‘ನಾನ್ಯಾರು-?’ ಆಧ್ಯಾತ್ಮಿಕ ಆರೋಗ್ಯದರ್ಶನ

Author : ಎಸ್.ಪಿ ಯೋಗಣ್ಣ

Pages 298

₹ 300.00




Year of Publication: 2020
Published by: ತಾಯಮ್ಮ ಪ್ರಕಾಶನ
Address: ಆರೋಗ್ಯ ಸಂಸ್ಥೆ, #5, ಮಹಾಬೋಧಿ ರಸ್ತೆ, ಸರಸ್ವತಿಪುರಂ, ಮೈಸೂರು-09
Phone: 96631113722

Synopsys

‘ನಾನ್ಯಾರು-?’ ಆಧ್ಯಾತ್ಮಿಕ ಆರೋಗ್ಯದರ್ಶನ' ಕೃತಿಯು ಡಾ. ಎಸ್.ಪಿ ಯೋಗಣ್ಣ ಅವರ ಲೇಖನಗಳ ಸಂಕಲನವಾಗಿದೆ. ಈ ಕೃತಿಯು 18 ಪ್ರಮುಖ ಅಧ್ಯಾಯಗಳನ್ನು ಒಳಗೊಂಡಿದೆ.  ನಾನ್ಯಾರು..?, ವಿಶ್ವಸೃಷ್ಟಿ ಮತ್ತು ವಿಕಾಸ, ಮನುಷ್ಯ ವಿಶ್ವರೂಪಿ, ಮನುಷ್ಯನ ಬೆಳವಣಿಗೆ, ಹುಟ್ಟು ಬೆಳವಣಿಗೆ-ಜೀವಾವಧಿ-ಸಾವು, ಜೀವಚಕ್ರ, ದೇಹದ ರಚನೆ ಮತ್ತು ಕಾರ್ಯಗಳು; ದೇಹದ ರಚನೆ ಮತ್ತು ಕಾರ್ಯಗಳು, ಜೀವಕೋಶದ ಮೂಲ ರಚನೆ, ನರಮಂಡಲ ವ್ಯವಸ್ಥೆ, ಹೃದಯ-ರಕ್ತನಾಳ-ರಕ್ತಗಳ ವ್ಯವಸ್ಥೆ, ಉಸಿರಾಟದ ವ್ಯವಸ್ಥೆ, ಜೀರ್ಣಾಂಗ ವ್ಯವಸ್ಥೆ, ಮೂತ್ರಾಂಗ ವ್ಯವಸ್ಥೆ, ಚರ್ಮ ವ್ಯವಸ್ಥೆ, ಮೂಳೆ ಮತ್ತು ಸ್ನಾಯುಗಳ ವ್ಯವಸ್ಥೆ, ಒಳಸುರಿಕೆ ಗ್ರಂಥಿ ವ್ಯವಸ್ಥೆ, ಸಂತಾನೋತ್ಪತ್ತಿ ವ್ಯವಸ್ಥೆ, ದೃಷ್ಟಿ ವ್ಯವಸ್ಥೆಯ ಅಂಗಾಂಗಳು, ನಿರೋಧಕ ವ್ಯವಸ್ಥೆ, ವಿವಿಧ ವ್ಯವಸ್ಥೆಗಳ ಆರೋಗ್ಯದ ಮಾನದಂಡಗಳು, ದೇಹದ ಕಾರ್ಯಗಳ ನಿಯಂತ್ರಣ, ಮನಸ್ಸು ಮತ್ತು ಅದರ ಕಾರ್ಯಗಳು; ಮನಸ್ಸು ಎಲ್ಲಿದೆ? ಮನಸ್ಸಿನ ಸ್ತರಗಳು, ಮನಸ್ಸಿನ ಗುಣಗಳು, ಭಾವನೆಗಳು, ಆಲೋಚನೆಗಳು, ಮನುಷ್ಯನ ಮೂಲಭೂತ ಅಪೇಕ್ಷೆಗಳು, ಮಾನಸಿಕ ಸಹಿಷ್ಣುತೆ, ಜ್ಞಾಪಕಶಕ್ತಿ ಮತ್ತು ಮರೆವು, ಬುದ್ಧಿ, ವ್ಯಕ್ತಿತ್ವ, ಮಾನಸಿಕ ತರಬೇತಿ, ನಿದ್ರೆ, ಕನಸು, ಮಾನಸಿಕ ಆರೋಗ್ಯದ ಮಾನದಂಡಗಳು, ಆಧ್ಯಾತ್ಮಿಕ ಜ್ಞಾನ, ಆಧ್ಯಾತ್ಮ ಎಂದರೇನು?, ಆಧ್ಯಾತ್ಮಿಕ ಆರೋಗ್ಯ ಎಂದರೇನು? ಸಂತೋಷ-ಅಸಂತೋಷ ಹೇಗೆ, ಆತ್ಮ ಮತ್ತು ಅದರ ಕಾರ್ಯಗಳು, ಜೈವಿಕ ಶಕ್ತಿಗಳು, ಆಧ್ಯಾತ್ಮಿಕ ಶಕ್ತಿ ಮತ್ತು ಅದರ ಪರಿಣಾಮಗಳು, ಆಧ್ಯಾತ್ಮಿಕ ಶಕ್ತಿಗಳಿಕೆ ವಿಧಾನಗಳು, ಆಧ್ಯಾತ್ಮಿಕ ಜೀವನ ಶೈಲಿ ಹೇಗೆ? ಇವೆಲ್ಲವನ್ನು ಒಳಗೊಂಡಿದೆ.

About the Author

ಎಸ್.ಪಿ ಯೋಗಣ್ಣ
(08 May 1955)

ಡಾ. ಎಸ್.ಪಿ ಯೋಗಣ್ಣ ಅವರು ಮೂಲತಃ ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ಎಸ್.ಎಸ್.ಎಲ್.ಸಿ ಯಲ್ಲಿ 30ನೇ ರ್‍ಯಾಂಕ್ ಪಡೆದು, ಎಂ.ಬಿ.ಬಿ.ಎಸ್ (3 ನೇ ರ್‍ಯಾಂಕ್- 1977), ಎಂ.ಡಿ.(ಮೆಡಿಸಿನ್-1981), ಎಫ್, ಐ.ಸಿ.ಎ( ಯು.ಎಸ್.ಎ,-1982), ಎಫ್.ಸಿ.ಸಿ.ಪಿ (1983) ಯನ್ನು ಯು.ಎಸ್.ಎ ಯಲ್ಲಿ ಪಡೆದಿರುತ್ತಾರೆ. ಕನ್ನಡದಲ್ಲಿ ವೈದ್ಯಶಾಸ್ತ್ರದ ಬೆಳವಣಿಗೆ, ವ್ಯವಸಾಯ, ಮೀನುಗಾರಿಕೆ, ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳು ಅವರ ವಿಶೇಷ ಆಸಕ್ತಿಯಾಗಿದೆ. ಮೈಸೂರಿನ ಎಂ.ಎಂ.ಸಿ ಮತ್ತು ಆರ್. ಐ ಕಾಲೇಜಿನಲ್ಲಿ ವೈದ್ಯಶಾಸ್ತ್ರ ಪ್ರಾಧ್ಯಾಪಕರು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಸಲಹಾ ವೈದ್ಯ ತಜ್ಞರು ಮತ್ತು ಹೃದ್ರೋಗ ತಜ್ಞರು, ಆರೋಗ್ಯ ಯೋಗ ವೈದ್ಯಕೀಯ ಸಲಹಾ ಕೇಂದ್ರ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ...

READ MORE

Related Books