿದ್ಯಾಲಯ ಗೊಟಗೋಡಿ-ತಾ: ಶಿಗ್ಗಾಂವಿ, ಜಿಲ್ಲೆ: ಹಾವೇರಿ
Phone: 0836225518

Synopsys

ಲೇಖಕಿ -ಸಂಶೋಧಕಿ ಡಾ. ಎ.ಎನ್. ಸಿದ್ದೇಶ್ವರಿ ಅವರು ತಮ್ಮೂರು ಅಮಕುಂದಿ ಬಗ್ಗೆ ವಿಶಿಷ್ಟ ಅನುಭವವನ್ನು ದಾಖಲಿಸಿದ ಕೃತಿ-ನಮ್ಮೂರು ಅಮಕುಂದಿ. ಈ ಗ್ರಾಮದ ಭೌಗೋಳಿಕ ಇತಿಹಾಸ ಕೃಷಿ ಸಂಸ್ಕೃತಿ ನಾಗರಿಕತೆ ಬೆಳೆದು ಬಂದ ರೀತಿ , ಐತಿಹಾಸಿಕ ಹಿನ್ನೆಲೆಯನ್ನು ಸಮಗ್ರವಾಗಿ ಅಧ್ಯಯನ ಮಾಡಲಾಗಿದೆ. 

ಗ್ರಾಮ ಸ್ವರೂಪ, ಪಾರಂಪರಿಕ ವೃತ್ತಿಮೂಲ ಸಮುದಾಯ ಗಳು, ಆಚರಣೆಗಳು,  ಜೀವನಾವತ್ರನ ಆಚರಣೆಗಳು,  ವಾಷ್ರಿಕಾವ್ರತ್ತ್ರನ  ಆಚರಣೆಗಳು ಹೀಗೆ ವಿವಿಧ ಅಧ್ಯಾಯಗಳಡಿ ಅಧ್ಯಯನ ಮಾಡಲಾಗಿದೆ. ಕೃತಿಗೆ ಮುನ್ನುಡಿ ಬರೆದ ಕರ್ನಾಟಕ ಜಾನಪದ ವಿ.ವಿ. ಕುಲಪತಿ ಡಾ. ಡಿ.ಬಿ. ನಾಯಕ ಅವರು ‘ಅಮಕುಂದಿ ಗ್ರಾಮವನ್ನು ಸಮಗ್ರ ಆಯಾಮಗಳಿಂದ ನೋಡಿ, ಅಧ್ಯಯನ ಮಾಡಿ ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಮಹತ್ವದ ಕೃತಿಯನ್ನಾಗಿಸುವ ಈ ರೀತಿಯ ಬರವಣಿಗೆಯು ಸಂಶೋಧನೆಯ ಜೀವಾಳವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ಎ.ಎನ್. ಸಿದ್ದೇಶ್ವರಿ
(01 June 1970)

ಡಾ. ಎ.ನ್. ಸಿದ್ದೇಶ್ವರಿ ಅವರು ಜಾನಪದ ಸಾಹಿತ್ಯ ಸಂಶೋಧಕರು. ಕರ್ನಾಟಕ ಜಾನಪದ ಪರಿಷತ್ ಬಳ್ಳಾರಿ ತಾಲೂಕು ಘಟಕ ಅಧ್ಯಕ್ಷರು. ಬಳ್ಳಾರಿಯ ಮುನ್ಸಿಪಲ್ ಹೈಸ್ಕೂಲ್ ನಲ್ಲಿ ಅಧ್ಯಾಪಕರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗದಲ್ಲಿ‘ ಬಳ್ಳಾರಿ ಜಿಲ್ಲೆಯ ಜಾನಪದ ಆಚರಣೆಗಳು’  ಎಂಬ ‌‌‌ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ.  ಪ್ರಕಟಿತ ಕೃತಿಗಳು: ಬಳ್ಳಾರಿ ಜಿಲ್ಲೆಯ ಜಾನಪದ ಆಚರಣೆಗಳು ಸುವ್ವೆ ..ಸುವ್ವೆ..ಸುವ್ವಾಲಿ, ಜಾನಪದ ‌‌‌‌‌‌‌‌‌‌ಹೂಬನ, ಬಾಳೆ(ಸಂಶೋಧನಾ ಪ್ರಬಂಧಗಳು)  ನಮ್ಮೂರು ಅಮಕುಂದಿ(ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ ಪ್ರಕಟಿಸಿದೆ). ಕನ್ನಡ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ಹಾಗೂ‌ ಜಾನಪದ ವಿಶ್ವವಿದ್ಯಾಲಯದಲ್ಲಿ 15 ಲೇಖನಗಳು ಪ್ರಕಟವಾಗಿವೆ. ಉಪನ್ಯಾಸ, ಕಾರ್ಯಕ್ರಮ ನಿರೂಪಣೆ ಹಾಗೂ ಸಂಯೋಜನೆ, ಜಾನಪದ ಸಂಶೋಧನೆ ಸಂಪಾದನೆ ಸಂಗ್ರಹಣೆ ಇತ್ಯಾದಿ ಇವರ ಹವ್ಯಾಸಗಳು. ...

READ MORE

Related Books