ನನ್ನವ್ವನ ಬಯೋಗ್ರಫಿ

Author : ಜಯರಾಮಚಾರಿ

Pages 72

₹ 100.00




Year of Publication: 2022
Published by: ಬಹುರೂಪಿ ಪ್ರಕಾಶನ
Address: ಎಂಬೆಸಿ ಸೆಂಟರ್ ,111, ಮೊದಲನೇ ಮಹಡಿ, ಕ್ರೆಸೆಂಟ್ ರಸ್ತೆ, ಕುಮಾರಪಾರ್ಕ್ ಈಸ್ಟ್, ಬೆಂಗಳೂರು -560001
Phone: 7019182729

Synopsys

‘ನನ್ನವ್ವನ ಬಯೋಗ್ರಫಿ’ ಕೃತಿಯು ಜಯರಾಮಚಾರಿ ಅವರ ತಾಯಿಯ ಕುರಿತ ಜೀವನಚರಿತ್ರೆಯಾಗಿದೆ. ಲೇಖಕರ ಮೊದಲ ಮಾತು ಹೀಗಿದೆ: ಇದು ನಾನು ಕಂಡ ನನ್ನವ್ವನ ಬಗ್ಗೆ ಬರೆದುದಾದರೂ ,ಅಲ್ಲೆಲ್ಲೋ ಕುಳಿತು ಓದುತ್ತಿರುವ ನಿಮ್ಮ ತಾಯಿಯ ಬಗ್ಗೆಯೂ ಆಗಿರಬಹುದು. ಪ್ರೀತಿ ವಾತ್ಸಲ್ಯದಲ್ಲಿ ಮತ್ತು ಪಡುವ ಕಷ್ಟಗಳಲ್ಲಿ ಎಲ್ಲ ತಾಯಂದಿರು ಹೆಚ್ಚು ಕಮ್ಮಿ ಒಂದೇ . ಈ ಪುಸ್ತಕ ಓದುವಾಗ ಇನ್ನು ಕೆಲವು ದಿನ ಇದ್ದರೆ ಎಂದುಕೊಳ್ಳುವ ನಿಮ್ಮ ಜೊತೆ ಭೌತಿಕವಾಗಿ ಇಲ್ಲದಿರುವ ತಾಯಿಯ ನೆನಪಾದರೆ, ತರಕಾರಿ ಹೆಚ್ಚುತ್ತಾ ಲೇಟಾಗಿ ಬರುತ್ತಿರುವ ಮಕ್ಕಳ ಬರುವಿಕೆಗಾಗಿ ಧ್ಯಾನಿಸುತ್ತಿರುವ ಮನೆಯಲ್ಲಿರುವ ನಿಮ್ಮ ತಾಯಿಯೋ , ಊರಲ್ಲಿದ್ದು ಪ್ರತಿ ದಿನ ಕಾಲ್ ಮಾಡಿ ‘ಏನ್ ತಿಂದೆ’ ಎಂದು ಕೇಳಿ, ‘ಹುಷಾರು ಮಗ’ ಎಂದು ಫೋನಿಡುವ ,ನಿಮ್ಮದೇ ಬರುವಿಕೆಯಲ್ಲಿ ಕಾದು ಕುಳಿತಿರುವ ನಿಮ್ಮ ತಾಯಿಯೋ ನೆನಪಾಗಿ .ನಿಮ್ಮ ತಾಯಿಗೊಂದು ಫೋನ್ ಹಚ್ಚಿ ಮಾತಾಡುವ ಮನಸಾದರೆ, ಮನೆಗೆ ಹೋದೊಡನೆ ವಿನಾಕಾರಣ ನಿಮ್ಮ ತಾಯಿಯನ್ನು ನೀವು ತಬ್ಬಿಕೊಂಡರೆ ಈ ಪುಸ್ತಕಕ್ಕೆ ಸಾರ್ಥಕತೆ ಸಿಕ್ಕೀತು’ ಎಂದಿದೆ.

 

About the Author

ಜಯರಾಮಚಾರಿ

ಬೆಂಗಳೂರಿನವರು, ನಮ್ಮ ಮೆಟ್ರೋದಲ್ಲಿ ಉದ್ಯೋಗ. ಅಡಕಸಬಿ ಅಡ್ಡ ಕ್ಲಬ್ ಹೌಸ್ ನ ರೂವಾರಿ, ನಿತ್ಯ ಓದಿನ ಜಾತ್ರೆಯಾದ ಓದು ಜನಮೇಜಯ ಕಾರ್ಯಕ್ರಮ ಶುರು ಮಾಡಿದವರು. ಬ್ಲಾಗ್ ಬರಹಗಾರರು ಮತ್ತು ಸಿನಿಕರ್ತರು ಕೂಡ.ಕೆಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಕೃತಿ : ಕರಿ ಮುಗಿಲ ಕಾಡಿನಲಿ ...

READ MORE

Reviews

ನನ್ನವ್ವನ ಬಯೋಗ್ರಾಫಿ ಕೃತಿಯ ವಿಮರ್ಶೆ

ವೃತ್ತಿಯಲ್ಲಿ ಬೆಂಗಳೂರಿನ ‘ನಮ್ಮ ಮೆಟ್ರೊ’ದಲ್ಲಿ ಸ್ಟೇಷನ್‌ ಸೂಪರಿಂಟೆಂಡೆಂಟ್‌ ಆಗಿರುವ ಲೇಖಕ ಜಯರಾಮಾಚಾರಿ, ತಮ್ಮ ಅಮ್ಮನ ನೆನಪಿನ ಬುತ್ತಿಯನ್ನು ತೆರೆದಿಟ್ಟಿರುವ ಕೃತಿ ‘ನನ್ನವ್ವನ ಬಯೋಗ್ರಫಿ’.

ಹೆತ್ತವ್ವನ ಉಸಿರುನಿಂತ ಗಳಿಗೆಯಿಂದ ಕೃತಿಯನ್ನು ಆರಂಭಿಸಿರುವ ಲೇಖಕರು ಅವ್ವನ ನೆನಪನ್ನು ಕೆದಕುತ್ತಾ ಹೋಗುತ್ತಾರೆ. ಈ ನೆನಪೆಲ್ಲವನ್ನೂ ಒಂದೇ ಗುಕ್ಕಿನಲ್ಲಿ ಬರೆದದ್ದಾಗಿ ಲೇಖಕರು ಉಲ್ಲೇಖಿಸಿದ್ದಾರೆ. ಬರವಣಿಗೆ ಇದಕ್ಕೆ ಸಾಕ್ಷ್ಯ ಒದಗಿಸುತ್ತದೆ. ಮಕ್ಕಳಿಗೆ ನೀಡುವ ಪ್ರೀತಿ, ಆರೈಕೆ, ಮಮತೆಯಲ್ಲಿ ತಾಯಂದಿರೆಲ್ಲ ಒಂದೇ. ಹೀಗಾಗಿ ಲೇಖಕರು ತಮ್ಮ ಹೆತ್ತವ್ವನ ಕರ್ತವ್ಯ, ಜವಾಬ್ದಾರಿ, ಆಕೆ ಎದುರಿಸಿದ ಸವಾಲು, ಸಂಕಷ್ಟಗಳನ್ನು ವಿವರಿಸುವಾಗ ಓದುಗರಿಗೂ ತಮ್ಮ ತಾಯಿಯೊಮ್ಮೆ ನೆನಪಾದಾರು. ಈ ರೀತಿ ನೆನಪಾದರೆ ಪುಸ್ತಕಕ್ಕೆ ಸಾರ್ಥಕತೆ ಸಿಕ್ಕೀತು ಎಂದೂ ಲೇಖಕರು ಹೇಳಿದ್ದಾರೆ.

ತಾಯಿಯ ನೆನಪುಗಳನ್ನು ಮೆಲುಕು ಹಾಕುತ್ತಾ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ, ನಿರ್ಲಕ್ಷ್ಯವನ್ನೂ ಈ ಕೃತಿ ತೆಳ್ಳಗಾಗಿ ತೆರೆದಿಟ್ಟಿದೆ. ಸಂಬಂಧಗಳ ಗಟ್ಟಿತನವನ್ನೂ ಜೊತೆಗೆ ಪೊಳ್ಳುತನವನ್ನೂ ಲೇಖಕರು ಬಿಚ್ಚಿಟ್ಟಿದ್ದಾರೆ. ಈ ವಿಚಾರದಲ್ಲಿ ಯಾವುದೇ ಅಳುಕಿಲ್ಲದೆ ಒಂದು ಅಧ್ಯಾಯವನ್ನೇ ಮೀಸಲಿಟ್ಟಿದ್ದಾರೆ.ಕೃತಿ: ನನ್ನವ್ವನ ಬಯೋಗ್ರಫಿಲೇ: ಜಯರಾಮಾಚಾರಿ

(ಕೃಪೆ: ಪ್ರಜಾವಾಣಿ)

Related Books