ನನ್ನ ಅವ್ವ ನನ್ನ ಅಪ್ಪ ಸಂಪುಟ- 1

Author : ಕಾಳೇಗೌಡ ನಾಗವಾರ

Pages 220

₹ 120.00




Year of Publication: 2009
Published by: ಅನನ್ಯ ಪ್ರಕಾಶನ
Address: #ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ ಧಾರವಾಡ- 580004
Phone: 9448861604

Synopsys

‘ನನ್ನ ಅವ್ವ ನನ್ನ ಅಪ್ಪ’ ಸಂಪುಟ- 1 ಕೃತಿಯು ಹೇಮಾ ಪಟ್ಟಣಶೆಟ್ಟಿ ಅವರ ;‘ಸಂಕಲನ’ ದ್ವೈಮಾಸಿಕ ಪತ್ರಿಕೆಯಲ್ಲಿ ಪ್ರಕಟಿತಗೊಂಡ ಲೇಖನಗಳಾಗಿವೆ. ಈ ಕೃತಿಯು 21 ಅಧ್ಯಾಯಗಳಾದ ನನ್ನ ತಂದೆ ನನ್ನ ಅಮ್ಮ (ಶ್ಯಾಮಲಾ ಮಾಧವ), ನನ್ನ ಅವ್ವ ನನ್ನ ಅಪ್ಪ( ಶಿವಪುತ್ರ ಮ. ರಾಚಯ್ಯನವರ), ನನ್ನ ಅಪ್ಪ ನನ್ನ ಅಮ್ಮ (ಬಿ.ಎಂ. ರೋಹಿಣಿ), ನನ್ನ ಅಪ್ಪ ನನ್ನ ಅವ್ವ (ವೆಂಕಟೇಶ ಮಾಚಕನೂರ), ನನ್ನ ಅಣ್ಣ ನನ್ನ ಅಮ್ಮ (ಕುಸುಮಾ ಶಾನಭಾಗ), ನನ್ನ ಅವ್ವ ನನ್ನ ಅಪ್ಪ (ಅಶೋಕ ಶೆಟ್ಟರ್), ನನ್ನ ಅಪ್ಪ ನನ್ನ ಅಮ್ಮ (ಸುಮಂಗಲಾ), ನನ್ನ ಅಮ್ಮ ನನ್ನ ಅಯ್ಯ ( ರೇಖಾ ವಿಷ್ಣುಮೂರ್ತಿ), ನನ್ನ ಅವ್ವ ನನ್ನ ಅಪ್ಪ(ಎಂ.ಡಿ ಗೋಗೇರಿ), ನನ್ನ ಅಪ್ಪಯ್ಯ (ಪಿ.ಎಂ.ಹೆಗಡೆ), ಸೋದರ ಅತ್ತೆ ನನ್ನ ಅಮ್ಮ( ಉಮೇಶ್ ಎನ್. ಸಂಗನಾಳಮಠ), ನನ್ನಪ್ಪ, ನನ್ನವ್ವ (ಗೀತಾ ನಾಗಭೂಷಣ) ನನ್ನ ಅಪ್ಪ (ಕಾರ್‍ಯಾನಂದ, ಶ್ರೀನಿವಾಸ ಹಾವನೂರ), ನನ್ನ ಅಯ್ಯ, ನನ್ನ ಅಮ್ಮ (ಟಿ.ಆರ್. ರಾಧಾಕೃಷ್ಣ), ನನ್ನ ಅವ್ವ, ನನ್ನ ಅಪ್ಪ( ಕೆ. ಆನಂದ ಗಾಣಿಗ), ನನ್ನ ಅಪ್ಪ ನನ್ನ ಅವ್ವ( ಹಾಲಾಡಿ ಮಾರುತಿ ರಾವ್) ನನ್ನ ಅಪ್ಪ ನನ್ನ ಅವ್ವ (ಎಂ. ರಾಮಚಂದ್ರಗೌಡ), ನನ್ನ ಅಪ್ಪ ಅಮ್ಮ( ಜಿ.ಟಿ. ಶ್ರೀಧರ ಶರ್ಮ), ನನ್ನ ಅಪ್ಪಯ್ಯ ಮತ್ತು ಅಮ್ಮ (ಪ್ರೇಮಾ ಭಟ್), ನನ್ನ ಅಪ್ಪ-ಅವ್ವ (ಎನ್ಕೆ ಕುಲಕರ್ಣಿ), ನನ್ನ ಅಪ್ಪ ನನ್ನ ಅಮ್ಮ (ಮೋಹನ ಹಬ್ಬು) ಇವೆಲ್ಲವುಗಳನ್ನು ಒಳಗೊಂಡಿದೆ. ಕೃತಿಯ ಪ್ರಸ್ತಾವನೆಯಲ್ಲಿ ಕೆಲವೊಂದು ವಿಚಾರಗಳನ್ನು ಹೀಗೆ ಬಿಂಬಿಸಲಾಗಿದೆ : ಸಂಸ್ಕೃತಿಯ ರಕ್ಷಣೆ, ಇತಿಹಾಸದ ನಿರೂಪಣೆ, ಸಾಹಿತ್ಯದ ರೂಪಣೆಯ ನಿರಂತರ ಬೆಳವಣಿಗೆಯ ಜೊತೆಗೆ ವ್ಯಕ್ತಿ ಭಾವಶುದ್ದಿ, ಮನೋವಿರೇಚನ ಹಾಗೂ ರಚನಾತ್ಮಕ ದೃಷ್ಟಿಯತ್ತ ಒಲವು ತೋರುತ್ತವೆ. ಇದನ್ನು ಮನಗಂಡೇ ಇಂಥದೊಂದು ಲೇಖನ ಮಾಲಿಕೆಯ ಹೊಳಹು ಹಾಕಿಕೊಂಡು ಬದುಕಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಬೇರೆ ಬೇರೆ ವ್ಯಕ್ತಿಗಳನ್ನು, ಬೇರೆ ಬೇರೆ ಲೇಖಕರನ್ನು ಸಂಪರ್ಕಿಸಿ ಅವರಿಂದ ಲೇಖನಗಳನ್ನು ಬರೆಸಿಕೊಂಡವು, ಒಂದು ವರ್ಷಕ್ಕೆ ಬೇಕಾಗುವಷ್ಟು ಲೇಖನಗಳನ್ನು ಕೈಯಲ್ಲಿಟ್ಟುಕೊಂಡೇ ಈ ಮಾಲಿಕೆಯ ಮೊದಲ ಲೇಖನವನ್ನು ಪ್ರಕಟಿಸಿದೆವು. ಇದು ಅತ್ಯಂತ ಜನಪ್ರಿಯವಾಯಿತಲ್ಲದೆ ಸಾಹಿತ್ಯ ಸಂಸ್ಕೃತಿಯ ದೃಷ್ಟಿಯಿಂದಲೂ ಇತಿಹಾಸದ ಮರೆತುಹೋದ ಹಲವಾರು ವಿವರಗಳನ್ನು ನೋಡುವ ದೃಷ್ಟಿಯಿಂದಲೂ ಮಹತ್ವದ್ದೆನಿಸಿತು. ಈ ಲೇಖನಗಳಲ್ಲಿ ಎಷ್ಟೋ ವರ್ಷಗಳ ಹಿಂದಿನ ನೆನಪುಗಳನ್ನು ಕೆದಕಿ ಆತ್ಮಕಥೆಯ ಸ್ವರೂಪದಲ್ಲಿ ಆರಂಭವಾಗುವ ಬರವಣಿಗೆ ಅವನ ತಂದೆ-ತಾಯಿಗಳ ಆ ಕಾಲದ ಚರಿತ್ರೆಯನ್ನು, ಸಂಬಂಧಗಳನ್ನು, ಸಾಮಾಜಿಕ ಸ್ವರೂಪವನ್ನು, ಆರ್ಥಿಕ ಸ್ಥಿತಿ ಗತಿಗಳನ್ನು, ಸಂಸ್ಕೃತಿ-ಭಾಷೆಗಳ ತಾಕಲಾಟಗಳನ್ನು, ಜೀವನ ಮೌಲ್ಯಗಳನ್ನು ಚಿತ್ರಿಸುವಲ್ಲಿ ಲೇಖಕನ ನಿಸ್ಪೃಹತೆ ಸಾಮಾನ್ಯವಾಗಿ ಕಂಡುಬರುತ್ತದೆ. ಈ ಬರವಣಿಗೆಯಲ್ಲಿ ಲೇಖಕ ಸ್ವತಃ ಅಚ್ಚರಿಪಡುವಂತೆ, ಅವನ ಪೂರ್ವಜೀವನ ತನ್ನ ಅವ್ವ-ಅಪ್ಪಂದಿರ ಕನ್ನಡಿಯಲ್ಲಿ ಪ್ರತಿಬಿಂಬಿತಗೊಳ್ಳುತ್ತ ಬಂದಿದೆ. ಲೇಖಕರು ತಮ್ಮ ತಾಯ್ತಂದೆಯರನ್ನು ಕೃತಜ್ಞತೆಯಿಂದ, ಗೌರವದಿಂದ, ವಿಮರ್ಶಾತ್ಮಕ ದೃಷ್ಟಿಕೋನದಿಂದ, ಮೃದುವ್ಯಂಗ್ಯ ದೃಷ್ಟಿಯಿಂದ ನೋಡುವಾಗ ಪರೋಕ್ಷವಾಗಿ ತಮ್ಮ ಇಂದಿನ ಜೀವನದ ಜೊತೆಗೆ ತೌಲನಿಕವಾಗಿ ತಾವು ಬೆಳೆದು ಬಂದ ಪರಿಸರವನ್ನು ಓದುಗರ ವಿಮರ್ಶೆಯ ನಿಕಷಕ್ಕೆ ಒಡ್ಡಿದ್ದಾರೆ. ಹೀಗಾಗಿ ಇಲ್ಲಿಯ ಎಲ್ಲ ಲೇಖನಗಳು ಒಂದಕ್ಕಿಂತ ಒಂದು ಭಿನ್ನ, ವಿಶಿಷ್ಟ, ಕೆಲವೊಮ್ಮೆ ವಿಚಿತ್ರ, ಅದ್ಭುತ ಎನ್ನುವಂತೆ ಇವೆ. ಒಂದೊಂದು ಲೇಖನವೂ ಒಂದೊಂದು ಬೆಳಕಿನ ಲೋಕದ ಅಪೂರ್ವ ಚಿತ್ರ-ಸಂಪುಟವಾಗಿವೆ ಎಂದಿದ್ದಾರೆ.

About the Author

ಕಾಳೇಗೌಡ ನಾಗವಾರ
(02 February 1947)

ಕತೆಗಾರ ಕಾಳೇಗೌಡ ನಾಗವಾರ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ನಾಗವಾರದವರು. ತಂದೆ ಸಿದ್ದೇಗೌಡ, ತಾಯಿ ಲಿಂಗಮ್ಮ. ನಾಗವಾರ, ಚೆನ್ನಪಟ್ಟಣ, ಮಂಡ್ಯ, ಮೈಸೂರಿನಲ್ಲಿ ಶಿಕ್ಷಣ ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದ ಎಂ.ಎ.(1971)  ಪದವೀಧರರು. ಬೆಂಗಳೂರು ವಿ.ವಿ.ಯಿಂದ ‘ಕಾಡುಗೊಲ್ಲರ ಒಂದು ಹಟ್ಟಿಯ ಅಧ್ಯಯನ’ ಪ್ರಬಂಧಕ್ಕೆ ಪಿಎಚ್ ಡಿ ಪದವಿ (1985) ಪಡದರು.  ಕೊಡಗು ಜಿಲ್ಲೆಯ ಗೋಣಿಕೊಪ್ಪಲು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದ ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದರು. ಬೆಂಗಳೂರು ವಿ.ವಿ. ಜ್ಞಾನಭಾರತಿ ಕನ್ನಡ (1985) ಅಧ್ಯಯನ ಕೇಂದ್ರ ಹಾಗೂ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ (2007ರವರೆಗೆ) ಪ್ರಾಧ್ಯಾಪಕರಾಗಿದ್ದರು.  ಕಾಳೇಗೌಡ ನಾಗವಾರ ಅವರ ...

READ MORE

Related Books