ನನ್ನ ಮನದ ಗಜಲ್

Author : ಟಿ.ಎಂ. ಭಾಸ್ಕರ್

Pages 107

₹ 70.00




Year of Publication: 2017
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಕವಿ ಡಾ. ಟಿ.ಎಂ. ಭಾಸ್ಕರ್ ಅವರು ರಚಿಸಿದ ಗಜಲ್ ಗಳ ಸಂಕಲನ-ನನ್ನ ಮನದ ಗಜಲ್. ವಸ್ತು ವೈವಿಧ್ಯತೆಯೊಂದಿಗೆ ತನ್ನದೇ  ಗತಿಯನ್ನು ಅವಲಂಬಿಸುವ ಇಲ್ಲಿಯ ಗಜಲ್ ಗಳು , ಆಕರ್ಷಕ ಶೈಲಿಯೊಂದಿಗೆ ಮನ ಸೆಳೆಯುತ್ತವೆ. ಉರ್ದು ಸಾಹಿತ್ಯದಲ್ಲಿ ಗಜಲ್ ಪ್ರಕಾರ ಪ್ರಾಚೀನವಾದರೂ ಕನ್ನಡ ಸಾಹಿತ್ಯದಲ್ಲಿ ಇತ್ತೀಚಿನದ್ದು. ಆದರೂ, ಈ ಕಾವ್ಯ ಪ್ರಕಾರ ತೀವ್ರ ಗತಿಯಲ್ಲಿ ಬೆಳೆಯುತ್ತಿದೆ. ಕವಿಗಳು ಹಾಗೂ ಓದುಗರು ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ, ಈ ಗಜಲ್ ಸಂಕಲನವು ಓದುಗರ ಗಮನ ಸೆಳೆದಿದೆ.

About the Author

ಟಿ.ಎಂ. ಭಾಸ್ಕರ್

ಪ್ರೊ. ಟಿ.ಎಂ. ಭಾಸ್ಕರ್ ಅವರು ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ವಜ್ರಖಾನ ಸಲಗರ ಗ್ರಾಮದವರು. ಧಾರವಾಡದ ಕರ್ನಾಟಕ ವಿವಿ. ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿದ್ದು ನಂತರ ಅದೇ ವಿಶ್ವವಿದ್ಯಾಲಯದ ಪ್ರಭಾರಿ (2020) ಕುಲಪತಿಗಳಾಗಿದ್ದರು. ಕೃತಿಗಳು: ನನ್ನ ಮನದ ಗಜಲ್ (ಗಜಲ್ ಸಂಕಲನ) ...

READ MORE

Related Books