ನನ್ನ ಸಾಹಿತ್ಯದ ಐದು ದಶಕಗಳು

Author : ಬಿ.ಎಸ್. ಜಯಪ್ರಕಾಶ ನಾರಾಯಣ

Pages 80

₹ 50.00




Year of Publication: 2015
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಯು. ಆರ್‌. ಅನಂತಮೂರ್ತಿಯವರು ಇಂಗ್ಲಿಷ್‌ನಲ್ಲಿ ಬರೆದ ’ನನ್ನ ಸಾಹಿತ್ಯದ ಐದು ದಶಕಗಳು’ ಕೃತಿಯನ್ನು ಪತ್ರಕರ್ತ, ಅನುವಾದಕ ಬಿ. ಎಸ್. ಜಯಪ್ರಕಾಶ ನಾರಾಯಣ ಕನ್ನಡಕ್ಕೆ ತಂದಿದ್ದಾರೆ.

ಕೃತಿಯ ಬಗ್ಗೆ ಯು. ಆರ್‌. ಅನಂತಮೂರ್ತಿಯವರು ಹೀಗೆನ್ನುತ್ತಾರೆ: ಈ ಲೇಖನ ನನ್ನ ಸಾಹಸ. ಎಷ್ಟು ನೈಜವಾಗಿ ನನ್ನ ಬಗ್ಗೆ ನಾನೇ ಮಾತಾಡಬಹುದು ಎಂಬುದು ಕಠಿಣವಾದ - ಆತ್ಮಪರೀಕ್ಷೆ ಆದರೆ ಬರಹಗಾರನಾಗಿ ನಾನಲ್ಲದೆ ಬೇರೆ ಯಾರೂ ಹೇಳಲಾರದ ಸಂಗತಿಗಳಿದ್ದರೆ ಅದನ್ನು ಹೇಳುವುದು ಕೃತಿ ಪರೀಕ್ಷೆಯ ಮತ್ತು ಆಸ್ವಾದದ ದೃಷ್ಟಿಯಿಂದ ಓದುಗನಿಗೆ ಸಹಾಯಕವಾದದ್ದು. ಕನ್ನಡದಲ್ಲಿ ಬರೆಯಬೇಕಾದದ್ದನ್ನು ನಾನು ಇಂಗ್ಲಿಷಿನಲ್ಲಿ ಬರೆಯಬೇಕಾಯಿತು. ಗೆಳೆಯ ಜಯಪ್ರಕಾಶ ನಾರಾಯಣರು ಇದನ್ನು ಬಹಳ ಶ್ರಮ ವಹಿಸಿ ನನ್ನ ಮಾತಿಗೆ ಹತ್ತಿರವಾಗುವಂತೆ ಅನುವಾದಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About the Author

ಬಿ.ಎಸ್. ಜಯಪ್ರಕಾಶ ನಾರಾಯಣ

ಪತ್ರಕರ್ತ ಬಿ.ಎಸ್. ಜಯಪ್ರಕಾಶ್‌ ನಾರಾಯಣ ಅವರು ಉತ್ತಮ ಅನುವಾದಕ ಕೂಡ. ಪ್ರಜಾವಾಣಿ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಉಪಸಂಪಾದಕ/ ವರದಿಗಾರರಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಟಿ.ಜೆ.ಎಸ್‌. ಜಾರ್ಜ್‌ ಅವರ ಎಂ.ಎಸ್., ಯು.ಆರ್‌. ಅನಂತಮೂರ್ತಿ ಅವರ ’ನನ್ನ ಸಾಹಿತ್ಯದ ಐದು ದಶಕಗಳು’, ’ನಾನು ಮಲಾಲ’ ಕೃತಿಗಳನ್ನು ಅನುವಾದಿಸಿದ್ದಾರೆ. ಛಾಯಾಗ್ರಾಹಕ ಕೆ.ಜಿ. ಸೋಮಶೇಖರ ಅವರ ಆತ್ಮಕತೆ ’ನನ್ನ ಬದುಕು ನನ್ನ ಫೋಟೊಗ್ರಫಿ’ ಕೃತಿಯನ್ನು ನಿರೂಪಿಸಿದ್ದಾರೆ. ...

READ MORE

Related Books