ನರಮಂಡಲ ಬ್ರಹ್ಮಾಂಡ

Author : ನಾಗೇಶ ಹೆಗಡೆ

Pages 134

₹ 120.00




Year of Publication: 2017
Published by: ಭೂಮಿ ಬುಕ್ಸ್
Address: 150, ಮೊದಲ ಮುಖ್ಯ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-560020
Phone: 9449177628

Synopsys

‘ನರಮಂಡಲ ಬ್ರಹ್ಮಾಂಡ’ ಲೇಖಕ ನಾಗೇಶ ಹೆಗಡೆ ಅವರ ಲೇಖನ ಸಂಕಲನ. ಇಲ್ಲಿನ ಬಹುಪಾಲು ಲೇಖನಗಳಿ ರವಿ ಬೆಳಗೆರೆಯವರ ‘ಓ ಮನಸೇ’ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಒಂದು ಬನ್ ಗಾತ್ರದ ಮೂರುಕಾಲು ಕಿಲೋಗ್ರಾಮ್ ಲೋಳೆಮುದ್ದೆಯಂಥ ಈ ಮಿದುಳು ಏನೆಲ್ಲಾ ಚಿಂತನೆ ನಡೆಸುತ್ತದೆ. ಅನಂತ ಆಕಾಶದ ಬಗ್ಗೆ, ಕನಸಿನ ಕನ್ಯೆಯ ಬಗ್ಗೆ, ಕೊನೆಯಿಲ್ಲದ ವಿಶ್ವದ ಬಗ್ಗೆ ಕಲ್ಪನೆಗಳನ್ನು ಮಥಿಸುತ್ತದೆ. ಈ ಮಿದುಳಿನ ಅಂತರಾಳದಲ್ಲಿ ಏನಿದೆ. ಕೇವಲ ಪರಮಾಣುಗಳು. ಶತಕೋಟಿ ವರ್ಷಗಳ ಹಿಂದೆ ಕೋಟ್ಯಾಂತರ ತಾರೆಗಳ ಉದರದಲ್ಲಿ ಉತ್ಪತ್ತಿಯಾದ ಪರಮಾಣುಗಳೇ ಅಂತರಿಕ್ಷದಲ್ಲಿ ಅಲೆಯುತ್ತ ಲಕ್ಷಾಂತರ ಕೋಟಿ ಕಿಲೋಮೀಟರ್ ಚಲಿಸುತ್ತ, ಭೂಮಿಯಲ್ಲಿ ಕೋಟಿಗಟ್ಟಲೆ ಜೀವಿಗಳ ಮೂಲಕ ಹೊಕ್ಕು ಹೊರಟು ಅದೃಷ್ಟವೆಂಬಂತೆ ನಮ್ಮೊಳಗೆ ನಿಮ್ಮೊಳಗೆ ಬಂದು ಕೂತಿವೆ. ತಮ್ಮದೇ ತವರೂರಾದ ತಾರಾಲೋಕದ ಬಗೆಗೆ ಚಿಂತನೆ ನಡೆಸುತ್ತವೆ. ಹಾಗೆ ಚಿಂತನೆ ನಡೆಸುವ ಶಕ್ತಿ ತಮಗೆ ಹೇಗೆ ಬಂತೆಂದು ಅದರ ಮೂಲವನ್ನೂವ ಶೋಧಿಸಲು ಹೆಣಗುತ್ತಿವೆ.

ಇಂಥಾ ಸೂಕ್ಷ್ಮ ವಿಚಾರಗಳ ಕುರಿತು ನಾಗೇಶ ಹೆಗಡೆ ಅವರು ತಮ್ಮ ಲೇಖನಗಳ ಮೂಲಕ ಬೆಳಕು ಚೆಲ್ಲಿದ್ದಾರೆ. ದೇವರ ದರ್ಶನಕ್ಕೆ ಹೆಲ್ಮೆಟ್, ರತಿ ರಂಗೋಲಿಗೆ ಎಷ್ಟೊಂದು ರಂಗುಗಳು, ಕರುಳಿನ ಕರೆ ಅದೆಷ್ಟು ಖರೆ ಈ ಹೆಸರುಗಳೇ ಒಂದು ರೀತಿಯ ಕೌತುಕ. ಸೈನ್ಸ್ ಜರ್ನಲ್ ಗಳಲ್ಲೋ ಮನೋ ವಿಜ್ಞಾನಿಗಳ ಲ್ಯಾಬ್ ಗಳಲ್ಲೊ ಚರ್ಚೆಯಾಗುವ ಕ್ಲಿಷ್ಟ ಮಾಹಿತಿಗಳನ್ನು ಯಾರಿಗೂ ಅರ್ಥವಾಗುವಂತೆ, ಆಕರ್ಷಕ ಆಸಕ್ತಿಕಾರಕವಾಗಿ ಬರೆದಿರುವುದು ನಾಗೇಶ ಹೆಗಡೆಯವರ ಹೆಗ್ಗಳಿಕೆ. ಸಾಹಿತ್ಯ ವಿಜ್ಞಾನಗಳೆರಡನ್ನೂ ತಮ್ಮ ಮನೋಭಾವದಲ್ಲಿ ಒಂದಾಗಿಸಿಕೊಂಡ ಅವರು ವಿಜ್ಞಾನ ಲೇಖಕರಿಗೆ ಮಾದರಿ. ಪುಸ್ತಕದ ಭಾಷೆಯಲ್ಲಿ ಹೇಳಬೇಕೆಂದರೆ ‘ಬಲ ಮಿದುಳು- ಎಡ ಮಿದುಳು ಎರಡೂ ಚೆನ್ನಾಗಿ ವಿಕಾಸಗೊಂಡು ಅದು ಸರಿಯಾಗಿ ಬಳಕೆಯಾದ ಮಾದರಿ ಇಲ್ಲಿದೆ.

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books