ನನ್ನ ಬಣ್ಣದ ಬದುಕು

Author : ದು.ನಿಂ. ಬೆಳಗಲಿ

Pages 95

₹ 50.00




Year of Publication: 1999
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಇದು ಕನ್ನಡ ವೃತ್ತಿರಂಗಭೂಮಿಗೆ ಪರಾಯವನಿಸಿರುವ ಖ್ಯಾತ ರಂಗಕರ್ಮಿ ಏಣಗಿ ಬಾಳಪ್ಪನವರ ರಂಗಸಾಧನೆಯ ಸಂಕಥನ ಈ ಕೃತಿ ಏಣಗಿಯವರ ಜೀವನ ಚರಿತ್ರೆಯಾಗುತ್ತಲೇ ಕಲಾವೈಭವನಾಟ್ಯಸಂಘದ ಚರಿತ್ರೆ ಹಾಗೂ ಸಮಕಾಲೀನ ರಂಗಭೂಮಿಯ ಚರಿತ್ರೆಯಾಗಿಯೂ ಬೆಳೆದು ಬಂದಿದೆ. ಕರ್ನಾಟಕದ ವೃತ್ತಿರಂಗಭೂಮಿಯಲ್ಲಿ ಅರ್ಧಶತಮಾನ ಕಾಲ ವೈಭವಪೂರ್ಣವಾಗಿ ಒಂದು ನಾಟಕ ಸಂಸ್ಥೆಯನ್ನು ನಡೆಸಿಕೊಂಡು ಬಂದು ದಶಕಗಳ ಕಾಲ ಶ್ರೇಷ್ಠದರ್ಜೆಯ ರಂಗನಾಟರಾಗಿ ಮೆರದು ಐತಿಹಾಸಿಕ ದಾಖಲೆ ನಿರ್ಮಿಸಿರುವ ಬಳಪ್ಪ ನವರ ಬಣ್ಣದ ಬದುಕನ್ನು ಈ ಕೃತಿಯಲ್ಲಿ ವೈಶಿಷ್ಟ್ಯಪೂರ್ಣವಾಗಿ ಹಿಡಿದಿಡಲಾಗಿದೆ.

About the Author

ದು.ನಿಂ. ಬೆಳಗಲಿ
(30 March 1931 - 08 January 2000)

ಕಾದಂಬರಿಕಾರ ದು.ನಿಂ. ಬೆಳಗಲಿಯವರು  (ಪೂರ್ಣ ಹೆಸರು: ದುರದುಂಡೇಶ್ವರ ನಿಂಗಪ್ಪ ಬೆಳಗಲಿ, ಜನನ: 30-03-1931) ಹುಟ್ಟಿದ್ದು ಬನಹಟ್ಟಿಯಲ್ಲಿ. ತಂದೆ ನಿಂಗಪ್ಪ. ತಾಯಿ ಚೆನ್ನಮ್ಮ, ಅಥಣಿ ತಾಲ್ಲೂಕಿನ ಐನಾಪುರ ಇವರ ಮೂಲ. ಬನಹಟ್ಟಿಯಲ್ಲಿ ನೆಲೆಸಿದ್ದರು. ಒಣಬಾಳೇ ದಿಂಡು ಸುಟ್ಟು ಕರೇ ಬಣ್ಣ ತಯಾರಿಸುತ್ತಿದ್ದು, ಬಾಳೇ ಬೂದಿ ಮನೆತನವೆಂದದ್ದು ಬೆಳಗಲಿ ಎಂಬ ಅಡ್ಡ ಹೆಸರಾಯಿತು. ತಾಯಿ ಜಾನಪದ ಕಥೆಗಳ ಹಾಡುಗಾರ್ತಿ. ಎಸ್.ಎಸ್.ಎಲ್.ಸಿ. ಪಾಸ್ ಮಾಡಿದ ಶಾಲೆಯಲ್ಲಿ (1951-55) ಶಿಕ್ಷಕರಾದರು. ಬೆನ್ನ ಹಿಂದಿನ ಕಣ್ಣು ಪ್ರಥಮ ಕಥಾಸಂಕಲನ(1957) ಪ್ರಕಟ, ಬೆಟಗೇರಿ ಕೃಷ್ಣಶರ್ಮರ ಜಯಂತಿ ಪತ್ರಿಕೆಗೆ ಹಾಗೂ ಪ್ರಪಂಚ, ಜೀವನ ಪತ್ರಿಕೆಗಳಿಗೆ ಬರೆದರು. 1960 ರಲ್ಲಿ ಮೊದಲ ಕಾದಂಬರಿ ಮುಳ್ಳು ...

READ MORE

Related Books